Monday, January 20, 2025

ದಾನಪತ್ರ ಎಂದರೆ ಏನು? ಹೇಗೇ ಬರೆಯಬೇಕು , ಬೇಕಾಗುವ ದಾಖಲೆಗಳೇನು?

ನಮಸ್ತೆ, ರೈತ ಬಾಂದವರೇ ಕಂದಾಯ ಇಲಾಖೆಯಿಂದ ಯಾವ ಯಾವ ಕೆಲಸಗಳು ಆಗುತ್ತೆ ನಮ್ಮ ಆಸ್ತಿಗೆ ಸಂಬಂಧಿಸಿದಂತೆ ಬಗ್ಗೆ ತಳಿಯಲೇಬೇಕು ಅದರಲ್ಲೂ,ಮುಖ್ಯವಾಗಿ ದಾನಪತ್ರ ಬಗ್ಗೆ ತಿಳಿಯೋಣ ,ಜಮೀನಿಗೆ ಆಸ್ತಿ ದಾಖಲೆಗೆ ಸಂಭಂದಿಸಿದಂತೆ ದಾನ ಪತ್ರ ಎಂದರೇನು? ಹೇಗೇ ಮಾಡಿಸುವುದು? ದಾಖಲೆಗಳೇನು?ಬರೆಸುವುದು ಹೇಗೆ?


ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿ ಅಂದರೆ ಅದು ಸ್ಥಿರಾಸ್ತಿಯಾಗಲಿ ಅಥವಾ ಚರಾಸ್ತಿಯಾಗಲಿ ಅದನ್ನು ತಮ್ಮ ಇಷ್ಟ ಬಂದ ವ್ಯಕ್ತಿಗೆ ಪುಕ್ಕಟೆಯಾಗಿ ಹಕ್ಕು ವರ್ಗಾವಣೆ ಮೂಲಕ ನೀಡುವುದನ್ನು ದಾನ ಎಂದು ಕರೆಯುತ್ತಾರೆ.ಬಾಯಿಮಾತಿನಲ್ಲಿ ದಾನವಾಗಿ ಕೊಟ್ಟಿದ್ದೇನೆ ಎಂದರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ಅದರಿಂದ ಮುಂದೆ ತೊಂದರೆಯಾಗಬಹುದು. ಈ ಕಾರಣಕ್ಕಾಗಿ ದಾನ ಪತ್ರ ಬರೆಯಿಸಿ ನೋಂದಣಿ ಕಛೇರಿಯಲ್ಲಿ ನೋಂದಣಿ ಮಾಡಿಸಿದರೆ ಮಾತ್ರ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರುತ್ತದೆ.

ದಾನಪತ್ರ ಬರೆಯುವುದು ಹೇಗೆ??


ಪಾರ್ಟಿ ನಂ-1 : ದಾನ ಕೊಡುವವರ ಹೆಸರು,
ಪಾರ್ಟಿ ನಂ-2: ದಾನ ಪಡೆಯುವವರ ಹೆಸರನ್ನು ಬರೆದು ದಾನ ಮಾಡುವವರ ಆಸ್ತಿಯ ಸಂಕ್ಷಿಪ್ತ ವರದಿಯನ್ನು ಮುದ್ರಿಸಬೇಕಾಗುತ್ತದೆ.

