ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಿಂದ ರೈತರಿಗೆ ಹತ್ತು ಹಲವಾರು ಹೊಸ ಹೊಸ ಯೋಜನೆಗಳು ರಾಜ್ಯ -ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಇಲಾಖೆಯಿಂದ ಎಲ್ಲಾ ಯೋಜನೆಗಳು ರೈತರಿಗೆ ಸಹಾಯಧನದಲ್ಲಿ ಸಿಗುವ ಯೋಜನೆಗಳಾಗಿವೆ. ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ರಾಗಿ ಕ್ಲೀನಿಂಗ್ ಮಶಿನ್ ಮೋಟಾರ ಚಾಲಿತ ಮಿನಿ ಎಣ್ಣೆ ಗಾಣ, ಕಬ್ಬಿನ ಹಾಲು ತೆಗೆಯುವ ಯಂತ್ರ, ಪಲ್ವರೈಜರ್, ಬೆಳೆ ಮಾಡುವ ಮತ್ತು ಸಂಸ್ಕರಣೆ ಯಂತ್ರಗಳನ್ನು ವಿತರಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ
ಸಹಾಯಧನ ವಿವರ:
ಅರ್ಹ ಫಲಾನುಭವಿ ಸಾಮಾನ್ಯ ವರ್ಗದ ರೈತರಿಗೆ ಶೇ.50% ಸಹಾಯಧನ ಮತ್ತು ಪ.ಜಾ. ಹಾಗೂ ಪ.ಪಂ.ದವರಿಗೆ ಶೇ.90% ಸಹಾಯಧನದಲ್ಲಿ ಯಂತ್ರಗಳನ್ನು ಪಡೆಯಬಹುದು.
ಒದಗಿಸಬೇಕಾದ ಅಗತ್ಯ ದಾಖಲೆಗಳು ಹೀಗಿವೆ :
- ಅರ್ಜಿದಾರರ ಫೋಟೊ
- ಆಧಾರ ಕಾರ್ಡ ಪ್ರತಿ
- ಪಹಣಿ/ಉತ್ತಾರ/ RTC
- ಬ್ಯಾಂಕ್ ಪಾಸ್ ಬುಕ್ ಪ್ರತಿ
- 20ರೂ. ಬೆಲೆಯ ಬಾಂಡ್ ಪೇಪರ್
90% ಸಹಾಯಧನದಲ್ಲಿ ತುಂತುರು/ಸ್ಪ್ರಿಂಕ್ಲರ್ ನೀರಾವರಿ ಘಟಕ
ಬೇಸಿಗೆ ಸಮಯದಲ್ಲಿ ಅಥವಾ ಬೆಳೆಗಳಿಗೆ ಸಂದಿಗ್ದ ಪರಿಸ್ಥಿತಿಯಲ್ಲಿ ಕಡಿಮೆ ಸಮಯದಲ್ಲಿ ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ರೈತರು ಈ ತುಂತುರು ನೀರಾವರಿ/ಸ್ಪ್ರಿಂಕ್ಲರ್ ಗಳನ್ನು ಬಳಸಿ ಬೆಳೆಗಳಿಗೆ ನೀರಾವರಿ ವ್ಯಸ್ಥೆಯನ್ನು ಮಾಡಬಹುದು ಈ ಪರಿಕರಗಳನ್ನು ಖರೀದಿಸಲು ರೈತರಿಗೆ ಅನುಕೂಲ ಮಾಡುವ ದೆಸೆಯಲ್ಲಿ ಸರಕಾರದಿಂದ ಶೇ.90% ರಿಯಾಯಿತಿ ದರದಲ್ಲಿ ಅರ್ಹ ಫಲಾನುಭವಿ ರೈತರಿಗೆ ತುಂತುರು ನೀರಾವರಿ/ಸ್ಪ್ರೀಂಕ್ಲರ್ ಘಟಕವನ್ನು ವಿತರಿಸಲಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ಇಲಾಖೆಯಿಂದ ತುಂತುರು/ಸ್ಪ್ರಿಂಕ್ಲರ್ ಘಟಕವನ್ನು ನೀಡಲು ಈಗಾಗಲೇ ಅರರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ರೈತರು ನಿಮ್ಮಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ, ಅರ್ಜಿದಾರರ ಫೋಟೋ, ಆಧಾರ್ ಕಾರ್ಡ ಪ್ರತಿ, ಪಹಣಿ/ಉತ್ತಾರ/ RTC, ಬ್ಯಾಂಕ್ ಪಾಸ್ ಬುಕ್ ಪ್ರತಿ, 20ರೂ. ಬೆಲೆಯ ಬಾಂಡ್ ಪೇಪರ್ ನೀರಾವರಿ ಮೂಲ ಪ್ರಮಾಣ ಪತ್ರ ೀ ಎಲ್ಲ ದಾಖಲಾತಿವದಗಿಸಿ ಅರ್ಜಿ ಸಲ್ಲಿಸಿ.
ಅನುಷ್ಟಾನ ವಿಧಾನ
ರೈತರು ಅರ್ಜಿ ಸಲ್ಲಿಸಿದ ನಂತರ ಸೀನಿಯಾರಿಟಿ ಆಧಾರದ ಮೇಲೆ ಉಪಕರಣಗಳನ್ನು ಒದಗಿಸಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದ ನಂತರ ಕೃಷಿ ಇಲಾಖೆ ಅಧಿಕಾರಿಗಳು ನಿಮ್ಮ ಅರ್ಜಿ ಪರಿಶೀಲಿ ನಿಮಗೆ ರೈತರ ವಂತಿಗೆಯನ್ನು ಯಂತ್ರ/ಪರಿಕರ ವಿತರಣೆ ಮಾಡುವ ಕಂಪನಿಗೆ ನಿಮ್ಮ ಬ್ಯಾಂಕ್ ಖಾತೆಯಿಂದ RTGS ಮಾಡುವ ಮೂಲಕ ಹಣವನ್ನು ಕಳುಹಿಸಿ ನೀವು ಉಪಕರಣಗಳನ್ನು ಪಡೆಯಬಹುದು.
ಗಮನಿಸಿ ವಿಶೇಷ ಸೂಚನೆ:
ರೈತರು ಅರ್ಜಿ ಸಲ್ಲಿಸಿದ ನಂತರ ಸೀನಿಯಾರಿಟಿ ಆಧಾರದ ಮೇಲೆ ರೈತರಿಗೆ ಉಪಕರಣಗಳನ್ನು ನೀಡಲಾಗುವುದು.. ಜೊತೆಗೆ ಆನುದಾನ ಲಭ್ಯತೆ ಅಧಾರದಮೇಲೆ ಈ ಮೇಲಿನ ಪರಿಕರ/ಯಂತ್ರಗಳನ್ನು ಕೃಷಿ ಇಲಾಖೆಯಿಂದ ವಿತರಿಸಲಾಗುತ್ತದೆ. ರೈತರು ಒಮ್ಮೆ ಖರೀದಿಸಿದ ಪರಿಕರವನ್ನು ಪುನಃ ಸಹಾಯಧನದಲ್ಲಿ ಖರೀದಿಸಲು 7 ವರ್ಷದ ನಂತರ ಅರ್ಜಿ ಸಲ್ಲಿಸಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ:
ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.