Friday, September 20, 2024

Learners licence: ಡ್ರೈವಿಂಗ್ ಲೈನ್ಸನ್ಸ್ ಆನೈಲೈನ್ ನಲ್ಲಿ ಪಡೆಯುವ ವಿಧಾನ:ಮನೆಯಲ್ಲೇ ಕುಳಿತು LLR driving Licence ಪಡೆಯಿರಿ.!! ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ

Learners licence: ಡ್ರೈವಿಂಗ್ ಲೈನ್ಸನ್ಸ್ ಆನೈಲೈನ್ ನಲ್ಲಿ ಪಡೆಯುವ ವಿಧಾನ:
ಮನೆಯಲ್ಲೇ ಕುಳಿತು LLR driving Linence ಪಡೆಯಿರಿ.!! ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ

NNDigital Desk: ಎನ್ಎನ್‌ಡಿಜಿಟಲ್ ಡೆಸ್ಕ್ : ಆತ್ಮೀಯ ಸ್ನೇಹಿತರೇ ನೀವು ಬೈಕು ಮತ್ತು ಕಾರು ಚಾಲನೆ ಮಾಡಲು ಮುಖ್ಯವಾಗಿ ಯಾವುದೇ ದೇಶದಲ್ಲಿ ಅಧಿಕೃತವಾದ ಪರವಾನಿಗೆ (ಲೈಸನ್ಸ್ ) ಬೇಕಾಗುತ್ತದೆ.ಒಂದು ವೇಳೇ ನೀವು ಯಾವುದೇ ಪರವಾನಿಗೆ ಇಲ್ಲದೇ ಮೋಟಾರು ವಾಹನ ಮತ್ತು ಇತರೆ ವಾಹನಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದರೆ, ದಂಡ ವಿಧಿಸಲಾಗುತ್ತದೆ.

ಹಾಗಾಗಿ ಹೊಸದಾಗಿ ಪರವಾನಿಗೆ ಮಾಡಿಸುವವರು ಡ್ರೈವಿಂಗ್ ಲೈಸಸ್ಸ್ (ಕಲಿಕಾ ಪರವಾನೆ)ಗೆಯನ್ನ ಪಡೆಯುವುದು ತುಂಬಾನೇ ಮುಖ್ಯ. ಯಾಕಂದ್ರೆ, ನೀವು ನಿಮ್ಮ ಶಾಶ್ವತ ಪರವಾನಗಿಯನ್ನ ಪಡೆಯುವಾಗ, ಕಲಿಕೆಯ ಪರವಾನಗಿ ಅಗತ್ಯ. ಇನ್ನು ನೀವು ಬಯಸಿದ್ರೆ,

ಇದನ್ನ 16ನೇ ವಯಸ್ಸಿನಲ್ಲಿಯೂ ತೆಗೆದುಕೊಳ್ಳಬಹುದು. ಆದ್ರೆ, ಇದರ ಅಡಿಯಲ್ಲಿ ನಿಮಗೆ 50cc ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ವಾಹನವನ್ನ ಓಡಿಸಲು ಮಾತ್ರ ಅನುಮತಿಸಲಾಗಿರುತ್ತದೆ.
ಹೌದು ನಾವು ಈ ಲೇಖನದಲ್ಲಿ ಮುಖ್ಯವಾಗಿ ಮನೆಯಲ್ಲೆ ಕುಳಿತು ಈ ಪರವಾನಿಗೆ ಪಡೆಯುವ ಬಗ್ಗೆ ತಿಳಿಯಬಹುದು. ಜೊತೆಗೆ ಶಾಶ್ವತ ಪರವಾನಿಗೆ ಬಗ್ಗೆ,ಮತ್ತು ವೈಯಕ್ತಿಕ ಪರವಾನಿಗೆ, ವಾಣಿಜ್ಯ ವಾಹನಗಳ ಪರವಾನಿಗೆ ಬಗ್ಗೆ ತಿಳಿಯೋಣ.

.

ಈಗ ನೀವು ಕಲಿಕಾ ಪರವಾನಗಿ ಪಡೆಯಲು ಆರ್‌ಟಿಒಗೆ ಭೇಟಿ ನೀಡಬೇಕಾಗಿಲ್ಲ, ನೀವು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಶಾಶ್ವತ ಪರವಾನಗಿ ಪಡೆಯಲು ನೀವು ಆರ್‌ಟಿಒ ಕಚೇರಿಗೆ ಹೋಗಬೇಕಾಗುತ್ತದೆ. ಆನ್‌ಲೈನ್ ಕಲಿಕಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನ ನಾವು ಇಲ್ಲಿ ಹೇಳುತ್ತೇವೆ.

ಈ ಕೆಳಗೆ ಕಲಿಕೆಯ ಪರವಾನಗಿ ಪಡೆಯಲು ಈ ಹಂತಗಳನ್ನ ವಿವರಿಸಲಾಗಿದೆ.

ಹಂತ:1: ಮೊದಲು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ನೀವು ಮೊದಲು ಅಧಿಕೃತ ಸೈಟ್ ಮೇಲೆ ಓತ್ತ ಬೇಕಾಗುತ್ತದೆ. ನಂತರ

https://sarathi.parivahan.gov.in/sarathiservice/stateSelectBean.do ಹೋಗಬೇಕು. apply for learner licence ಆಯ್ಕೆ ಓತ್ತಿ ನಂತರ

ಹಂತ: 2 : ಈಗ ಮೊದಲು ನಿಮ್ಮ ರಾಜ್ಯವನ್ನ ಇಲ್ಲಿ ಆಯ್ಕೆ ಮಾಡಿ. ಇದರ ನಂತರ ಕಲಿಕೆ ಪರವಾನಗಿ ಆಯ್ಕೆಯನ್ನ ಆರಿಸಿ. ನೀವು ಕಲಿಯುವವರ ಪರವಾನಗಿ ಆಯ್ಕೆಯನ್ನ ಕ್ಲಿಕ್
ಮಾಡಿದಾಗ, ನೀವು ಆಧಾರ್ ಆಯ್ಕೆಯನ್ನ ನೋಡುತ್ತೀರಿ, ಅಲ್ಲಿ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನ ಭರ್ತಿ ಮಾಡಿ ಮುಂದಕ್ಕೆ ಹೋಗಬೇಕು.

ಹಂತ: 3 : ಇದರ ನಂತರ, ಅಗತ್ಯ ದಾಖಲೆಗಳನ್ನ ಸಲ್ಲಿಸಲು ನಿಮ್ಮನ್ನು ಕೇಳಲಾಗುತ್ತದೆ. ಇದನ್ನು ಮಾಡಿದ ನಂತರ, ನಿಮ್ಮ ಫೋನ್‌ಗೆ OTP ಬರುತ್ತದೆ. ಎಲ್ಲಾ ದಾಖಲೆಗಳನ್ನ ಭರ್ತಿ ಮಾಡಿದ ನಂತರ, ಪಾವತಿ ಮಾಡುವ ಆಯ್ಕೆಯನ್ನು ಆಯ್ಕೆ ಮಾಡಬೇಕು. ಒಮ್ಮೆ ಪಾವತಿ ವಿಫಲವಾದ್ರೆ, ನೀವು ಮತ್ತೊಮ್ಮೆ 50 ರೂಪಾಯಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ ಎಂಬುದನ್ನ ಗಮನಿಸಿ.

ಈ ಸರಳ ಪ್ರಕ್ರಿಯೆಯನ್ನು ಮಾಡಿದ ನಂತರ, ನಿಮ್ಮLLR ಲರ್ನಿಂಗ್ ಲೈಸೆನ್ಸ್ ‘ನ್ನ 7 ದಿನಗಳಲ್ಲಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಇದನ್ನೂ ಓದಿ: 2019 ರ ಹಿಂದಿನ ವಾಹನಗಳಿಗೆ ಈ ನಿಯಮ ಕಡ್ಡಾಯ!!!
ಇದನ್ನೂ ಓದಿ: ಟ್ರಾಕ್ಟರ್ ಜಂಕ್ಷನ್ (Tractor Juction) ನಲ್ಲಿ ಯಾವೆಲ್ಲ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು ಲಭ್ಯ?

Parmanent Driving licences: ಆದರೆ ನೀವು ನಿಮ್ಮ ಶಾಶ್ವತ ಪರವಾನಗಿಯನ್ನ ಪಡೆಯಲು ಬಯಸಿದರೆ,

ಈ ಶಾಶ್ವತ ಡ್ರೈವಿಂಗ್ ಲೈಸ್ಸಸ್ಸ ಪಡೆಯಲು ನೀವು RTO ಕಚೇರಿಗೆ ಹೋಗಬೇಕಾಗುತ್ತದೆ.
ಕಲಿಕೆಯ ಪರವಾನಗಿ ಪಡೆದ ಆರು ತಿಂಗಳೊಳಗೆ ನೀವು ಶಾಶ್ವತ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತೆ.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ, ನೀವು ಭಾರತದಲ್ಲಿ ರಸ್ತೆಗಳಲ್ಲಿ ಓಡಿಸಲು ಸಾಧ್ಯವಿಲ್ಲ, ಆದ್ದರಿಂದ ಇದನ್ನು ವೈಯಕ್ತಿಕ ಪರಿಶೀಲನಾ ದಾಖಲೆಯಾಗಿಯೂ ಬಳಸಲಾಗುತ್ತದೆ. ಚಾಲನಾ ಪರವಾನಗಿ ನೀಡಿದ
ದಿನದಿಂದ 20 ವರ್ಷಗಳವರೆಗೆ ಇದು ಅನ್ವಯಿಸುತ್ತದೆ.