ಉದಾ: ಸನ್ 2023 ನೇ ಇಸವಿ, ಜನೆವರಿ ಮಾಹೆ, ತಾರಿಖು 15 ರಂದು ಪಾರ್ಟಿ ನಂ: 1″ X,” ಪಾರ್ಟಿ ನಂ; 2″ Y “ಇದ್ದು,ಈ ದಾನ ಪತ್ರ ಬರೆದ ಉದ್ದೇಶವೇನೆಂದರೆ 1 ನೇ ಪಾರ್ಟಿಯವನಾದ ನಾನು (ವಯಸ್ಸು ) ಆ ಗ್ರಾಮದ ನಿವಾಸಿಯಾಗಿದ್ದು, ಸದರಿ ಗ್ರಾಮದಲ್ಲಿ ಒಂದು ಎಕರೆ ಜಮೀನನ್ನು ನನ್ನ ಸ್ವಯಾರ್ಜಿತ ಜಮೀನು ಇದ್ದಿರುತ್ತದೆ.
ಈ ಕೆಳಗಿನ ಶೆಡ್ಯೂಲ್ ನಲ್ಲಿ ಕಂಡಂತಹ ಆಸ್ತಿಯನ್ನು ನಾನು ಎರಡೆನೇ ಪಾರ್ಟಿಯಾದ ” Y ” ಇವರಿಗೆ ಸ್ವ ಮನಸ್ಸಿನಿಂದ ದಾನವಾಗಿ ಕೊಟ್ಟಿರುತ್ತೇನೆ.ಇನ್ನು ಮುಂದೆ ಶೆಡ್ಯೂಲ್ ನಲ್ಲಿ ಕಂಡಂತಹ ಆಸ್ತಿಗೆ ಅವರೇ ಹಕ್ಕುದಾರರು ಆಗುತ್ತಾರೆ.ಮತ್ತು ಸದರಿ ಸ್ವತ್ತುಗಳ ಕಂದಾಯ ವಸೂಲಿ ಅಥವಾ ಇನ್ನಿತರ ತೆರಿಗೆಗಳನ್ನು ಪಾರ್ಟಿ ನಂ; 2″ Y “ನಿಂದಲೇ ವಸೂಲಿ ಮಾಡತಕ್ಕದ್ದು.
ಈ ರೀತಿಯಾಗಿ ದಾನ ಕೊಡುವವರು ಸಂಕ್ಷಿಪ್ತವಾಗಿ ಅವರ ಆಸ್ತಿ ವಿವರಣೆ ಕೊಡಬೇಕು.

ಶೆಡ್ಯೂಲ್ ನ ವಿವರಣೆ:


1 ಮತ್ತು 2 ನ್ನು ಕ್ರಮಬದ್ದವಾಗಿ ಅ, ಆ ಎಂದು ತಿಳಿದುಕೊಳ್ಳುವುದು.

ಅ ಶೆಡ್ಯೂಲ್: 1 ನೇ ಪಾರ್ಟಿ X ಅವರ ಸ್ವಯಾರ್ಜಿತ ಸ್ವತಿನ ವಿವರ. ಅಂದರೆ ಯಾವ ಗ್ರಾಮದಲ್ಲಿ ಯಾವ ಸರ್ವೆ ನಂಬರಿನಲ್ಲಿರುವ ಎಷ್ಟು ವಿಸ್ತೀರ್ಣ ಹೊಂದಿರುತ್ತಾರೆ. ಮುಖ್ಯವಾಗಿ ದಾನ ಮಾಡಬೇಕೇಂದಿರುವ ಜಮೀನಿನ ಸುತ್ತಮುತ್ತಲಿರುವ ಚಕ್ಕಬಂದಿ ( ಸರ್ವೆ ನಕಾಶೆ ಪ್ರಕಾರ )ವಿವರವನ್ನು ವಿಸ್ತರಿಸಿ ಬರೆಯಬೇಕು.

ಆ ಶೆಡ್ಯೂಲ್ : 2 ನೇ ಪಾರ್ಟಿ Y ಅವರ ಆಸ್ತಿಯ ವಿವರ ಅಂದರೆ ದಾನ ಪಡೆದುಕೊಳ್ಳುವವರ ಆಸ್ತಿಯ ವಿವರಣೆ ದಾನಪತ್ರದ ಪ್ರಕಾರ ಗ್ರಾಮ, ಸರ್ವೆ ನಂ, ವಿಸ್ತಿರ್ಣ ಮತ್ತು ಚೆಕ್ಕುಬಂದಿ ( ಸರ್ವೆ ನಕಾಶೆ ಪ್ರಕಾರ ) ವಿವರವನ್ನು ಸಂಕ್ಷಿಪ್ತವಾಗಿ ಬರೆಯಬೇಕು.

