Sunday, November 10, 2024

Free Sewing Machine Scheme: 2023-24 ನೇ ಸಾಲಿನ ಉಚಿತ ಹೊಲಿಗೆ ಯಂತ್ರ ಮತ್ತು ಪವರ್‍ ಟೂಲ್ಸ ವಿತರಣೆ :

Free Sewing Machine Scheme: 2023-24 ನೇ ಸಾಲಿನ ಉಚಿತ ಹೊಲಿಗೆ ಯಂತ್ರ ಮತ್ತು ಪವರ್‍ ಟೂಲ್ಸ ವಿತರಣೆ : ಯಾವ ಜಿಲ್ಲೆಯಲ್ಲಿ ವಿತರಣೆ? ಎಷ್ಟು ಹೊಲಿಗೆ ಯಂತ್ರ ವಿತರಣೆ? ಅರ್ಜಿ ಸಲ್ಲಿಸಲು ಅರ್ಹರು ಯಾರು?

2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವ ಅರ್ಹ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಸೌಲಭ್ಯವನ್ನು ಪಡೆಯಲು ಇಚ್ಛಿಸುವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಲೇಖನದಲ್ಲಿ ನಾವು ವಿಜಯನಗರ, ಮತ್ತು ಮಂಡ್ಯ ಜಿಲ್ಲೆಯ ಸಂಬಂಧಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲು ಬಯಸಿದ್ದೇವೆ. ಉಳಿದ ಜಿಲ್ಲೆಯ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವ ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲೆಯ ಮತ್ತು ತಾಲೂಕಾ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿರುತ್ತದೆ.

ರಾಜ್ಯದಲ್ಲೇ ಅತಿಹೆಚ್ಚು ಬೆಳೆವಿಮೆ ಪರಿಹಾರ ಈ ಜಿಲ್ಲೆಯ ರೈತರಿಗೆ !!!

ವಿಜಯನಗರ: ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕೆ ವತಿಯಿಂದ ವೃತ್ತಿನಿರತ ಕುಶಲ ಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.

ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಭಾಗದವರಿಗೆ ಒಟ್ಟು 287 ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು vijayanagara.nic.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:


ಅಕ್ಟೋಬರ್‍ 26ರೊಳಗೆ ಅರ್ಜಿ ಸಲ್ಲಿಸಬೇಕು.

ಎರಡು ದಿನದ ಅಣಬೆ ಕೃಷಿ ತರಬೇತಿ ಜೊತೆಗೆ ಉಚಿತ ಅಣಬೆ ಬೀಜ ಮತ್ತು ಪ್ರೋಟಿಂಗ್ ಬ್ಯಾಗ್ ವಿತರಣೆ

ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವಿಸ್ತರಣಾಧಿಕಾರಿ, ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ಮೊ. 9035547140, ಹೂವಿನಹಡಗಲಿ ಮತ್ತು ಹರಪನಹಳ್ಳಿ ಮೊ.8496941852, ಕೂಡ್ಲಿಗಿ ಮತ್ತು ಕೊಟ್ಟೂರು ಮೊ. 9844200579 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಮಂಡ್ಯ : ಇದೇ ರೀತಿಯಾಗಿ ಮಂಡ್ಯ ಜಿಲ್ಲೆಯ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಅಧಿಕಾರಿಗಳು 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವ ಅರ್ಹ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಸೌಲಭ್ಯವನ್ನು ಪಡೆಯಲು ಇಚ್ಛಿಸುವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.

ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ – Holige Yantra Scheme:

ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಮರಗೆಲಸ, ದೋಬಿ, ಗಾರೆಕೆಲಸ, ಕಮ್ಮಾರಿಕೆ, ಕ್ಷೌರಿಕ ಮತ್ತು ವಿದ್ಯುತ್ ಚಾಲಿತ ಹೊಲಿಗೆಯಂತ್ರ (Free Sewing Machine Scheme) ವೃತ್ತಿಯ ಉಪಕರಣಗಳನ್ನು ಪಡೆಯಲು ಬೇಕಾಗುವ ದಾಖಲೆಗಳು ಈ ಕೇಳಗಿನಂತಿವೆ.

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.

Documents : ಬೇಕಾದ ದಾಖಲೆಗಳು:

ಪಾಸ್ಪೋರ್ಟ್ ಗಾತ್ರದ ಭಾವಚಿತ್ರ (in JPG format)
ಜಾತಿ ಪ್ರಮಾಣ ಪತ್ರ (in PDF file) (SC,ST, Minority)
ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ (in PDF file)
ರೇಷನ್ ಕಾರ್ಡ್/ ವೋಟರ್ ಐ.ಡಿ ಹೊಂದಿದ್ದಲ್ಲಿ ಪ್ರತಿ ಲಗತ್ತಿಸುವುದು.
ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ( in PDF file)

ಮಂಡ್ಯ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:


ಮಂಡ್ಯ ಜಿಲ್ಲೆ ಕೊನೆಯ ದಿನಾಂಕ: 10-10-2023
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:

ಇತ್ತೀಚಿನ ಸುದ್ದಿಗಳು

Related Articles