Friday, September 20, 2024

Gruhalakshmi status- ಈ ಪಟ್ಟಿಯಲ್ಲಿರುವವರಿಗೆ ಗೃಹಲಕ್ಷ್ಮಿ ಹಣ ಜಮಾ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

ಆಹಾರ ಇಲಾಖೆಯಿಂದ ರೇಷನ್ ಕಾರ್ಡ ಹೊಂದಿರುವ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ 2,000 ಅರ್ಥಿಕ ಸಹಾಯಧನ ಫೆಬ್ರವರಿ-2024(Gruhalakshmi amount) ತಿಂಗಳ ಕಂತನ್ನು ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿರುವ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಬಹುದು. ಜೊತೆಗೆ ನಿಮ್ಮ ಮೊಬೈಲ್ ನಲ್ಲಿ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮಗೆ ಈ ಯೋಜನೆಯ ಹಣ ಜಮಾ ಅಗಿರುವ ಸಂಪೂರ್ಣ ವಿವರವನ್ನು ನೋಡಬಹುದು.

ಇದನ್ನೂ ಓದಿ: Crop insurance 2024: ಬಾಕಿ 800 ಕೋಟಿ ಬೆಳೆವಿಮೆ ಪರಿಹಾರ ಮಾರ್ಚ ಅಂತ್ಯಕ್ಕೆ ಬಿಡುಗಡೆ

ಈ ಲೇಖನದಲ್ಲಿ ತಿಳಿಸಿರುವ ವಿಧಾನವನ್ನು ಅನುಸರಿಸಿ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗಿದಿಯಾ? ಎಂದು ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದು ಇದಲ್ಲದೇ ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಿ ಪಡಿತರ ಚೀಟಿ ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಸಹ ಖಚಿತಪಡಿಸಿಕೊಳ್ಳಬಹುದು.

ಹಳ್ಳಿವಾರು ರೇಷನ್ ಕಾರ್ಡ ಅರ್ಹ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ವಿಧಾನ:

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ರೇಷನ್ ಕಾರ್ಡನ ಅರ್ಹ ಹಳ್ಳಿವಾರು ಗ್ರಾಹಕರ ಪಟ್ಟಿಯನ್ನು ತಿಳಿದುಕೊಳ್ಳಬಹುದು ಈ ಪಟ್ಟಿಯಲ್ಲಿರುವವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ರೂ 2,000 ಅರ್ಥಿಕ ನೆರವು ಪಡೆಯಲು ಅರ್ಹರಾಗಿರುತ್ತಾರೆ. ಈ ಕೆಳಗಿನ ವಿಧಾನವನ್ನು ಅನುಸರಿಸಿ ಈ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.

ಇದನ್ನೂ ಓದಿ: PM Kisan Scheme 2024: PM kisan ಹೊಸದಾಗಿ ಅರ್ಜಿ ಸಲ್ಲಿಸಲು ಮಾನದಂಡಗಳೇನು??? ಕೇಂದ್ರ ಸರ್ಕಾರದ ವಾರ್ಷಿಕ 6000/-ರೂ ಪಡೆಯಲು ಅರ್ಹತೆಗಳೇನು?

Step-1: ಪ್ರಥಮದಲ್ಲಿ ration card list ಈ ಲಿಂಕ್ ಮೇಲೆ ಒತ್ತಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು. ನಂತರ “ಇ-ಪಡಿತರ ಚೀಟಿ” ವಿಭಾಗದ ಮೇಲೆ ಕ್ಲಿಕ್ ಮಾಡಿ “ಹಳ್ಳಿ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: “ಹಳ್ಳಿ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಈ ರೀತಿ ವಿಧಾನವನ್ನು ಅನುಸರಿಸಿದ ನಂತರ ನಿಮ್ಮ ಹಳ್ಳಿಯಲ್ಲಿ ಪಡಿತರ ಚೀಟಿ ಹೊಂದಿರುವ ಅರ್ಹ ಗ್ರಾಹಕರ ಪಟ್ಟಿ ಬರುತ್ತದೆ ಈ ಪಟ್ಟಿಯಲ್ಲಿ ರೇಷನ್ ಕಾರ್ಡ ನಂಬರ್, ಫಲಾನುಭವಿಯ ಹೆಸರು, ವಿಳಾಸ, ಒಟ್ಟು ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆ ತೋರಿಸುತ್ತದೆ.

ಇದನ್ನೂ ಓದಿ: First installment drought payment Failure list:ಬರ ಪರಿಹಾರ ಹಣ ಬರದೇ ಇರುವವರ ಪಟ್ಟಿ ಮತ್ತು ಕಾರಣ

ಗೃಹಲಕ್ಷ್ಮಿ ಹಣ ನಿಮಗೆ ಜಮಾ ಅಗಿರುವುದನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡುವ ವಿಧಾನ:

ಸರಕಾರದ ಇ-ಅಡಳಿತ ವಿಭಾಗದಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಅರ್ಥಿಕ ನೆರವು ನೀಡುವ ಯೋಜನೆಗಳ ನೇರ ನಗದು ವರ್ಗಾವಣೆ ಸ್ಥಿತಿಯನ್ನು(DBT status check) ಚೆಕ್ ಮಾಡಲು “DBT Karnataka” ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಫೆಬ್ರವರಿ-2024 ತಿಂಗಳ ಗೃಹಲಕ್ಷ್ಮಿ ಹಣ ಜಮಾ ಅಗಿರುವುದನ್ನು ಫಲಾನುಭವಿಗಳು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದಾಗಿದೆ.

Step-1: ಪ್ರಥಮದಲ್ಲಿ “DBT Karnataka App” ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ “DBT Karnataka” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಫಲಾನುಭವಿಯ ಅಧಾರ್ ನಂಬರ್ ಮತ್ತು ಆಧಾರ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಹಾಕಿ ಈ ಅಪ್ಲಿಕೇಶನ್ ಅನ್ನು ಲಾಗಿನ್ ಅಗಲು 4 ಅಂಕಿಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಲಾಗಿನ್ ಅದ ಬಳಿಕ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ಗೃಹಲಕ್ಷ್ಮಿ” ಹೆಸರಿನ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಫೆಬ್ರವರಿ-2024 ತಿಂಗಳ ಗೃಹಲಕ್ಷ್ಮಿ ಹಣ ಯಾವ ದಿನ ಜಮಾ ಅಗಿದೆ? UTR ನಂಬರ್ ಇತರೆ ಸಂಪೂರ್ಣ ವಿವರ ತೋರಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles