Thursday, September 19, 2024

Crop insurance status-ನಿಮ್ಮ ಬೆಳೆ ವಿಮೆ ಕಟ್ಟಲಾಗಿದೆಯೇ? ಚೆಕ್ ಮಾಡಿಕೊಳ್ಳುವ ವಿಧಾನ ಹೇಗೆ? ಈ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.

2024-25ನೇ ಸಾಲಿನ ಬೆಳೆ ವಿಮೆ ಕಾರ್ಯ ಮುಕ್ತಾಯವಾಗಿದ್ದು, ತಾವು ಈಗಾಗಲೇ ಬೆಳೆ ವಿಮೆ ಕಟ್ಟಿದ್ದರೆ ಅದನ್ನೂ ಚೆಕ್ ಮಾಡಿಕೊಳ್ಳುವ ವಿಧಾನ ಹೇಗೆ? ತಮ್ಮ ತಮ್ಮ ಮೊಬೈಲ್ ನಲ್ಲಿ ನೋಡುವುದು ಹೇಗೆ ಎಂಬ ಇತ್ಯಾದಿ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಸಿ ಕೊಡಲಾಗುವುದು.

2024-25ನೇ ಸಾಲಿನ ಬೆಳೆ ವಿಮೆ ಮಾಡಿಸುವ ಕಾರ್ಯ ಮುಕ್ತಾಯವಾಗಿದ್ದು, ತಾವು ಕಟ್ಟಿರುವ ಬೆಳೆ ವಿಮೆಯ ಲಾಭವು ಬೆಳೆ ನಷ್ಟ, ಬೆಳೆ ಹಾನಿ, ಬರ ಹಾಗೂ ಇತ್ಯಾದಿ ಕಾರಣಗಳಿಂದ ಬೆಳೆ ಹಾನಿಗೊಂಡಲ್ಲಿ ನಿಮಗೆ ಬೆಳೆ ವಿಮೆಯ ಪರಿಹಾರ ಸಿಗಲು ಉಪಯುಕ್ತವಾಗಿದೆ.

ಜನರ ಜೀವ ವಿಮೆ ಹೇಗೆ ಕಾರ್ಯ ನಿರ್ವಹಿಸುತ್ತದೆಯೋ ಹಾಗೆ ಬೆಳೆ ವಿಮೆಯು ರೈತರ ಬೆಳೆ ಹಾನಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಅದರಂತೆ ಈಗಾಗಲೇ ತುಂಬಾ ಜನ ರೈತರು ಬೆಳೆ ವಿಮೆ ಮಾಡಿದ್ದು ಅದರ ಮಾಹಿತಿಯನ್ನು ಹೇಗೆ ತಿಳಿಯಬೇಕು ಮತ್ತು ನೋಡಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ:ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ, ಇಲ್ಲವಾದಲ್ಲಿ ರೇಷನ್ ಕಾರ್ಡ್ ಬಂದಾಗುವ ಸಾಧ್ಯತೆಗಳಿವೆ. ಎಲ್ಲಿ ಇ-ಕೆವೈಸಿ ಮಾಡಿಸಬೇಕು ಇಲ್ಲಿದೆ ಮಾಹಿತಿ.

ರಾಜ್ಯ ಸರಕಾರದ ಸಂರಕ್ಷಣೆ (Samrakshane.karnataka.gov.in) ಪೋರ್ಟಲ್‌ ಭೇಟಿ ಮಾಡಿ ರೈತರು ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ವರ್ಷದ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ ಎಂದು ನಿಮ್ಮ ಮೊಬೈಲ್‌ ನಲ್ಲಿ ತಿಳಿದುಕೊಳ್ಳಬಹುದು.

Crop insurance status-ನಿಮ್ಮ ಬೆಳೆ ವಿಮೆ ಕಟ್ಟಲಾಗಿದೇ? ಚೆಕ್ ಮಾಡಿಕೊಳ್ಳುವ ವಿಧಾನ ಹೇಗೆ?

Samrakshane.karnataka.gov.in ವೆಬ್ಸೈಟ್‌ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ ಎಂದು ತಿಳಿದುಕೊಳ್ಳಬಹುದು. ಬೆಳೆಗೆ ಎಷ್ಟು ವಿಮೆ ಪ್ರಿಮಿಯಂ ಪಾವತಿ ಮಾಡಲಾಗಿದೆ ಸಂಪೂರ್ಣ ವಿವರ ಪಡೆಯಬಹುದು.

Step-1:ರೈತರು ತಮ್ಮ ಮೊಬೈಲ್‌ ನಲ್ಲಿ ಮೊದಲಿಗೆ ಈ KHARIF CROP INSURANCE ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2024-25 “ ಹಾಗೂ ಋತು: ಮುಂಗಾರು/kharif” ಎಂದು ಸೆಲೆಕ್ಟ್‌ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಮುಂದುವರೆಯಬೇಕು.

ಸೂಚನೆ:ಮುಖಪುಟದಲ್ಲಿ ಮೇಲೆ ಕಾಣುವ ಕನ್ನಡ/English ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

Step-2: ಬಳಿಕ ಈ ಪೇಜಿನ ಕೆಳಗೆ “Farmers”ಕಾಲಂ ನಲ್ಲಿ ಕಾಣುವ “check status/ವಿಮೆ ವೀಕ್ಷಣೆ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.

ಇದನ್ನೂ ಓದಿ:ಪಿ.ಎಂ ಕಿಸಾನ್ ಪರಿಷ್ಕೃತ/ಹೊಸ ಪಟ್ಟಿ ಬಿಡುಗಡೆ. ಪಟ್ಟಿಯಲ್ಲಿ ನಿಮ್ಮ ಹೆಸರುಂಟೆ ಚೆಕ್ ಮಾಡಿಕೊಳ್ಳಿ. ಇಲ್ಲಿದೆ ಲಿಂಕ್.

Step-3:ಈ ಪೇಜ್‌ ನಲ್ಲಿ ನೀವು ವಿಮೆ ನೋಂದಣಿ ಸಂಖ್ಯೆ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಈ ಮೂರು ಹಂತಗಳಲ್ಲಿ ನಿಮ್ಮ ವಿಮೆ ಕಟ್ಟಿರುವ ಮಾಹಿತಿಯನ್ನು ನೋಡಿಕೊಳ್ಳಬಹುದು.

Step-4: ನೀವು ವಿಮೆ ನೋಂದಣಿ ಸಂಖ್ಯೆ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಈ ಮೂರರಲ್ಲಿ ಒಂದನ್ನು ಹಾಕಿ ನಂತರ ಕ್ಯಾಪ್ಚರ್ ಕೋಡ್ ಹಾಕಿ ಸರ್ಚ್/search ಮೇಲೆ ಕ್ಲಿಕ್ ಮಾಡಿ ತಮ್ಮ ಮಾಹಿತಿಯನ್ನು ಪಡೆಯಬಹುದು.

ಇತ್ತೀಚಿನ ಸುದ್ದಿಗಳು

Related Articles