ಆತ್ಮೀಯ ವಿದ್ಯಾರ್ಥಿ ಮಿತ್ರರೇ ಗ್ರಾಮ ಪಂಚಾಯಿತಗಳ ಗ್ರಂಥಾಲಯಗಳಿಗೆ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು (Library Supervisor ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿರುತ್ತದೆ. ಆಸಕ್ತ ಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹೌದು ಮಿತ್ರರೇ , ತುಮಕೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ ಮೇಲ್ವಿಚಾರಕರನ್ನು ಆಯ್ಕೆ ಮಾಡಲು ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ತುಮಕೂರು ಇವರು ಪ್ರಕಟಣೆಗೆ ನೀಡಿರುತ್ತಾರೆ, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ತುಮಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 33 ಗ್ರಂಥಾಲಯ ಮೇಲ್ವಿಚಾಕರ Library Supervisor ಹುದ್ದೆಗಳಿಗೆ ಆಯ್ಕೆ ಮಾಡಲು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಆಯಾ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ನಿಗಧಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಅರ್ಹ ಅಭರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Salary: ವೇತನ ಶ್ರೇಣಿ :
ಗ್ರಂಥಾಲಯ ಮೇಲ್ವಿಚಾಕರ Library Supervisor ಹುದ್ದೆಗಳಿಗೆ ರೂ. 15,197/- ಗೌರವ ಸಂಭಾವನೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.
Last date to apply: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
ದಿನಾಂಕ: 24-4-2024ರ ಸಂಜೆ 5:00 ಗಂಟೆ ಒಳಗಾಗಿ ತುಮಕೂರು ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ತಾಲ್ಲೂಕು ಗ್ರಾಪಂ ಗ್ರಂಥಾಲಯ ಮೀಸಲಾತಿ ವಿವರಗಳು:
ಇದನ್ನೂ ಓದಿ: Navodaya Job News: ನವೋದಯ ವಿದ್ಯಾಲಯದಲ್ಲಿ 1377 ಬೋಧಕೇತರ ಉದ್ಯೋಗ :
Terms and Conditions: ಷರತ್ತುಗಳು ಮತ್ತು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
1.ಅಭ್ಯರ್ಥಿಗಳು ದ್ವೀತಿಯ ಪದವಿ ಪೂರ್ವ (PUC) ಅಂಕಪಟ್ಟಿ,
2.ಅಭ್ಯರ್ಥಿಯು ಸರ್ಟಿಫಿಕೇಷನ್ ಇನ್ ಲೈಬ್ರರಿ ಸೈನ್ಸ್‌ನಲ್ಲಿ ಪಡೆದಿರುವ ಪ್ರಮಾಣ ಪತ್ರ.
3.ಅಭ್ಯರ್ಥಿಯು ಕನಿಷ್ಟ ಮೂರು ತಿಂಗಳ ಕಂಪ್ಯೂಟರ್ ಕೋರ್ಸ ನಲ್ಲಿ ಉತ್ತೀರ್ಣವಾದ ಪ್ರಮಾಣ ಪತ್ರ.
4.ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮತ್ತು ತಾಲ್ಲೂಕು ತಹಶೀಲ್ದಾರರಿಂದ ಪಡೆದ ದೃಡೀಕೃತ ವಾಸಸ್ಥಳ ಪ್ರಮಾಣ ಪತ್ರವನ್ನು ಸಲ್ಲಿಸುವುದು.
5.ಚುನಾವಣ ಗುರುತಿನ ಚೀಟಿ,
6.ಜಾತಿ ಪ್ರಮಾಣ ಪತ್ರವನ್ನು ತಾಲ್ಲೂಕು ತಹಶೀಲ್ದಾರರಿಂದ ಪಡೆದು ಸಲ್ಲಿಸತಕ್ಕದ್ದು (ನಿಗಧಿಪಡಿಸಲಾದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
7.ಅಭ್ಯರ್ಥಿಗಳು ಯಾವುದೇ ಮೀಸಲಾತಿಯನ್ನು/ ಸಡಿಲಿಕೆಯನ್ನು ಒಳಪಡುವ ಅಭ್ಯರ್ಥಿಗಳು ಸಂಬಂಧಿಸಿದ ಇಲಾಖೆಯಿಂದ ದೃಡೀಕೃತ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
8.ಕನ್ನಡ ಮಾಧ್ಯಮ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಂದ ಪಡೆದು ಸಲ್ಲಿಸತಕ್ಕದ್ದು
ವಯೋಮಿತಿ:
ಅಭ್ಯರ್ಥಿಗಳು 18 ವರ್ಷ ವಯಸ್ಸನ್ನು ಹೊಂದಿರಬೇಕು.
ಇದನ್ನೂ ಓದಿ: KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷಾರ್ಥಿ ಅಭ್ಯರ್ಥಿಗಳಿಗೆ ವಿಶೇಷ ಮಾಹಿತಿಯ ಪ್ರಕಟಣೆ
Age Limit:ಗರಿಷ್ಠ ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಯು : 35 ವರ್ಷಗಳು ಹೊಂದಿರಬೇಕು.
ಪ.ಜಾತಿ/ಪ.ಪಂಗಡ/ ಅಭ್ಯರ್ಥಿಯು: 38 ವರ್ಷಗಳು ಹೊಂದಿರಬೇಕು.
2ಎ, 2ಬಿ, .3ಎ, 3ಬಿ ಅಭ್ಯರ್ಥಿಯು: 40 ವರ್ಷಗಳು ಹೊಂದಿರಬೇಕು..
9.ಗ್ರಾಮೀಣ ಅಭ್ಯರ್ಥಿಗೆ ಸಂಬಂಧಪಟ್ಟ ಅಭ್ಯರ್ಥಿ ಪ್ರಮಾಣ ವತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದು ಸಲ್ಲಿಸತಕ್ಕದ್ದು.
10.ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ದಿನಾಂಕ: 24/04/2024 .ಸಂಜೆ 5.00 ಗಂಟೆ ಒಳಗೆ ಸಲ್ಲಿಸಬೇಕಾಗಿರುತ್ತದೆ.
ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ: Click here.https://zptumakuru.kamataka.gov.in/en
. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಜಾಲತಾಣಕ್ಕೆ ಭೇಟಿ ನೀಡಿ https://zptumakurukamataka.gov.in/en ಅಥವಾ ಉಪಕಾರ್ಯದರ್ಶಿ(ಆಡಳಿತ), ಜಿಲ್ಲಾ ಪಂಚಾಯತ್, ತುಮಕೂರು ಇವರನ್ನು ಕಛೇರಿಯ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು.