Thursday, November 21, 2024

Crop details in RTC-ಪಹಣಿ/rtc ಗಳಲ್ಲಿ ದಾಖಲಾದ ಬೆಳೆ ವಿವರಗಳನ್ನು ಈ ವೆಬ್ಸೈಟ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ನೋಡಬಹುದು!

ರೈತರು ತಮ್ಮ ಜಮೀನಿನ ಬೆಳೆಗಳನ್ನು ಸಮೀಕ್ಷೆ ಮಾಡಲು 2-3 ವರ್ಷಗಳಿಂದ ರೈತರ ಬೆಳೆ ಸಮೀಕ್ಷೆ ಆ್ಯಪನ್ನು ರಾಜ್ಯ ಸರಕಾರವು ಬಿಡುಗಡೆ ಮಾಡಿದೆ. ಆದರೂ ಸಹ ತುಂಬಾ ಜನ ರೈತರು ತಮ್ಮ ಜಮೀನಿನ ಬೆಳೆಗಳ ಸಮೀಕ್ಷೆಯನ್ನು ತಾವೇ ಮಾಡಿಕೊಳ್ಳದೆ ಹಾಗೇ ಬಿಟ್ಟಿರುತ್ತಾರೆ. ಅಂತಹ ರೈತರ ಜಮೀನನ ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಕಾರದಿಂದ ಖಾಸಗಿ ನಿವಾಸಿಗಳನ್ನು ನೇಮಿಸಿ ಸಮೀಕ್ಷೆ ಮಾಡಲಾಗುತ್ತದೆ.

ಆದ್ದರಿಂದ ರೈತರು ತಮ್ಮ ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಿಸಿದ ಬೆಳೆ ಮಾಹಿತಿ (Crop details in rtc) ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಈ ವೆಬ್ಸೈಟ್ ನ್ನು Open ಮಾಡಿಕೊಂಡು ತಮ್ಮ ಜಮೀನಿನ ಪಹಣಿ/ RTCಗಳಲ್ಲಿನ ಬೆಳೆ ವಿವರಗಳನ್ನು ಏನು ದಾಖಲಿಸಲಾಗಿದೆ ಎಂದು ನೋಡಬಹುದು.

ಇಂದು ಈ ಲೇಖನದಲ್ಲಿ ರೈತರು ತಮ್ಮ ಮೊಬೈಲ್ ನಲ್ಲಿ ಬೆಳೆ ವಿವರಗಳನ್ನು ಹೇಗೆ ನೋಡುವುದು? ಮತ್ತು ಪಹಣಿ/ RTC ಯಲ್ಲಿ ಬೆಳೆ ವಿವರ ಸರಿಯಾಗಿ ದಾಖಲೆ ಮಾಡುವುದು ಎಷ್ಟು ಮುಖ್ಯ? ಅದರ ಪ್ರಾಮುಖ್ಯತೆ ಇತ್ಯಾದಿ ವಿಷಯಗಳ ಕುರಿತು ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.

ಇದನ್ನೂ ಓದಿ: ರೈತರಿಗೆ ಶುಭ ಸುದ್ಧಿ ಜೂನ್ 18 ರಂದು ರೈತರಿಗೆ ರೂ.2000 ಹಣ ಬಿಡುಗಡೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.

Crops details in RTC- ಪಹಣಿ/Rtc ಯಲ್ಲಿ ಬೆಳೆ ವಿವರ ದಾಖಲೆ ಏಕೆ ಮಾಡಬೇಕು?

ಅನೇಕ ರೈತರಿಗೆ ಈ ಮಾಹಿತಿ ಗೊತ್ತಿರುವುದಿಲ್ಲ. ನಮಗೆ ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಸಾಲ, ಬೆಂಬಲ ಬೆಲೆ ಯೋಜನೆಗಳ ಲಾಭ ಮತ್ತು ಆರ್ಥಿಕ ನೆರವು ಸಿಗದೆ ಇರಲೂ ಅನೇಕ ಕಾರಣಗಳಿವೆ. ಅದರಲ್ಲಿ ಈ ಬೆಳೆ ಸಮೀಕ್ಷೆ ಮಾಡದೇ ಇರುವುದು ಒಂದು ಕಾರಣವಾಗಿದೆ. ಉದಾಹರಣೆಗೆ ನೀವೂ ಅಡಿಕೆ, ಕಾಳುಮೆಣಸು ಬೆಳೆಗೆ ವಿಮೆ ಮಾಡಿಸಿದ್ದರೆ ಬೆಳೆ ಸಮೀಕ್ಷೆಯಲ್ಲಿ ತೆಂಗು ಅಥವಾ ಪಾಳು ಎಂದು ಬಂದರೆ ನೀವು ಕಟ್ಟಿದ ಬೆಳೆ ವಿಮೆ ನಿಮಗೆ ಪಾವತಿಯಾಗುವುದಿಲ್ಲ.

ಇದೇ ಮಾದರಿಯಲ್ಲಿ ಕೃಷಿಸಾಲ, ಬೆಳೆ ಸಾಲ, ವಿವಿಧ ಇಲಾಖೆಗಳ ಬೆಳೆಆಧಾರಿತ ಸಹಾಯಧನ ಸೌಲಭ್ಯಗಳು ಯೋಜನೆಗಳ ಲಾಭ ಪಡೆಯಲು ಬೆಳೆ ಸಮೀಕ್ಷೆಯ ವಿವರಗಳನ್ನೆ ಪರಿಗಣಿಸಲಾಗುತ್ತದೆ. ಆದ್ದರಿಂದ ಬೆಳೆ ಸಮೀಕ್ಷೆಯ ವಿವರದಲ್ಲಿ ಬೆಳೆ ವಿವರಗಳನ್ನು ರೈತರು ಸರಿಯಾಗಿ ದಾಖಲೆ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.

How to Check Crop Survey Details-ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ವಿವರಗಳನ್ನು ನೋಡುವ ವಿಧಾನ:

ಕರ್ನಾಟಕ ಸರಕಾರದ ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಅಧಿಕೃತ cropsurvey.karnataka.gov.in ವೆಬ್ಸೈಟನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿಕೊಂಡು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರನಲ್ಲಿ (RTC) ದಾಖಲೆಯಾದ ಬೆಳೆ ವಿವರಗಳನ್ನು ಪಡೆಯಬಹುದು.

ವಿಧಾನ-1:ಇಲ್ಲಿ ನೀಡಲಾದ Crop Survey Details ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು. ಇದಾದ ಬಳಿಕ “View PR Uploaded Crop info” ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-2:ನಂತರದ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ.ಹಳ್ಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಮೀನಿನ ಸರ್ವೇ ನಂಬರ್ ಹಾಕಿ “Get crop survey details” ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ಮೊಬೈಲ್ ನಲ್ಲೇ ಚೆಕ್ ಮಾಡಬಹುದು ನಿಮ್ಮ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಇಲ್ಲಿದೆ ಮಾಹಿತಿ.

ವಿಧಾನ-3:ಆಗ ನಿಮಗೆ ನಿಮ್ಮ ಸರ್ವೇ ನಂಬರನಲ್ಲಿ ಎಷ್ಟು ಹಿಸ್ಸಾ ಇರುತ್ತದೆ ಹಾಗೂ ಎಲ್ಲಾ ರೈತರ ವಿವರ ತೋರಿಸುತ್ತದೆ. ಇಲ್ಲಿ ನಿಮ್ಮ ಹೆಸರಿರುವ ಸರ್ವೆ ನಂಬರ ಮುಂದೆ ಟಿಕ್ ಮಾಡಿ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯ ಬೆಳೆ ನಮೂದಿಸಿದ ವಿವರ ತೋರಿಸುತ್ತದೆ. ಹಾಗೂ ಕೊನೆಯಲ್ಲಿ ನಿಮ್ಮ ಜಮೀನಿನ ಬೆಳೆಯ ಪೋಟೋ ಸಹ ನೋಡಬಹುದು.

ಒಂದು ವೇಳೆ ಬೆಳೆ ವಿವರಗಳು ತಪ್ಪಾಗಿ ಇದ್ದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡಿ ಅಧಿಕಾರಿಗಳ ಗಮನಕ್ಕೆ ತಂದು ಅವರು ಹೇಳಿದ ಹಾಗೆ ತಿದ್ದುಪಡಿ ಮಾಡಲು ಇರುವ ಮಾರ್ಗವನ್ನು ಕಂಡುಕೊಳ್ಳಬೇಕು. ಅಥವಾ ಸ್ವತಹ ತಾವೇ ಸಮೀಕ್ಷೆ ಮಾಡಿಕೊಂಡಲ್ಲಿ ಈ ಸಮಸ್ಯೆ ಇರುವುದಿಲ್ಲ.

ಇತ್ತೀಚಿನ ಸುದ್ದಿಗಳು

Related Articles