ಈ ದಸ್ತಾವೇಜು 2 ಹಾಳೆಗಳ ಮೇಲೇ ಮುದ್ರಿಸಿ ಮುದ್ರಾಂಕದ ಶುಲ್ಕವನ್ನು ಬರೆಯಬೇಕು. ದಾನ ಮಾಡುವವರ ಹಾಗೂ ದಾನ ಮಾಡಿಸಿಕೊಳ್ಳುವವರ ಹೆಸರು ಬರೆಯಿಸಿ ಸಹಿ ಮಾಡಿಸಿಕೊಳ್ಳುಬೇಕು. ಜೊತೆಗೆ ಸಾಕ್ಷಿಗಳ ಸಹಿಗಳನ್ನು ಮಾಡಿಸಿಕೊಳ್ಳಬೇಕು.
ಹೀಗೇ ದಾನಪತ್ರವನ್ನು ಬರೆಸಿಕೊಂಡು ವಕೀಲರಿಂದ ನೋಟರಿ ಮಾಡಿಸಿಕೊಂಡು ದಾನ ಮಾಡುವವರು ಮತ್ತು ದಾನ ತೆಗೆದುಕೊಳ್ಳುವವರು, ಸಾಕ್ಷದಾರರು ಎಲ್ಲರೂ ಸೇರಿ ಉಪನೋಂದಣಿ ಕಚೇರಿಗೆ ಭೇಟಿ ನೀಡಿ ಎಲ್ಲಾ ದಾಖಲೆಗಳನ್ನು ನೀಡಿ, ದಾನ ಪತ್ರ ನೋಂದಣಿ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: ಹೊಲದ ಹದಬಸ್ತು, ಮಾಡುವ ವಿಧಾನ, ಅರ್ಜಿ ಸಲ್ಲಿಸುವುದು ಎಲ್ಲಿ? ಅದರ ಉಪಯೋಗವೇನು?

ದಾನ ಪತ್ರದ ಬಹುಮುಖ್ಯ ಅಂಶಗಳು :

  • ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಅಥವಾ ( ಮಾರಾಟ) ಮಾಡಬಹುದು.
  • ಹೊರಗಿನವರು ಅಂದರೆ ರಕ್ತ ಸಂಬಂಧಿಕರಲ್ಲದವರಿಗೆ ಆಸ್ತಿ ದಾನ ನೀಡಲು ಇಚ್ಚಿಸಿದರೆ ಆ ಆಸ್ತಿಯ ಮೌಲ್ಯದ 5 % ರಷ್ಟು ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕು.
  • ಕುಟುಂಬದೊಳಗೆ ದಾನ ಕೊಡಲು ಇಚ್ಚಿಸಿದರೆ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.
  • ದಾನ ಪತ್ರದಲ್ಲಿ ಮುಖ್ಯವಾಗಿ ಸಾಕ್ಷಿದಾರರ ಸಹಿ ಇರಲೇಬೇಕು.
  • ಖಾತಾ ಹಕ್ಕು ಬದಲಾವಣೆ ಪ್ರಕ್ರಿಯೆ ಇದ್ದು, ಸದರಿ ದಾನಪತ್ರ ಪಡೆದು “ಜೆ” ಫಾರ್ಮ ಪಡೆದು ಮ್ಯೂಟೇಶನ್ ಪ್ರಕ್ರಿಯೆಗೆ ಒಳಪಡಲೇಬೇಕು
  • ಬೇಕಾದ ದಾಖಲೆಗಳು ?
  • ದಾನ ಮಾಡಬೇಕೇಂದಿರುವ ವ್ಯಕ್ತಿಯ ಜಮೀನು ಅಥವಾ ಸ್ಥಿರಾಸ್ತಿಯ ಹಕ್ಕು ಪತ್ರ / ಪಹಣಿ ಪತ್ರ
  • ದಾನ ಮಾಡಬೇಕಾದವರ ಹಾಗೂ ದಾನ ಪಡೆಯಬೇಕೇಂದಿರುವ ಆಧಾರ ಕಾರ್ಡ
  • ಕುಟುಂಬ ಸದಸ್ಯರಿಗೆ ದಾನ ಮಾಡಲು ಇಚ್ಚಿಸಿದ್ದರೆ ವಂಶಾವಳಿ ಪತ್ರ
  • ದಸ್ತಾವೇಜು ಬರೆದ ದಾನ ಪತ್ರದ ನೋಟರಿಯವರ ದೃಢೀಕರಣ
  • ರೈತ ಬಾಂದವರೇ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ನಿಮ್ಮ ಊರಿನ ನಾಡ ಕಛೇರಿ ಕೇಂದ್ರ ಅಥವಾ ಕಂದಾಯ ಇಲಾಖೆ ಯನ್ನು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles