2022-23 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಉತ್ತಮ ಗುಣಮಟ್ಟ (FAQ) ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂಟಾಲ್ ಗೆ ರೂ. 2040.00 ಗಳು ಮತ್ತು “ಎ” ಗ್ರೇಡ್ ಭತ್ತವನ್ನು ರೂ.2060.00
ರಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕಾರಾವಾರ ಜಿಲ್ಲಾ ಕೇಂದ್ರದ ಅಡಿಯಲ್ಲಿ ಬರುವ ಎಲ್ಲಾ ತಾಲ್ಲೂಕಾ ಎ.ಪಿ.ಎಂ.ಸಿ ಯಾರ್ಡ್‌ಗಳಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿರುತ್ತದೆ..
ರೈತರಿಂದ ಮಾತ್ರ ಖರೀದಿಸಲಾಗುವುದು.
- ಭತ್ತ ಖರೀದಿಗಾಗಿ ನೋಂದಣಿ ಕಾರ್ಯ ದಿನಾಂಕ 15-12-2022 ರಿಂದ ಪ್ರಾರಂಭ.
- ಭತ್ತ ಖರೀದಿ ಪ್ರಕ್ರಿಯೆಯು ದಿನಾಂಕ 1-01-2023 ರಿಂದ 31-03-2023 ರವರೆಗೆ ಚಾಲ್ತಿಯಲ್ಲಿದ್ದು, ನೋಂದಯಿಸಿದ ರೈತರಿಂದ ಭತ್ತವನ್ನು ಖರೀದಿಲಾಗುವುದು.
- ರೈತರು ನೋಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (Fruits ID) ಸಂಖ್ಯೆಯನ್ನು ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳತಕ್ಕದ್ದು.
- ನೋಂದಣಿ ಮಾಡಿದ ರೈತರು ಕಡ್ಡಾಯವಾಗಿ ಭತ್ತದ ಸ್ಯಾಂಪಲ್ ನ್ನು ಖರೀದಿ ಕೇಂದ್ರಕ್ಕೆ ತಂದು ಗುಣಮಟ್ಟ ಪರೀಕ್ಷೆಗೊಳಪಡಿಸಬೇಕು. ಗುಣಮಟ್ಟ ತೃಪ್ತಕರವಾಗಿದ್ದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದಾಸ್ತಾನನ್ನು ತಂದು
ಖರೀದಿ ಕೇಂದ್ರಕ್ಕೆ ಒಪ್ಪಿಸಬೇಕು. - ಭತ್ತವನ್ನು ನೋಂದಾಯಿಸಿಕೊಂಡ ರೈತರಿಂದ ಮಾತ್ರ ಪ್ರತಿ ಎಕರೆಗೆ 25.00 ಕ್ವಿಂ. ನಂತೆ ಗರಿಷ್ಟ 40.00 ಭತ್ತವನ್ನು ಒಬ್ಬ ರೈತರಿಂದ ಖರೀದಿಲಾಗುವುದು.
- ಖರೀದಿ ಕೇಂದ್ರಕ್ಕೆ ತರುವ ಭತ್ತವು ಸಂಪೂರ್ಣವಾಗಿ ಒಣಗಿದ್ದು ಕ್ರಿಮಿಕೀಟಗಳಿಂದ ಹಾಗೂ ರೋಗದಿಂದ ಮುಕ್ತವಾಗಿರಬೇಕು. ಕೃಷಿ ಇಲಾಖೆಯಿಂದ ನಿಯೋಜಿಸಲ್ಪಟ್ಟ ಗ್ರೇಡರ್ ಗಳು ಪರಿಕ್ಷೀಸಿ ಭತ್ತದ ತಳಿಯ ಹಾಗೂ
ಗುಣಮಟ್ಟವನ್ನು ದೃಢೀಕರಿಸಿದ್ದಲ್ಲಿ ಮಾತ್ರ ಸ್ವೀಕರಿಸಲಾಗುವುದು - ಭತ್ತದ ಗುಣಮಟ್ಟ:ತೇವಾಂಶ -17.%,ಜೊಳ್ಳು-3.0% ,ಇತರೆ ಮಿಶ್ರಣ, ಕಲ್ಲು,ಮಣ್ಣು-2.0% ,ಕೆಳವರ್ಗದ ಮಿಶ್ರಣ -6.0%,ಬಣ್ಣ ಮಾಸಿದ ಮುರಿದ ಮತ್ತು ಹುಳು ಹಿಡಿದ ಕಾಳು -5.0%
- FRUITS ನಲ್ಲಿರುವ ಮಾಹಿತಿ ಆಧಾರ ಕಾರ್ಡ/ಬ್ಯಾಂಕ್ ಪಾಸ್ ಬುಕ್ಗಳೊಂದಿಗೆ ಹೊಂದಾಣಿಕೆಯಾಗದಿದ್ದಲ್ಲಿ,ಭತ್ತ ಬೆಳೆದ ಬಗ್ಗೆ ಸರಿಯಾದ ಮಾಹಿತಿ ನಮೂದಾಗದಿದ್ದಲ್ಲಿ, ಪುನಃ ಬದಲಾವಣೆ ಮಾಡಿಸಿಕೊಂಡು ನೋಂದಣಿ ಮಾಡಿಕೊಳ್ಳುವುದು.
