ರೈತ ಬಾಂದವರೇ ನಾವು ಜಮೀನಿಗಳಿಗೆ ಸಂಭಂಧಿಸಿದಂತೆ ಬಹಳ ಮಾಹಿತಿ ಕೊರತೆಯಿಂದ ನಾವು ತಾತ, ಅಜ್ಜಿ,ಮತ್ತು ತಂದೆ ಆಸ್ತಿಯನ್ನು ಕಳೆದುಕೊಳ್ಳುವುದು ಮತ್ತು ಇರುವ ಭೂಮಿಯನ್ನು ಭವಿಷ್ಯದಲ್ಲಿ ಕಡಿಮೆ ಯಾಗಿರುವುದನ್ನು ನೋಡಿರುತ್ತೆವೆ. ಹಾಗಾಗಿ ಆಸ್ತಿಗೆ ಸಂಭಂದಿಸಿದ ಮಾಹಿತಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಪಹಣಿಯನ್ನು ಒಮ್ಮೆ ಸರಿಯಾಗಿ ನೋಡಿಕೋಳ್ಳಿ ಮತ್ತೆ ಯಾವ ಕಾಲಂ ನಲ್ಲಿ ಯಾವ ವಿಷಯಕ್ಕೆ ಸಂಭಂದಿಸಿದ ಮಾಹಿತಿ ಇದೆ ಅಂತ ಅರಿತಿರಬೇಕು.
ಇದನ್ನೂ ಓದಿ: ಪೋಡಿ ಎಂದರೇನು?ಜಮೀನಿನ ಪೋಡಿ ಹೇಗೇ ಮಾಡಿಸುವುದು? ಉಪಯೋಗಗಳೇನು?
ಸಾಮಾನ್ಯವಾಗಿ ಬಹುತೇಕ ರೈತರು ಸ್ವಲ್ಪವಾದರೂ ಖರಾಬು ಭೂಮಿ ಹೊಂದಿರುತ್ತಾರೆ ಕೃಷಿ ಯೋಗ್ಯವಲ್ಲದ ಇಂತಹ ಭೂಮಿಯನ್ನು ಕಾನೂನುರಿತ್ಯಾ ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವುದು ಹೇಗೆ? ಅದಕ್ಕಿರುವ ನಿಯಮಗಳೇನು? ಇಷ್ಟಕ್ಕೂ ಖರಾಬು ಭೂಮಿ ಎಂದರೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ಖರಾಬು ಭೂಮಿ ಎಂದರೆ ತ್ಯಾಜ್ಯ ಭೂಮಿ ಅಥವಾ ಬಂಜರು ಭೂಮಿ ಎಂದರ್ಥ, ಭಾರತ ಪಾಕಿಸ್ತಾನ ಮತ್ತು ಇತರ ಕೆಲವು ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೃಷಿಗೆ ಸೂಕ್ತವಲ್ಲದ ಭೂಮಿಯನ್ನು ಉಲ್ಲೇಖಿಸಲು ಈ ಪದ ಬಳಸಲಾಗುತ್ತದೆ. ಇಂತಹ ಖಾರಾಬು ಭೂಮಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ನಗರ ಪ್ರದೇಶಗಳ್ಲಲಿ ಇದು ತುಂಬಾ ಕಡಿದಾದ ಅಥವಾ ಅಭಿವೃದ್ಧಿಗೆ ಪೂರಕವಾಗಿರದ ಭೂಮಿಯಾಗಿರುತ್ತದೆ. ಗ್ರಾಮೀಣ ಪ್ರದೇಶಗಲ್ಲಿ ಇದು ತುಂಬಾ ಕಲ್ಲು-ಮರಳಿನ, ಹಳ್ಳ ಕೊಳ್ಳ ದಿಣ್ಣೆ, ನೀರಿನ ಮೂಲ ಹರಿದು ಹೋಗುವ ಅಥವಾ ಕೃಷಿಗೆ ಯೋಗ್ಯವಲ್ಲದ ಜವುಗು ಪ್ರದೇಶವಾಗಿರುತ್ತದೆ.
ಇದನ್ನೂ ಓದಿ: ಹೊಲದ ಹದಬಸ್ತು ಮಾಡುವ ವಿಧಾನ, ಅರ್ಜಿ ಸಲ್ಲಿಸುವುದು ಎಲ್ಲಿ? ಅದರ ಉಪಯೋಗ ಏನು?
ಭಾರತ ಸರ್ಕಾರವು ಖರಾಬು ಭೂಮಿಯನ್ನು ಕೃಷಿ ಯೋಗ್ಯವಲ್ಲದ ಮತ್ತು ಯಾವುದೇ ಕೃಷಿ ಉದ್ದೇಶಕ್ಕಾಗಿ ಬಳಸಲಾಗದ ಭೂಮಿ ಎಂದು ವ್ಯಾಖ್ಯಾನಿಸಿದೆ.ಭಾರತೀಯ ಕಾನೂನಿನ ಪ್ರಕಾರ ಖರಾಬು ಭೂಮಿಯನ್ನು ಯಾರಿಗೂ ಮಾರುವಂತಿಲ್ಲ. ಅಥವಾ ವರ್ಗಾಯಿಸುವಂತಿಲ್ಲ ಇದನ್ನು ಸಾಮಾನ್ಯವಾಗಿ ಸಾರ್ವಜನಿಕ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರ ಬಳಕೆಯನ್ನು ಸರ್ಕಾರವು ನಿಯಂತ್ರಿಸುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಗಣಿಗಾರಿಕೆ ಅಥವಾ ಕೈಗಾರಿಕಾ ಅಭಿವೃದ್ಧಿಯಂತಹ ಕೃಷಿಯೇತರ ಉದ್ದೇಶಗಳಿಗಾಗಿ ಇದನ್ನು ಬಳಸಬಹುದು. ಜತೆಗೆ ಭೂಸುಧಾರಣಾ ಯೋಜನೆಗಳು ಅಥವಾ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕೃಷಿ ಯೋಗ್ಯ ಭೂಮಿಯಾಗಿಯೂ ಪರಿವರ್ತಿಸಬಹುದು.
ಇಲ್ಲಿ ಖಾರಾಬು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವ ಕ್ರಮಗಳ ಬಗ್ಗೆ ತಿಳಿಯೋಣ
ಏನಿದು ಖಾರಾಬು ಭೂಮಿ?
ಇದನ್ನೂ ಓದಿ: ಮಹಿಳೆಯರು ತಂದೆ ಆಸ್ತಿಯಲ್ಲಿ ಪಾಲು ಕೇಳಲು ಯವ ಪರಿಸ್ಥಿತಿಯಲ್ಲಿ ಬರುವುದಿಲ್ಲ?
ಮೊದಲೆ ಹೇಳಿದಂತೆ ಗ್ರಾಮೀಣ ಪ್ರದೇಸದಲ್ಲಿ ಕಂಡುಬರುವ ಖರಾಬು ಜಮೀನು ಎಂದರೆ ಕೃಷಿ ಮಾಡಲು ಯೋಗ್ಯವಲ್ಲದ ಭೂಮಿ ಎಂದರ್ಥ ಅಲ್ಲಿ ರಸ್ತೆ, ಹಳ್ಳ, ಕೆರೆ-ಕಾಲುವೆ, ನದಿ, ಇತ್ಯಾದಿ ಹಾಯ್ದು ಹೋಗಿರಬಹುದು ಆ ಪ್ರದೇಶದಲ್ಲಿ ಕುರುಚಲು ಕಾಡು ಬೆಳೆದಿರಬಹುದು. ಕಲ್ಲಿನಿಂದ ಆವ್ರತವಾದ ಕೊರಕಲು ಪ್ರದೇಶ ನಿರ್ಮಾಣಯವಾಗಿರುತ್ತದೆ. ಒಟ್ಟಿನಲ್ಲಿ ಸಾಗುವಳಿಗೆ ಯೋಗ್ಯವಲ್ಲದ ಕೃಷಿಗೆ ಪೂರಕವಾದ ವಾತಾವರಣ ಹೊಂದಿರದ ಭೂಮಿಯೇ ಖರಾಬು ಭೂಮಿ.
