Thursday, November 21, 2024

Crop survey report-ಬೆಳೆ ಸಮೀಕ್ಷೆ ಮಾಡಿದ ಮೇಲೆ ಆಕ್ಷೇಪಣೆ ಸಲ್ಲಿಸಲು ಮೊಬೈಲ್ ಗಳಿಗೆ ಸಂದೇಶ ಬಂದರೇ ಹೀಗೆ ಮಾಡಿ!

2024 ರ ಪೂರ್ವ ಮುಂಗಾರು ರೈತರ ಬೆಳೆ ಸಮೀಕ್ಷೆ ಕಾರ್ಯ ಇನ್ನೂ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ನೀವು ಈ ಹಂತದಲ್ಲಿ ಬೆಳೆ ಸಮೀಕ್ಷೆ ಮಾಡಿಕೊಂಡಿದ್ದರೆ ನಿಮ್ಮ ಮೊಬೈಲ್ ಗಳಿಗೆ ಆಕ್ಷೇಪಣೆ ಸಲ್ಲಿಸಲು ಸಂದೇಶಗಳನ್ನು ಕಳುಹಿಸಲಾಗಿದೆ.

ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ತಪ್ಪಾಗಿ ಕಂಡು ಬಂದರೆ ನೀವು ಆಕ್ಷೇಪಣೆಯನ್ನು ಸಲ್ಲಿಸಬಹುದು. ಒಂದು ವೇಳೆ ನಿಮಗೆ ಬಂದ ಸಂದೇಶದ ಮಾಹಿತಿ ತಿಳಿಯದೇ ಹೋದಲ್ಲಿ ನಿಮ್ಮ ಹತ್ತಿರದ ಕೃಷಿ ಮತ್ತು ಕಂದಾಯ ಇಲಾಖೆಯ ಕಛೇರಿಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ನಿಮಗೆ ಮೊಬೈಲ್ ನಲ್ಲೇ ನಿಮ್ಮ ಸಂದೇಶದ ಮಾಹಿತಿ ನೋಡಬೇಕು ಎಂದಾದಲ್ಲಿ ಅಥವಾ ಈಗಾಗಲೇ ತಾವು ಮಾಡಿದ ಬೆಳೆ ಸಮೀಕ್ಷೆ ಮಾಹಿತಿ ತಿಳಿಯಬೇಕಾದಲ್ಲಿ, ಬೆಳೆ ದರ್ಶಕ ಆ್ಯಪ್ ಡೌನ್ಲೋಡ ಮಾಡಿಕೊಂಡು ನೋಡಬಹುದು.

ಇದನ್ನೂ ಓದಿ:ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಇನ್ನೂ ಆಗಿಲ್ಲವೇ ಚಿಂತೆ ಬೇಡಾ ಇನ್ನೂ ಅವಕಾಶವಿದ್ದು, ಆಗಷ್ಠ 15ರ ಒಳಗೆ ಸಮೀಕ್ಷೆ ಮಾಡಿಕೊಳ್ಳಿ! ಲಿಂಕ್‌ ಇಲ್ಲಿದೆ.

How to Check Crop Survey Details-2024 ರ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ವಿವರ ನೋಡುವ ವಿಧಾನ:

1)ಮೊದಲಿಗೆ ಈ ಲಿಂಕ್ ಮೇಲೆ (bele darshaka app) ಕ್ಲಿಕ್ ಮಾಡಿ bele darshaka app ನ್ನು ಡೌನ್ಲೋಡ್‌ ಮಾಡಿಕೊಳ್ಳಿ.

2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದೆವರೆಯಿರಿ.(ರೈತರ ಗಮನಕ್ಕೆ ಪೂರ್ವ ಮುಂಗಾರು ಮಾತ್ರ ಆಯ್ಕೆ ಮಾಡಬೇಕು, ಬೇರೆ ಬೆಳೆಗಳಿಗೆ ಬೆಳೆದ ಹಂಗಾಮು ಆಯ್ಕೆ ಮಾಡಿ)

3)ಇದಾದ ಮೇಲೆ ನಿಮ್ಮ ಸರ್ವೆ ನಂಬರ್‌ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ.

4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ್‌ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.

5)ಇದಾದ ಮೇಲೆ ಮಾಲೀಕರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.

6)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ ಮುಂದೆವರೆಯಿರಿ.

7)ಕ್ಲಿಕ್‌ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್‌ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್‌ ನಂಬರ್‌ ಮೇಲೆ ಕ್ಲಿಕ್‌ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.

ಇದನ್ನೂ ಓದಿ:ಪಿಎಮ್‌ ಕಿಸಾನ್‌ ಯೋಜನೆಯ ಮೊಬೈಲ್‌ ನಂಬರ್‌ ತಿದ್ದುಪಡಿ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ!

8)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್‌ ಮಾಡಿ.

9)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್‌, ಮೊಬೈಲ್‌ ನಂ, ಅದರ ಕೆಳಗಡೆ ಬೆಳೆ ಹೆಸರು , ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಷರ್‌, ಛಾಯಾಚಿತ್ರ ವೀಕ್ಷಿಸಿ, ಋತು ಎಂಬ ಆಯ್ಕೆಗಳು ಕಾಣಿಸುತ್ತವೆ.

10)ತಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.

11)ತಾವು ದಾಖಲಿಸಿದ ಬೆಳೆಯಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ನೀವು ಅಲ್ಲೇ ಕೆಳಗಡೆ ಇರುವ ಆಕ್ಷೇಪಣೆ ಸಲ್ಲಿಸಿ ಇರುವ ಆಯ್ಕೆಯನ್ನು ಆಯ್ಕೆ ಮಾಡಿ ಆಕ್ಷೇಪಣೆ ಸಲ್ಲಿಸಬಹುದು.

ದಾಖಲಾದ ಬೆಳೆ ವಿವರ ತಿಳಿಯಲು ಇಲ್ಲಿದೆ ಲಿಂಕ್ Click here….

ಇತ್ತೀಚಿನ ಸುದ್ದಿಗಳು

Related Articles