ಆತ್ಮೀಯ ರೈತ ಬಾಂದವರೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿಕರಿಗೆ ಗ್ರಾಮೀಣ ಮಟ್ಟದಲ್ಲಿ ಕೃಷಿ ಮತ್ತು ಕೃಷಿ ಪೂರಕ ಕೆಲಸ/ಕಾಮಗಾರಿಗಳನ್ನು ಪ್ರಾರಂಭ ಮಾಡಲು ಆರ್ಥಿಕವಾಗಿ ಸಹಾಯಧನ ಒದಗಿಸಲು ಮತ್ತು ಗ್ರಾಮೀಣ ಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ಒದಗಿಸುವ ದೇಸೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (Mgnreg Scheme-2023) ನಮ್ಮ ರಾಜ್ಯದ ವಿವಿಧ ಅಭಿವೃದ್ಧಿ ಇಲಾಖೆಗಳಿಂದ ಅನುಷ್ಠಾನ ಮಾಡಲಾಗುತ್ತದೆ.
ಕೆಲಸ ಮಾಡಿ ಸ್ವಾಭಿಮಾನದ ಬದುಕು ಸಾಗಿಸಿ ವಿಶೇಷ ವರ್ಗದ ಜಾಬ್ ಕಾರ್ಡ್ ಪಡೆದು, 100 ದಿನ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳಬಹುದಾಗಿದೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ ಪಡೆಯಬಹುದು ಮತ್ತು ಈ ಯೋಜನೆಯಡಿ ಗಂಡು ಹೆಣ್ಣಿಗೆ ಸಮಾನ ಕೂಲಿ ಒದಗಿಸಲಾಗುತ್ತದೆ.
ಯಾವೆಲ್ಲಾ ತೋಟಗಾರಿಕೆ ಬೆಳೆಗಳಿಗೆ ವಿಸ್ತರಣೆ ಮತ್ತು ಪುನಃಶ್ಚೇತನಕ್ಕೆ ಅವಕಾಶ:
2023-24 ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾರ್ಗಸೂಚಿ ಅನುಸಾರ ಅಡಿಕೆ, ತೆಂಗು, ಗೇರು, ಸಪೋಟಾ, ಮಾವು, ಅಪ್ಪೆಮಿಡಿ, ದಾರಿ, ನೇರಳ, ಕೋಕೋಂ, ಹಲಸು, ಅಂಗಾಂಶ ಬಾಳೆ, ಪಪ್ಪಾಯಿ, ಬೆಣ್ಣೆ ಹಣ್ಣು, ಡ್ರಾಗನ್ ಹಣ್ಣು ಪ್ರದೇಶ ವಿಸ್ತರಣೆ ಹಾಗೂ ಆಡಿಕ ತೋಟದಲ್ಲಿ, ಅಂತರ ಬೆಳೆಯಾಗಿ ಕಾಳುಮೆಣಸು, ಲವಂಗ, ವಿಳ್ಯದೆಲೆ ಜಾಯಿಕಾಯಿ ಪ್ರದೇಶ ವಿಸ್ತರಣೆ ಹಾಗೂ ಅಡಿಕೆ ತೋಟ ಪುನಃಶ್ಚೇತನ ಅಡಿಕೆ ತೋಟದಲ್ಲಿ ಭೂ ಅಂತರ್ಗತ ಬಸಿಗಾಲುವೆ ನಿರ್ಮಾಣ ಹಾಗೂ ತೆಂಗು ತೋಟ ಪುನಃಶ್ಚೇತನ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸಿದ್ದಾಪುರ ,ಇವರು ಮಾಹಿತಿಯನ್ನು ತಿಳಿಸಿರುತ್ತಾರೆ.
ಆಸಕ್ತ ರೈತರು ಸಂಬಂಧಪಟ್ಟ ಗ್ರಾಮ ಪಂಚಾಯತದಲ್ಲಿ ನಡೆಯುವ ಗ್ರಾಮಸಭೆಯಲ್ಲಿ ಸದರಿ ಯೋಜನೆಯ ಕ್ರಿಯಾಯೋಜನೆಯಲ್ಲಿ, ವೈಯಕ್ತಿಕ ಕೆಲಸಗಳಿಗಾಗಿ ಗರಿಷ್ಠ 250000/- ಕಾಮಗಾರಿ ಸೇರ್ಪಡೆ ಮಾಡಬಹುದಾಗಿದೆ.
ಈ ಮೇಲೆ ತಿಳಿಸಲಾದ ಮಾಹಿತಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಗೆ ಒಳಪಡುವ ಗ್ರಾಮಗಳಿಗೆ ಸಂಬಂಧಿಸಿದ ಮಾಹಿತಿಯಾಗಿರುತ್ತದೆ.
