ಮಾವು ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವು ಭಾರತದ ಪ್ರಮುಖ ಹಣ್ಣಿನ ಬೆಳೆಯಾಗಿದೆ.ಇದರ ಹಣ್ಣುಗಳು ರುಚಿಕರವಾಗಿದ್ದು “ಎ” ಮತ್ತು “ಸಿ” ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.
ಮಾವಿನ ಹಣ್ಣುಗಳನ್ನು ತಾಜಾ ರೂಪದಲ್ಲಿ ಮತ್ತು ಸಂಸ್ಕರಿಸಿದ ಪದಾರ್ಥಗಳಲ್ಲಿ ಉಪಯೋಗಿಸಬಹುದಾಗಿದೆ.ವಿದೇಶಗಳಲ್ಲಿ ಈ ಹಣ್ಣಿಗೆ ಬೇಡಿಕೆ ಇರುವುದರಿಂದ ಹಣ್ಣು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ರಪ್ತುಮಾಡಲಾಗುತ್ತದೆ.
ಕರಾವಳಿ ಪ್ರದೇಶಗಳಿಗೆ ಸೂಕ್ತ ತಳಿಗಳು :
1.ಬಾದಾಮಿ ,2. ರಸಪುರಿ,3.ನೀಲಂ,
4.ಕರಿಇಸಾಡ್, 5.ಬೆನೆಟ್-ಆಲ್ಪಾನ್ಸೋ, 6.ಕಲಪಾಡಿ,7.ಉಪ್ಪಿನ ಕಾಯಿ ತಳಿಗಳು :ಅಪ್ಪೆಮಿಡಿ,ಆಮ್ಲೆಟ್, ಕೌಸಜಿಪಟೇಲ.
ಕರಾವಳಿ ಪ್ರದೇಶದಲ್ಲಿ ಮೇಲಿನ ಎಲ್ಲಾ ಮಾವು ತಳಿಗಳು ಸೂಕ್ತ ಅದರಲ್ಲೂ ಅಂಕೋಲಾ ತಾಲ್ಲುಕಿನ ಕರಿಇಸಾಡ್ ತಳಿ ಬಹಳ ಬೇಗ ಇಳುವರಿ ಕೊಡುವ ತಳಿಯಾಗಿದ್ದು, ಕರಾವಳಿ ಪ್ರದೇಶ ಹಾಗೂ ಘಟ್ಟ ಪ್ರದೇಶಗಳಿಗೆ ಸೂಕ್ತವಾದ ತಳಿ. ಬಹಳ ರುಚಿಕರವಾದ ಹಣ್ಣು . ಈ ಕರಿಇಸಾಡ್ ತಳಿಗೆ ಕೆಲವೇ ದಿನಗಳಲ್ಲಿ ಜಿಯೋಗ್ರಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ ಮಾನ್ಯತೆ ಮಾನ್ಯತೆ ಸಿಗುವುದು ಬಹುತೇಕ ಖಚಿತವಾಗಿದೆ.ತೋಟಗಾರಿಕೆ ಇಲಾಖೆ
ಜಿಐ ಟ್ಯಾಗ್ ಸಂಬಂಧ ಕಳೆದ ಮಾರ್ಚ 2022 ರಲ್ಲಿ ಅರ್ಜಿ ಸಲ್ಲಿಸಿತ್ತು. ಬೆಳೆಯ ಮಾಹಿತಿ ಸಂಗ್ರಹಣೆ ಮತ್ತಿತರ ಪ್ರಕ್ರಿಯೆಗಳು ನಡೆದು ಇದೀಗ ಎಡ್ವಟೈಸಿಂಗ್ ಹಂತದಲ್ಲಿದ್ದು, ಕೆಲವೇ ದಿನದಲ್ಲಿ ಅಂಕೋಲಾ ಕರಿಇಸಾಡ್ ಮಾವಿಗೆ ಜಿಐ ಟ್ಯಾಗ್ ಘೋಷಣೆಯಾಗುವ ಸಾಧ್ಯತೆಯಿದೆ.ಅಂಕೋಲಾ ತಾಲೂಕಿನ ಪೂಜಗೇರಿ, ಹೊಸಗದ್ದೆ, ಶಿರೂರು,ಬಾಸಗೋಡ, ಬೆಳಂಬಾರ್,ಮುಂತಾದ ಹಳ್ಳಿಗಳಲ್ಲಿ ಈ ಹಣ್ಣನ್ನು ಬೆಳೆಲಾಗುತ್ತದೆ.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಬೇಡಿಕೆ ಹೊಂದಿರುವ ಕರಿಇಸಾಡ್ ಮಾವು ಸುವಾಸನೆ ಭರಿತ ಹಾಗೂ ವಿಶೇಷ ರುಚಿ ಹೊಂದಿದೆ. ಅಂಕೋಲಾ ತಾಲೂಕಿನಲ್ಲಿ 500-600 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತದೆ.ಇದರಲ್ಲಿ 80-100 ಹೆಕ್ಟೇರ್ ಪ್ರದೇಶದಲ್ಲಿ ಕರಿಇಸಾಡ್ ವ್ಯಾಪಿಸಿದೆ.
ಜಿಐ ಟ್ಯಾಗ್ ಸಿಕ್ಕಿದ ನಂತರ ಅಂಕೋಲಾ ತಾಲೂಕಿಗೆ ಇನ್ನು ಹೆಚ್ಚಿನ ಗರಿಮೆ ಮತ್ತು ಹಿರಿಮೆ ಬರುವುದು. ಮಾವು ಬೆಳೆಯುವ ರೈತರ ಮೂಖದಲ್ಲಿ ಉತ್ಸಹ ಕಾಣುವುದು ಖಚಿತ.