ತೋಟಗಾರಿಕೆ ಇಲಾಖೆ ನಡೆಸುವ ರೈತರ ಮಕ್ಕಳಿಗೆ ಉಚಿತ ತರಬೇತಿಯನ್ನು 2025-26ನೇ ಸಾಲಿನ 10 ತಿಂಗಳ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 02 ಮೇ 2025 ರಿಂದ 28 ಫೆಬ್ರುವರಿ 2026 10 ತಿಂಗಳಗಳ ಕಾಲ ತರಬೇತಿ ನೀಡಲಾಗುತ್ತದೆ. ಪ್ರತಿ ತಿಂಗಳು ಅಭ್ಯರ್ಥಿಗೆ ಶಿಷ್ಯ ವೇತನವಾಗಿ ರೂ.1750/ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣವಾಗಿರಬೇಕು. ಅಭ್ಯರ್ಥಿಗಳ ಪೋಷಕರು ತಂದೆ ಅಥವಾ ತಾಯಿ ಕಡ್ಡಾಯವಾಗಿ ಕೃಷಿ ಜಮೀನು ಹೊಂದಿರಬೇಕು. ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಪೋಷಕರು ಕಡ್ಡಾಯ ಕೃಷಿ ಜಮೀನು ಹೊಂದಿರಲೇಬೇಕು. ಕೃಷಿ ಮಾಡುತ್ತಿರು ದಾಖಲೆಗೆ ಅಭ್ಯರ್ಥಿಯ ಪೋಷಕರ ಹೆಸರಿನಲ್ಲಿರುವ ಪಹಣಿ/RTC ನೀಡುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಕೃಷಿ ಮತ್ತು ತೋಟದ ಕೆಲಸ ಮಾಡುವಂತವರಾಗಿರಬೇಕು.
ಇದನ್ನೂ ಓದಿ:ಕಿಸಾನ್ ಯೋಜನೆಯ 19ನೇ ಕಂತು ಬಿಡುಗಡೆ ನಿಮಗೆ ಜಮೆ ಆಗಿದೆಯೇ? ತಿಳಿಯಬೇಕೆ ಇಲ್ಲಿದೆ ಮಾಹಿತಿ.
ರೈತರ ಮಕ್ಕಳಾದ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳಿಗೆ 10 ತಿಂಗಳ ತರಬೇತಿ ನಡೆಯಲಿದೆ. ಅಭ್ಯರ್ಥಿಗಳ ವಯೋಮಿತಿಯು ಸಾಮಾನ್ಯ ವರ್ಗದ ಅಭ್ಯರ್ಥಿಯು 18 ರಿಂದ 30 ವರ್ಷದೊಳಗೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವರ್ಗದ ಅಭ್ಯರ್ಥಿಯು 18 ರಿಂದ 33ವರ್ಷ ದೊಳಗಿರಬೇಕು. ಮಾಜಿ ಸೈನಿಕ ಅಭ್ಯರ್ಥಿಗಳಿಗೆ 33ರಿಂದ 65 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು 1 ಎಪ್ರಿಲ್ ರ ಸಂಜೆ 5:30 ರೊಳಗೆ ಆಯಾ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು. ಹಾಗೂ ಅರ್ಜಿ ಸಲ್ಲಿಕೆ ದಿನವೇ ಸಂದರ್ಶನದ ದಿನಾಂಕವನ್ನು ಕೇಳಿ ತಿಳಿದುಕೊಳ್ಳುವುದು ಸೂಕ್ತ. ಅಥವಾ ಎಪ್ರಿಲ್ 8 ರಂದು ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ತರಬೇತಿ ನೀಡುವ ವಸತಿ ಗೃಹಗಳ ಮಾಹಿತಿ:
ತರಬೇತಿಗೆ ಸೇರುವ ಪ್ರತಿ ಅಭ್ಯರ್ಥಿಯು ತರಬೇತಿ ಕೇಂದ್ರದ ವಸತಿ ಗೃಹಗಳಲ್ಲಿ ತಂಗುವುದು ಕಡ್ಡಾಯವಾಗಿರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಸುರಕ್ಷಿತ ಗೃಹ ವಸತಿ ವ್ಯವಸ್ತೆಯನ್ನು ಕಲ್ಪಿಸಲಾಗಿರುತ್ತದೆ. ಆಯಾ ತರಬೇತಿ ಕೇಂದ್ರದ ಮುಖ್ಯಸ್ಥರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ತೋಟಗಾರಿಕೆ ಉಪ ನಿರ್ದೇಶಕರು ಜವಾಬ್ದಾರರಾಗಿರುತ್ತಾರೆ.
ಪರೀಕ್ಷೆ ಪಡೆಯಲು ಅರ್ಹತೆಗಳು ಕಡ್ಡಾಯ:
ತರಬೇತಿ ಅರ್ಜಿ ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಶೇಕಡಾ 75ಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಪರೀಕ್ಷೆಗೆ ಹಾಜರಾಗಲು ಅರ್ಹತೆ ಇರುವುದಿಲ್ಲ.
ತರಬೇತಿ ಪರೀಕ್ಷೆಗಳು ಮತ್ತು ಮೌಲ್ಯಮಾಪನ:
ತರಬೇತಿ ಅಂತ್ಯದಲ್ಲಿ ಪ್ರಾಯೋಗಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುವುದು. ಪ್ರಾಯೋಗಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕನಿಷ್ಠ ಶೇ. 35 ಅಂಕಗಳನ್ನು ಪಡೆಯಬೇಕಾಗಿರುತ್ತಯದೆ. ಶೇ. 50 ಅಂಕಗಳನ್ನು ಪಡೆದವರಿಗೆ ದ್ವಿತೀಯ ದರ್ಜೆ ಹಾಗೂ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ಪ್ರಥಮ ದರ್ಜೆಯನ್ನು ನೀಡಲಾಗುವುದು.
ಇದನ್ನೂ ಓದಿ:ಮಣ್ಣು ಪರೀಕ್ಷೆ ಎಲ್ಲಿ ಮಾಡಿಸಬೇಕು? ಮತ್ತು ಅದರ ಮಹತ್ವ ಮತ್ತು ಪ್ರಯೋಜನಗಳು!
ವಿಶೇಷ ಸೂಚನೆ: ಈ ತರಬೇತಿಯ ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ತಾಲೂಕುಗಳಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಭೇಟಿ ಮಾಡಿ ವಿಚಾರಿಸಿ.
ಅರ್ಜಿ ಫಾರಂ ಬೇಕಿದಲ್ಲಿ ಇಲ್ಲಿ ಕ್ಲಿಕ್ ಮಾಡಿ.Click here…