Friday, September 20, 2024

Drought relief amount-2023: ಬರ ಪರಿಹಾರ ಯಾವ ಬೆಳೆಗಳಿಗೆ ಎಷ್ಟು ? ಮೊದಲ ಕಂತಿನಲ್ಲಿ ಎಷ್ಟು ಹಣ ಜಮಾ!! ಅರ್ಹ ಫಲಾನುಭವಿಗಳು ಯಾರು?? ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂದವರೇ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈ ವರ್ಷ ವರುಣ ರಾಯ ಕೈ ಕೊಟ್ಟು ನಮ್ಮ ರಾಜ್ಯ ಮತ್ತು ಇತರೆ ಕೆಲವು ರಾಜ್ಯಗಳಲ್ಲಿ ಬೀಕರ ಬರಗಾಲ ಆಗಿರುವ ಮಾಹಿತಿ ನಮಗೆಲ್ಲಾ ತಿಳಿದಿರುತ್ತದೆ. ಈ ಬರಗಾಲದಿಂದ ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಸರ್ಕಾರ ಪರಿಹಾರವನ್ನು ಕೊಡುವುದಾಗಿ ಬರವಸೆ ನೀಡಿರುತ್ತದೆ.


ರಾಜ್ಯದ 220ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಬರ ಪರಿಹಾರ ನೀಡಲು ಕೇಂದ್ರ ಅಧ್ಯಾಯನ ತಂಡ ಬಂದು ಹೋಗಿದ್ದು, ರೈತರಿಗೆ ಪರಿಹಾರ ನೀಡಬೇಕಿದೆ. ಪರಿಹಾರ ಪಡೆಯಲು ಅರ್ಹರ ರೈತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಲಿಸ್ಟ್ ನಲ್ಲಿ ಹೆಸರು ಇರುವವರಿಗೆ ಮಾತ್ರ ಪರಿಹಾರ ಸಿಗಲಿದೆ.

ಇದನ್ನೂ ಓದಿ: ಈ ಜಿಲ್ಲೆಯ ರೈತರಿಗೆ 50.298 ಕೋಟಿ ರೂ ಮಧ್ಯಂತರ ಬೆಳೆ ವಿಮೆ

Government’s stance on drought: ಬರಗಾಲದ ಕಾರಣ ಸರ್ಕಾರ ನಿಲುವು:

ಕರ್ನಾಟಕದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ಪ್ರಾಧಿಕಾರ ಮೂರು ಸಭೆ ಮಾಡಿದೆ, ಸಂಪುಟ ಉಪ ಸಮಿತಿ ಇದೆ, 10 ಸಭೆ ಬರದ ಸಲುವಾಗಿ ಮಾಡಿದ್ದೇವೆ. ದೇಶದ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಬರಗಾಲ ಇದೆ, 18 ರಾಜ್ಯಗಳಲ್ಲಿ ಹಿಂಗಾರು ಅವಧಿಯಲ್ಲಿ ಬರಗಾಲ ಆವರಿಸಿದೆ. ಮುಂಗಾರು ಅವಧಿಯಲ್ಲಿ ಸೆಪ್ಟಂಬರ್ 13 ರಂದೇ ರಾಜ್ಯದಲ್ಲಿ ಬರಗಾಲ ಘೋಷಣೆ ಆಗಿತ್ತು.

ಬೇರೆ ರಾಜ್ಯಗಳು ನಾವು ಘೋಷಿಸಿದ 2 ತಿಂಗಳ ನಂತರ ಘೋಷಣೆ ಮಾಡಿವೆ, ಇತರ ರಾಜ್ಯಕ್ಕೂ ಮೊದಲು ಕರ್ನಾಟಕ ರಾಜ್ಯವಿದೆ. ಸೆಪ್ಟಂಬರ್ 22 ರಂದು ಮೊದಲ ಮನವಿಯನ್ನು ಕೇಂದ್ರಕ್ಕೆ ಮಾಡಿದ್ದೇವೆ. ಮೇವಿನ ಕೊರತೆ ಬರಬಹುದು ಎಂದು 7 ಲಕ್ಷ ಬಿತ್ತನೆ ಬೀಜದ ಕಿಟ್ ಗಳನ್ನು ಬರಪೀಡಿತ ತಾಲ್ಲೂಕುಗಳಲ್ಲಿ ರೈತರಿಗೆ ಕೊಟ್ಟಿದ್ದೇವೆ.