- ಕೃಷಿ ಇಲಾಖೆಯ ಗ್ರೇಡರ್‍ರವರು ಪರಿಶೀಲಿಸಿ,ಗುಣಮಟ್ಟದ ಪ್ರಮಾಣ ಪತ್ರ ನೀಡಿದ ನಂತರ, ಖರೀದಿ ಅಧಿಕಾರಿಯವರು ನಿಗದಿಪಡಿಸಿದ ದಿನಾಂಕದಂದು ಭತ್ತವನ್ನು ಖರೀದಿ ಕೇಂದ್ರಕ್ಕೆ ತರತಕ್ಕದ್ದು.
- ಸ್ವತಃ ರೈತರೇ ಧಾನ್ಯವನ್ನು ತಂದು ಕೊಡಬೇಕು ಬೇರೇಯವರ ಮುಖಾಂತರ ಕಳುಹಿಸತಕ್ಕದ್ದಲ್ಲ.
- 50.ಕೆಜಿ ಸಾಮರ್ಥ್ಯದ ಗೋಣಿ ಚೀಲದಲ್ಲಿ ಭತ್ತವನ್ನು ಪೂರೈಸತಕ್ಕದ್ದು.
- ನಿಗಮ ಖರೀದಿಸುವ ಧಾನ್ಯ ಪ್ರಮಾಣಕ್ಕೆ ಗ್ರೇನ್ ಓಚರ್ ಅನ್ನು ರೈತರಿಗೆ ನೀಡಲಾಗುವುದು.
- ಖರೀದಿ ಕೇಂದ್ರದಲ್ಲಿ ರೈತರು ಯಾವುದೆ ಹಣ ಭರಿಸುವಂತಿಲ್ಲ. ಆದರೆ ಮಾನದಂಡಕ್ಕನುಗುಣವಾಗಿ ಧಾನ್ಯ ಗುಣಮಟ್ಟ ಸರಿ ಇಲ್ಲದಿದ್ದರೆ,ಮರಳಿ ತೆಗೆದುಕೊಂಡು ಹೋಗಬೇಕಾಗಿ ಬಂದರೆ ತಮ್ಮದೇ ಖರ್ಚಿನಲ್ಲಿ ತುಂಬಿಕೊಂಡು ಹೋಗಬೇಕು.
- ಖರೀದಿ/ನೋಂದಣಿ ಕೇಂದ್ರಗಳು ಸರ್ಕಾರದ ರಜಾ ದಿನಗಳನ್ನು ಹೊರತು ಪಡಿಸಿ ಉಳಿದಂತೆ ಬೆಳ್ಳಿಗ್ಗೆ 10-ರಿಂದ 5-30 ರವರೆಗೆ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಮಾವಿಗೆ ಶೀಘ್ರದಲ್ಲಿ ಜಿಐ ಟ್ಯಾಗ್ ಹಿರಿಮೆ ಸಾಧ್ಯತೆ
- ವಿ. ಸೂ: ಇದು ಉತ್ತರ ಕನ್ನಡ ಜಿಲ್ಲೆಗೆ( ದೂರವಾಣಿ ಸಂಖ್ಯೆ; 08382-226243..)ಸಂಬಂದಿಸಿದ ಮಾಹಿತಿ ಆಗಿರುತ್ತದೆ. ಹೀಗೆ ಎಲ್ಲಾ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಸಲಾಗಿರುತ್ತದೆ
- ಹೆಚ್ಚಿನ ಮಾಹಿತಿಗಾಗಿ :
ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕೇಂದ್ರಗಳಿಗೆ ಸಂಪರ್ಕಿಸಿ…. ರೈತ ಬಾಂಧವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಪ್ರಕ್ರಿಯೆಯಲ್ಲಿ ಒಳ್ಳೆಯ ಗುಣಮಟ್ಟದ ಭತ್ತ ನೀಡಿ ಸಹಕರಿಸಲು ಕೋರಲಾಗಿದೆ.