Learners licence for personal Use: ವೈಯಕ್ತಿಕ ಬಳಕೆಗಾಗಿ ಕಲಿಕೆ ಪರವಾನಗಿ :

50cc ಎಂಜಿನ್ ಸಾಮರ್ಥ್ಯದ ಮೋಟಾರ್ ಸೈಕಲ್‌ಗೆ, MC50CC ಪರವಾನಗಿ ವರ್ಗವನ್ನು ನೀಡಲಾಗಿದೆ.
ಸಾರಿಗೆಯೇತರ ಉದ್ದೇಶಗಳಿಗಾಗಿ ಲಘು ಮೋಟಾರು ವಾಹನಗಳಿಗೆ, LMV-NT ಪರವಾನಗಿ ಇದೆ.
ಗೇರ್ ಇಯರ್ ಹೊಂದಿರುವ ಮೋಟಾರ್‌ಸೈಕಲ್ ಮತ್ತು ಗೇರ್‌ಗಳನ್ನು ಒಳಗೊಂಡಂತೆ ಲಘು ಮೋಟಾರು ವಾಹನಗಳು ಮತ್ತು 50 ಸಿಸಿ + ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳಿಗೆ ಎಂಸಿ ಇಎಕ್ಸ್ 50 ಸಿಸಿ ಪರವಾನಗಿ ವರ್ಗವನ್ನು ನೀಡಲಾಗಿದೆ.
ಗೇರ್ ಹೊಂದಿರುವ ಅಥವಾ ಗೇರ್ ಇಲ್ಲದ ಎಲ್ಲಾ ರೀತಿಯ ವಾಹನಗಳಿಗೆ, MCWG ಅಥವಾ M / CYCL.WG ಹೆಸರಿನೊಂದಿಗೆ ವೈಯಕ್ತಿಕ ಬಳಕೆಯ ಪರವಾನಗಿ ವರ್ಗವಿದೆ.

Learns linence for commercial Use: ವಾಣಿಜ್ಯ ಬಳಕೆಗಾಗಿ ಕಲಿಕೆ ಪರವಾನಗಿ :


ಸಾರಿಗೆ ಸೇವೆಗಳಿಗೆ ಸರಕುಗಳನ್ನು ಬಳಸುವ ಭಾರೀ ವರ್ಗದ ವಾಹನಗಳನ್ನು HGMV ವಾಹನ ವರ್ಗ ಎಂದು ಕರೆಯಲಾಗುತ್ತದೆ.
ವ್ಯಾಪಾರ ಉದ್ದೇಶಗಳಿಗಾಗಿ ಅಥವಾ ಸಾರಿಗೆ ಉದ್ದೇಶಗಳಿಗಾಗಿ ಲಘು ಮೋಟಾರು ವಾಹನಗಳಿಗೆ, ಅವರಿಗೆ LMV – TR ವಾಹನ ವರ್ಗದ ಪರವಾನಗಿಯನ್ನು ನೀಡಲಾಗುತ್ತದೆ .
ಬಸ್‌ಗಳಂತಹ ಭಾರೀ ಪ್ರಯಾಣಿಕ ವಾಹನಗಳಿಗೆ HPMV ವಾಹನ ವರ್ಗವಿದೆ.
ವಾಣಿಜ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ಸಾರಿಗೆಗಾಗಿ ಬಳಸದ ಲಘು ಮೋಟಾರು ವಾಹನಗಳಿಗೆ, ಉದ್ದೇಶಗಳಿಗಾಗಿ LMV – NT ಪರವಾನಗಿಯ ವರ್ಗ ಹೆಸರನ್ನು ನೀಡಲಾಗಿದೆ
ಮಧ್ಯಮ ಸರಕು ವಾಹನಗಳಿಗೆ, ಅವುಗಳಿಗೆ MG ವಾಹನ ವರ್ಗದ ಪರವಾನಗಿಯನ್ನು ನೀಡಲಾಗುತ್ತದೆ

ಇದನ್ನೂ ಓದಿ: ವಾಹನ ಖರೀದಿಸಲು ಧನಸಹಾಯ ಇಂದೇ ಅರ್ಜಿ ಸಲ್ಲಿಸಿ !!
ಇದನ್ನೂ ಓದಿ: Ganga Kalyana Scheme 2023 :ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:
ಇದನ್ನೂ ಓದಿ: Aditya Birla Capital Scholarship- ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ರೂ 60,000 ರವರೆಗೆ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!
ಇದನ್ನೂ ಓದಿ: ಈ ಮೂರು ಯೋಜನೆಯಡಿ ವಿದ್ಯಾರ್ಥಿವೇತನ 2,35,000/- ರೂ ಇಂದೇ ಅರ್ಜಿ ಸಲ್ಲಿಸಿ.

ಇತ್ತೀಚಿನ ಸುದ್ದಿಗಳು

Related Articles