90 ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಅದರಲ್ಲಿ 60 ಕಡೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದಿದ್ದು, 25 ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗ ಸೇರಿ ಕೆಲವಡೆ ಹೆಚ್ಚಿನ ಸಮಸ್ಯೆ ಇದೆ, ಅಲ್ಲಿ ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ.

ಜಿಲ್ಲಾಡಳಿತಗಳ ಬಳಿ 894 ಕೋಟಿ ಹಣವನ್ನು ಸಿದ್ಧವಿಟ್ಟಿದ್ದೇವೆ, ಕುಡಿಯುವ ನೀರಿನ ಸಮಸ್ಯೆ ಆದ 24 ಗಂಟೆಯ ಒಳಗೆ ಟ್ಯಾಂಕ‌ರ್ ಮೂಲಕವಾದರೂ ಪೂರೈಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೇವೆ ಎಂದು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು. ಬೆಳೆಹಾನಿಗೆ 2 ಸಾವಿರ ರೂ.ಗಳ ಮೊದಲ ಕಂತು ಮುಂದಿನ ವಾರ ಪಾವತಿ ಮಾಡಲಾಗುತ್ತದೆ ಎಂದು ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಇದನ್ನೂ ಓದಿ: 2023-24ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ.

ಬರಗಾಲದ ಬಗ್ಗೆ ಕೃಷಿ ಸಚಿವರ ಮಾಹಿತಿ:
ರಾಜ್ಯದ ಬೀಕರ ಬರಗಾಲದ ಬಗ್ಗೆ ಮಾಹಿತಿ ನೀಡಿರುವ ಕೃಷಿ ಸಚಿವರು, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ (NDRF)National Diesaster Response Force ಅನುದಾನ ನಿರೀಕ್ಷಿಸಿ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅರ್ಹ ರಾಜ್ಯದ ಬರ ಪ್ರದೇಶದ ರೈತರಿಗೆ ತಲಾ ₹ 2 ಸಾವಿರ ಪಾವತಿಸಲು ತೀರ್ಮಾನಿಸಲಾಗಿದೆ ಎಂದು ಮಾನ್ಯ ಕೃಷಿ ಸಚಿವರು ತಿಳಿಸಿದರು..

ರಾಜ್ಯದ ರೈತರಿಗೆ ಸಿಹಿಸುದ್ದಿ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಎನ್ ಡಿಆರ್ ಎಫ್ ಅನುದಾನ ಬಂದ ಬಳಿಕ ಹೆಕ್ಟೇರ್ ಗೆ 22,500 ರವರೆಗೆ ಬೆಳೆ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿಯನ್ನು ನೀಡಿರುತ್ತಾರೆ.

How much compensation for which Field: ಯಾವ ಕ್ಷೇತ್ರಕ್ಕೆ (ವಲಯ) ಎಷ್ಟು ಪರಿಹಾರ:
ಮುಂದುವರೆದು… ಹೆಕ್ಟೇರ್‌ಗೆ ₹ 22,500 ರವರೆಗೆ ಬೆಳೆ ಪರಿಹಾರ ಶೇ 33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್‌ಗೆ ಪರಿಹಾರ ನಿಗದಿ ಮಾಡಲಾಗಿರುತ್ತದೆ.

ಮಳೆಯಾಶ್ರಿತ ಬೆಳೆಗಳಿಗೆ-8,500 ರೂ. ಹಾಗೂ ನೀರಾವರಿ ಬೆಳೆಗೆ-17,000 ರೂ. ಬಹುವಾರ್ಷಿಕ ಬೆಳೆಗೆ- 22,500 ರೂ. ನಿಗದಿಪಡಿಸಲಾಗಿದೆ.

Step (ಹಂತ:) 1: ಮೊದಲು ಈ ಕಾಣಿಸಿರುವ ಲಿಂಕ್ ಮೇಲೆ ಓತ್ತಿ bara parihara Farmer list ನಂತರ ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ ಸರ್ಚ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ರೈತರ ನೋಂದಣಿ ಸಂಖ್ಯೆ” FID10070000xxxxx” ದೊರೆಯುವುದು.


ಈ ರೀತಿ FID ನೋಂದಣಿಯಾಗಿದ್ದರೆ ಈ ರೈತರ ಹೆಸರಿಗೆ ಇರುವ ಎಲ್ಲಾ ಸರ್ವೆ ನಂಬರ್‍ ನೋಂದಣಿಯಾಗಿವೆ ಅಂತ ಒಮ್ಮೇ ಹತ್ತಿರ ಕೃಷಿ ಇಲಾಖೆ, ಗ್ರಾಮ ಓನ್, ಅಥವಾ ಕರ್ನಾಟಕ ಓನ್, ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ,
ಒಂದು ವೇಳೆ ಎಲ್ಲಾ ಸರ್ವೇ ನಂಬರ್‍ ನೋಂದಣಿಯಾಗಿದ್ದರೆ ನಿಮಗೆ ಬರಪರಿಹಾರ ಹಣ ಸದ್ಯದಲೇ ಜಮಾ ಆಗುವುದು ಖಚಿತ. ಕೆಲವು ಸರ್ವೆ ನಂಬರ ತಪ್ಪಿದ್ದರೆ ಕೂಡಲೇ ಹತ್ತಿರ ಕೃಷಿ ಇಲಾಖೆ, ಗ್ರಾಮ ಓನ್, ಅಥವಾ ಕರ್ನಾಟಕ ಓನ್, ಸಂಪರ್ಕಿಸಿ ನೋಂದಾಯಿಸಿಕೊಳ್ಳಿ.

ಇದನ್ನೂ ಓದಿ: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 15 ಸಾವಿರ ಸಹಾಯಧನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು.

ಈ ಉಳಿದ ಪರಿಹಾರದ ಹಣವನ್ನು ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ (NDRF)National Diesaster Response Force ಅನುದಾನ ಬಂದ ಕೂಡಲೇ ಎಸ್‌ಡಿಆರ್‌ಎಫ್‌ SDRF ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ ರೈತರ ಸ್ಥಿತಿಗತಿ ಕಷ್ಟವಿದೆ, ರಾಜ್ಯಕ್ಕೆ ಬರಬೇಕಾದ ಹಣ ಬೇಗ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದೆವು, ಅವರು ಇನ್ನು ತೀರ್ಮಾನ ಮಾಡದ ಕಾರಣ ಭಾಗಶಃ ಪರಿಹಾರವಾಗಿ 2 ಸಾವಿರ ರೂ.ಗಳ ಹಣವನ್ನು ಕೊಡಲು ಸಿಎಂ ತೀರ್ಮಾನಿಸಿದ್ದಾರೆ. ಡಿಬಿಟಿ ಮೂಲಕ ಮುಂದಿನ ವಾರ ಭಾಗಶಃ ಪರಿಹಾರದ ಮೊದಲ ಕಂತನ್ನು ಹಾಕಲಿದ್ದು, ಕೇಂದ್ರದಿಂದ ಪರಿಹಾರದ ಹಣ ಬರುತ್ತಿದ್ದಂತೆ ಬಾಕಿ ಪರಿಹಾರದ ಹಣ ಜಮೆ ಮಾಡಲಾಗುತ್ತದೆ. ಎಂದು ಸರ್ಕಾರ ತಿಳಿಸಿದೆ.

ಇತ್ತೀಚಿನ ಸುದ್ದಿಗಳು

Related Articles