ಹೌದು, ರೈತ ಭಾಂದವರೇ ಕೇಂದ್ರ ಸರಕಾರದ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಪರಿಷ್ಕೃತ/ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ರೂ.2000 ಬರುತ್ತೆ! ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂದು ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿ ಕೊಡಲಾಗುವುದು.
ಈ ಪಿ ಎಮ್ ಕಿಸಾನ ಯೋಜನೆಯು 2019 ರಿಂದ ಜಾರಿಯಲ್ಲಿದ್ದು, ವರ್ಷಕ್ಕೆ ರೂ.6000 ರೂಪಾಯಿಯನ್ನು ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಕಂತುಗಳಲ್ಲಿ ರೂ.2000 ರಂತೆ ರೈತರ ಖಾತೆಗೆ ನೇರ ಹಣ ಜಮೆ ಮಾಡುವ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಲಾಗಿದೆ.
ಈ ಒಂದು ಯೋಜನೆಗೆ ಈಗಾಗಲೇ ಐದು ವರ್ಷ ಪೂರ್ತಿಗೊಂಡಿದ್ದು, ಮತ್ತೆ ಕೇಂದ್ರ ಸರಕಾರವು ಮರಳಿ ಈ ಯೋಜನೆಯನ್ನು ಮರುಜಾರಿಗೆ ತಂದಿದ್ದು ಕಾಲ ಕಾಲ ಹೊಸ ರೈತರ ಸೇರ್ಪಡೆ ಮಾಡಿ ಪರಿಷ್ಕೃತ/ಹೊಸ ಪಟ್ಟಿ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ಈ ಪಟ್ಟಿಗಳಲ್ಲಿ ನಿಮ್ಮ ಹೆಸರು ಉಂಟೇ ಚೆಕ್ ಮಾಡಿಕೊಳ್ಳಿ.
2019 ರಲ್ಲಿ ನೋಂದಣಿ ಮಾಡಿಕೊಂಡ ರೈತರಲ್ಲಿ ಹಲವು ರೈತರು ಮರಣ ಹೊಂದಿದ್ದು ಮತ್ತು ಈ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಹೊಸ ರೈತರು ಸೇರ್ಪಡೆಗೊಂಡಿರುವುದರಿಂದ ಕೇಂದ್ರ ಸರಕಾರವು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡುತ್ತಿರುತ್ತಾರೆ. ಆದ್ದರಿಂದ ನಿಮ್ಮ ಹೆಸರು ಈ ಯೋಜನೆಯ ಪಟ್ಟಿಯಲ್ಲಿ ಇದೆಯೇ ಎಂದು ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಪಿಎಂ ಕಿಸಾನ್ ಲಿಸ್ಟನಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?
ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.
Step-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.
step-2: ಈ ಎಲ್ಲಾ ಅಂಕಣಗಳಲ್ಲಿ ನೀವು Beneficiary list ಮೇಲೆ ಕ್ಲಿಕ್ ಮಾಡಿ.
step-3: ಆ ಮೇಲೆ ನಿಮ್ಮ ರಾಜ್ಯ ಆಯ್ಕೆ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಉಪ ಜಿಲ್ಲೆ ಆಯ್ಕೆ ಮಾಡಿ, ತಾಲೂಕು ಆಯ್ಕೆ ಮಾಡಿ, ಕೊನೆಯಲ್ಲಿ ನಿಮ್ಮ ಗ್ರಾಮ/ಹಳ್ಳಿ ಆಯ್ಕೆ ಮಾಡಿ.
step-4:ನಂತರ Get report ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ನಿಮ್ಮ ಗ್ರಾಮದಲ್ಲಿ ಇರುವ ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಹುಡುಕಿಕೊಳ್ಳಿ.
ನಿಮ್ಮ ಹೆಸರು ಆ ಲಿಸ್ಟ್ ನಲ್ಲಿ ಕಾಣದಿದ್ದರೇ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಪಿಎಂ ಕಿಸಾನ್ ಅರ್ಜಿ ಏನಾಗಿದೆ ಎಂದು ತಿಳಿದುಕೊಳ್ಳಿ. ಕೆಲವು ಬಾರಿ Ekyc ಮತ್ತು Aadhar ಹೆಸರು ತಿದ್ದುಪಡಿ, RTC/ಪಹಣಿ ತಿದ್ದುಪಡಿ, ಹೀಗೆ ಹಲವಾರು ಕಾರಣಗಳಿಂದ ಬರದೆ ಇರಲು ಸಾಧ್ಯತೆಗಳಿವೆ.