ಇದನ್ನೂ ಓದಿ: ದಾನಪತ್ರ ಎಂದರೇನು?ಹೇಗೇ ಬರೆಯಬೇಕು, ಬೇಕಾಗುವ ದಾಖಲೆಗಳೇನು?
ಗಮನಾರ್ಹವೆಂದರೆ ಕೆಲವು ಸಂದರ್ಭದಲ್ಲಿ ಕೃಷಿ ಮಾಡಲು ಪೂರಕವಾಗಿದ್ದರೂ ಕೂಡ ಕಲವು ಭೂಮಿಗಳನ್ನು ಖರಾಬು ಜಮೀನು ಎಂದೇ ಪರಿಗಣಿಸಲಾಗುತ್ತದೆ. ಅಂದರೆ ಸಮತಟ್ಟಾದ ಕಾಲುದಾರಿ, ಬಂಡಿದಾರಿ, ಗೋಮಾಳ ಪ್ರದೇಶದಂತಹ ಸಾರ್ವಜನಿಕ ಬಳಕೆಯ ಭೂಮಿಯನ್ನೂ ಕೂಡ ಖರಾಬು ಭೂಮಿ ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಖರಾಬು ಭೂಮಿಯನ್ನು ಅ ಖರಾಬು (A Kharab)ಮತ್ತು ಬ ಖರಾಬು (B Kharab) ಎಂದು ವಿಂಗಡಿಸಲಾಗಿದೆ.
ಅ ಖರಾಬು ಪರಿವರ್ತನ ಮಾಡುವುದು ಹೇಗೆ?
ಸಾಮಾನ್ಯವಾಗಿ ಅ ಖರಾಬು ಪ್ರದೇಶ ಸಾರ್ವಜನಿಕವಲ್ಲದ ರೈತರಿಗೆ ಮೀಸಲಾದ ಭೂಮಿಯಾಗಿರುತ್ತದೆ. ಆದರೆ ಕೃಷಿ ಮಾಡಲು ಯೋಗ್ಯವಾಗಿರುವುದಿಲ್ಲ. ಮೇಲೆ ಹೇಳಿದಂತೆ ಈ ಭಾಗದಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡದೇ ಕುರುಚಲು ಕಾಡು ಬೆಳೆದಿರಬಹುದು, ಕಣಕಟ್ಟೆಗೆಂದು ಬೀಳು ಬಿಟ್ಟಿರಬಹುದು, ಯಾವುದಾದರೂ ನೀರಿನ ಮೂಲ ಸೃಷ್ಟಿಯಾಗಿರಬಹುದು ಅಥವಾ ಸಾಗುವಳಿಗೆ ಇಕ್ಕಟ್ಟಾದ ವಿಸ್ತೀರ್ಣ ಹೊಂದಿರಬಹುದು. ಈ ರೀತಿಯ ಕೃಷಿ ಯೋಗ್ಯವಲ್ಲದ ಖಾಸಗೀ ಜಮೀನನ್ನು ಅ ಖಾರಾಬು ಎಂದು ಕರೆಯಲಾಗುತ್ತದೆ.
ಇಂತಹ ಅ ಖಾರಾಬು ಜಮೀನಿಗೆ ಸರಕಾರ ಕಂದಾಯ ವಸೂಲಿ ಮಾಡುಲಾಗುವುದಿಲ್ಲ. ಆದರೆ ಈ ಭಾಗದ ವಿವರವನ್ನು ಪ್ರತ್ಯೇಕವಾಗಿ ಗುರುತಿಸಿ ಲೆಕ್ಕ ಹಾಕಿ ಅದರ ವಿಸ್ತೀರ್ಣವನ್ನು ಪಹಣೀಯ ಕಾಲಂ 3ರಲ್ಲಿ ದಾಖಲಿಸಲಾಗಿರುತ್ತದೆ. ಅದರ ಕೆಳ ಭಾಗದಲ್ಲಿ ಅ ಮತ್ತು ಬ ಖರಾಬಿನ ವಿಸ್ತೀರ್ಣ ನಮೂದಿಸಲಾಗಿರುತ್ತದೆ. ರೈತರು ಅದನ್ನು ತಮಗೆ ಬೇಕೆನಿಸಿದರೆ ಸಾಗುವಳಿ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳಬಹುದು. ಅಥವಾ ಯೋಗ್ಯ ಪರಿಹಾರ ಪಡೆದು ಸಾರ್ವಜನಿಕ ಭೂಮಿಯನ್ನಾಗಿಯೂ ಬಿಟ್ಟು ಕೊಡಬಹುದು. ಹಾಗಾದರೆ ಅ ಖರಾಬು ಎಂದು ಪರಿಗಣಿಸಲ್ಪಟ್ಟಿರುವ ಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಮಾಡುವುದು ಹೇಗೆ?