ಹೆಚ್ಚಿನ ವಿವರಗಳನ್ನು ತೋಟಗಾರಿಕೆ ಇಲಾಖೆ, ಸಿದ್ಧಾಪುರ ಕಛೇರಿ (9535906269 / 9535490912 / 8310020952) ಅಥವಾ ಗ್ರಾಮ ಪಂಚಾಯತ್ ಕಛೇರಿಯಿಂದ ಪಡೆಯಬಹುದಾಗಿದೆ.
ಗಮನಿಸಿ : ಬೇರೆ ಜಿಲ್ಲೆಯ ರೈತ ಬಾಂದವರು ನಿಮ್ಮ ನಿಮ್ಮ ಗ್ರಾಮದ ಗ್ರಾಮ ಪಂಚಾಯತ ಕಛೇರಿಯನ್ನು ಸಂಪರ್ಕಿಸಿ ಈ ಯೋಜನೆ ನಿಮ್ಮ ತಾಲೂಕಿಗೆ ಅಥವಾ ನಿಮ್ಮ ಹೋಬಳಿಗೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.
Nrega scheme Benefits-2023: ಮನರೇಗಾ ಯೋಜನೆಯಡಿ ಯಾರೆಲ್ಲಾ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಬಹುದು?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಜನಾಂಗ,
ಬಿಪಿಎಲ್ ಕುಟುಂಬಗಳು, ಬುಡಕಟ್ಟು ಜನಾಂಗ, ಸಣ್ಣ &
ಅತಿ ಸಣ್ಣ ರೈತರು, ಲಿಂಗತ್ವ ಅಲ್ಪಸಂಖ್ಯಾತರಿಗೂ
ಯೋಜನೆಯಡಿ ಅವಕಾಶವಿರುತ್ತದೆ, ವಿಕಲಚೇತನ
udyoga khatri yojane-2023: ಯೋಜನೆಯಡಿ ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನ ಮಾಡಬವುದು? ಮತ್ತು ಅನುದಾನದ ವಿವರ:
ಪಂಚಾಯತಿ ಅಥವಾ ಹತ್ತಿರದ ಕಾಮಗಾರಿ ಸಂಬಂದಪಟ್ಟ ಇಲಾಖೆ ಅಂದರೆ ಕೃಷಿ ತೋಟಗಾರಿಕೆ,ರೇಷ್ಮೆ ಪಶುಪಾಲನೆ, ಅರಣ್ಯ ಇಲಾಖೆ ಕಚೇರಿಗಳಿಗೆ ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆ ಕೊಟ್ಟು ಅರ್ಜಿ ಹಾಕಬವುದು ಅಥವಾ ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಮೂಲಕವು ಸಹ ಅರ್ಜಿ ಹಾಕಬವುದಾಗಿದೆ. ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಲಿಂಕ್:
https://play.google.com/store/apps/details? id=com.effiatech.kayakamitra
ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಜರುಗುವ ಸಭೆಯಲ್ಲಿ ನಿಮ್ಮ ಕಾಮಗಾರಿ ವಿವರವನ್ನು ಮಂಡಿಸಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಸಂಬಂದಪಟ್ಟ ಇಲಾಖೆಗೆ ಕಡತವನ್ನು ವರ್ಗಾಹಿಸಿ ಅರ್ಜಿದಾರರಿಗೆ ಕೆಲಸ ಪ್ರಾರಂಭಿಸಲು ವರ್ಕ್ ಆರ್ಡರ್ ನೀಡಲಾಗುತ್ತದೆ, ಇದಾದ ಬಳಿಕ ಕಾಮಕಾರಿ ಪ್ರಾರಂಭವಾಗುವ ಮುಂಚಿತವಾಗಿ ಒಂದು ಜಿಪಿಎಸ್ ಪೋಟೋ ಮತ್ತು ಕಾಮಕಾರಿ ನಡೆಯುತ್ತಿರುವಾಗ ಮತ್ತು ಕಾಮಕಾರಿ 30% ಪೂರ್ಣಗೊಂಡಾಗ ಹೀಗೆ ವಿವಿಧ ಹಂತಗಳಲ್ಲಿ ಜಿಪಿಎಸ್ ಪೋಟೊ ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾ ನೇರ ನಗದು ವರ್ಗಾವಣೆ ಮೂಲಕ ಕಾಮಗಾರಿ ಹಣವನ್ನು ಪಾವತಿ ಮಾಡಲಾಗುತ್ತದೆ.
ಹಣ ಪಾವತಿಯು ಎರಡು ವಿಭಾಗವನ್ನು ಹೊಂದಿದ್ದು ಒಂದು ಮೇಟಿರಿಯಲ್ ಬಿಲ್/ ಪರಿಕರ ವೆಚ್ಚ ಮತ್ತೊಂದು ವರ್ಕಸ್್ರ ಬಿಲ್/ಕೂಲಿ ವೆಚ್ಚ ಒಳಗೊಡಿರುತ್ತದೆ.