ಸಂಬಂಧಿಸಿದ ಭೂ ದಾಖಲೆಗಳಾದ ಪಹಣಿ, ಆಕಾರಬಂದ, ಟಿಪ್ಪಣಿ ದೃಢೀಕರಣ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳೊಂದಿಗೆ ನಿಮ್ಮ ಅಖರಾಬು ಭೂಮಿಯ ವಿವರ ಹಾಗೂ ಅದನ್ನು ವ್ಯವಸಾಯ ಯೋಗ್ಯವಾಗಿ ಮರುಬಳಕಕೆ ಮಾಡಿಕೊಳ್ಳೂವ ಮಾಹಿತಿವುಳ್ಳ ಅರ್ಜಿ ಬರೆದು ತಾಲೂಕಿನ ತಹಶಿಲ್ದಾರಗೆ ಸಲ್ಲಿಸಬೇಕು. ನಂತರ ಭೂಕಂದಾಯ ನಿಯಮಗಳ ಪ್ರಕಾರ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಎಲ್ಲಾ ದಾಖಲಾತಿ ಸರಿ ಇದ್ದರೆ ಸಾಗುವಳಿ ಭೂಮಿಯನ್ನಾಗಿ ಪರಿವರ್ತನೆ ಮಾಡುತ್ತಾರೆ.
ಆದರೆ ಇದಕ್ಕೆ ಕೆಲವು ನಿಯಮಗಳಿವೆ.. ಅವುಗಳೆಂದರೆ ನೀವು ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಇಚ್ಚಿಸಿರುವ ಭೂಮಿಯೂ ಹಳ್ಳಕೊಳ್ಳಗಳಿಲ್ಲದ ಕೊರಕಲು ಪ್ರದೇಶವಾಗಿರಬಾರದು. ಸರಕಾರದ ಅನುಮತಿಯೊಂದಿಗೆ ಸ್ವತಃ ನೀವೆ ಈ ಪ್ರದೇಶವನ್ನು ಹಲವು ವರ್ಷಗಳ ಕಾಲ ಬಳಸುತ್ತಿರಬೇಕು. ಬಹುಮುಖ್ಯವಾಗಿ ಈ ಖರಾಬು ಪ್ರದೇಶದ ಮೇಲೆ ನೆರೆಹೊರೆಯವರ ತಕರಾರು ಇರಲೇ ಬಾರದು. ಅಥವಾ ಸಾರ್ವಜನಿಕ ತಗಾದೆ ಕೂಡ ಇರಕೂಡದು. ಹೀಗಿದ್ದು ಭೂ ಕಂದಾಯನಿಯಮಗಳನ್ನು ಮೀರದಂತಿದ್ದರೆ ಸರ್ಕಾರ ನಿಗದಿತ ಕಂದಾಯ ಪಾವತಿಸಿ ಸದರಿ ಅ ಖಾರಾಬನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳಬಹುದು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಹತ್ತಿರ ನಾಡ ಕಛೇರಿ ಮತ್ತು ಕಂದಾಯ ನೀರಿಕ್ಷಕರನ್ನು ಸಂರ್ಪಕಿಸಿ ಮಾಹಿತಿ ಪಡೆದುಕೋಳ್ಳಿ.