Friday, September 20, 2024

ಯಾವುದಕ್ಕೆ ನಿರ್ಬಂಧ, ಯಾರಿಗೆ ಅನುಮತಿ, ಯಾರಿಗೆಲ್ಲಾ ಅನ್ವಯ : ಚುನಾವಣಾ ನೀತಿ ಸಂಹಿತೆ!!

ವಿಧಾನಸಭೆ ಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆದರೆ, ಮೇ 13ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಇನ್ನು 29ರಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣೆಗೆ ದಿನಾಂಕ ಘೋಷಣೆ ಆದ ದಿನದಿಂದ ಹಿಡಿದು, ಮತ ಎಣಿಕೆ ಮುಗಿಯುವವರೆಗೂ ಈ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳಿಗೆ ಏನೆಲ್ಲ ನಿರ್ಬಂದ ಇರುತ್ತದೆ.ಎಂದು ಸಂಪೂರ್ಣ ಮಾಹಿತಿ ನೋಡೋಣ

ಏನೆಲ್ಲಾ ಕಾರ್ಯ ಮಾಡಬಹುದಾಗಿರುತ್ತದೆ:

ಇದನ್ನೂ ಓದಿ: ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ


*ಕಾರ್ಯ ಪ್ರಗತಿಯಲ್ಲಿ ಇರುವ ಅಭಿವೃದ್ಧಿ ಯೋಜನೆ ಮುಂದುವರಿಸಬಹುದು.

*ಈಗಾಗಲೇ ಜಾರಿಯಲ್ಲಿ ಇರುವ ಸರ್ಕಾರಿ ಕಾರ್ಯಕ್ರಮಗಳ ಮುಂದುವರಿಕೆಗೆ ಅಡ್ಡಿ ಇಲ್ಲ.

*ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ.

*ರಾಜ್ಯ ಸರ್ಕಾರ ಸಂಪುಟ ಸಭೆ ನಡೆಸಬಹುದು ಆದರೆ ನಿರ್ಣಯ ಕೈಗೊಳ್ಳುವಂತಿಲ್ಲ.

*ಅಗತ್ಯವಿದ್ದ ಚುನಾವಣಾ ಆಯೋಗದ ಸಮ್ಮತಿ ಪಡೆದು ಅಧಿಕಾರಿಗಳ ಜೊತೆ ಸಭೆ ನಡೆಸಬಹುದು.

*ಶಾಸಕರು ಮತ್ತು ಸಚಿವರು ತಮ್ಮ ಅಧಿಕೃತ ಸರ್ಕಾರಿ ನಿವಾಸದಿಂದ ಕಚೇರಿಗೆ ಹೋಗೋದಿಕ್ಕೆ ಮಾತ್ರ ಸರ್ಕಾರಿ ವಾಹನ ಬಳಸಬಹುದು.

*ಸಚಿವರು ಬೆಂಗಳೂರನ್ನು ಬಿಟ್ಟು ಹೊರಗಡೆ ಹೋಗುವುದಕ್ಕೆ ಚುನಾವಣಾ ಆಯೋಗದ ಅನುಮತಿ ಬೇಕು.

*ಬರ ಮತ್ತು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸುವುದಕ್ಕೆ ಅಡ್ಡಿ ಇಲ್ಲ.

*ಕುಡಿಯುವ ನೀರು ಪೂರೈಕೆ ಗೋ ಶಾಲೆ ತೆರೆಯುವುದಕ್ಕೆ ಅಡ್ಡಿ ಇಲ್ಲ.

*ಸಾರ್ವಜನಿಕ ಬಳಕೆಯ ಅಭಿವೃದ್ಧಿ ಕಾರ್ಯಗಳನ್ನು ಅಧಿಕಾರಿಗಳು ಉದ್ಘಾಟನೆ ಮಾಡಬಹುದು.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : `ಮಹಿಳೆಯರಿಗಾಗಿ ಈ ಕ್ಲಿನಿಕ್ ಏನೆಲ್ಲಾ ಸೌಲಭ್ಯಗಳು ನೀಡಲಾಗಿದೆ ತಿಳಿಯಿರಿ.
ಯಾವ ಕಾರ್ಯ ಮಾಡುವಂತಿಲ್ಲ:

*ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ

*ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ.

*ಹೊಸ ಯೋಜನೆಗಳ ಉದ್ಘಾಟನೆ ಶಂಕುಸ್ಥಾಪನೆ ಮಾಡುವಂತಿಲ್ಲ.

*ಹೊಸ ಯೋಜನೆಗೆ ಹಣ ನೀಡುವಂತಿಲ್ಲ.

*ಹೊಸ ಟೆಂಡರ್ ಕರೆಯುವಂತಿಲ್ಲ.

*ಈಗಾಗಲೇ ಕರೆದಿದ್ದ ಟೆಂಡರ್ ಪೂರ್ಣಗೊಳಿಸುವಂತಿಲ್ಲ.

*ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ.

*ಅಧಿಕಾರಿಗಳ ಜೊತೆ ಸಚಿವರು ಶಾಸಕರು ಸಭೆ ನಡೆಸುವಂತಿಲ್ಲ.

*ರಾಜಕೀಯ ನಾಯಕರು ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ.

*ಬೆಳಿಗ್ಗೆ 6:00 ಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಕೆ.

*ಮಂದಿರ ಮಸೀದಿ ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಮಾಡುವಂತಿಲ್ಲ.

*ಧರ್ಮ ಜಾತಿ ವಿಷಯಧಾರಿತವಾಗಿ ಮತ ಕೇಳುವಂತಿಲ್ಲ.

ಇದನ್ನೂ ಓದಿ: 150,000 ರೂ. ವಸತಿ ಯೋಜನೆಯಡಿ ಪ್ರತಿ ಮನೆಗೆ ಆರ್ಥಿಕ ಸಹಾಯ ಮತ್ತು ಇತರೆ ಪ್ರಮುಖ ಅಂಶಗಳು
ಈ ಒಂದು ನೀತಿ ಸಂಹಿತೆ ಯಾರಿಗೆಲ್ಲ ಅನ್ವಯವಾಗಲಿದೆ:

*ಕಾರ್ಯಾಂಗ, ಶಾಸಕಾಂಗ
ಅನ್ವಯವಾಗುವುದು.
*ಆಡಳಿತ, ವಿರೋಧ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು

*ಸರ್ಕಾರದ ಎಲ್ಲಾ ಇಲಾಖೆಗಳು

*ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು

*ನಿಗಮ ಮಂಡಳಿಗಳು

*ಸ್ಥಳೀಯ ಪೌರ ಸಂಸ್ಥೆಗಳು

*ಸರ್ಕಾರದಿಂದ ಹಣಕಾಸಿನ ನೆರವನ್ನ ಪಡೆಯುವ ಸಂಸ್ಥೆಗಳು

*ರಾಜಕೀಯ ಪಕ್ಷಗಳ ಅಭ್ಯರ್ಥಿಗಳು

ಇದನ್ನೂ ಓದಿ: ನಿರುದ್ಯೋಗ ಯುವಕರಿಗೆ ಜನೌಷಧಿ ತೆರೆಯಲು ಉತ್ತಮ ಅವಕಾಶಯಾವ ಯಾವ ಪ್ರಚಾರಕ್ಕೆ ನಿರ್ಬಂಧ ಮಾಡಲಾಗಿದೆ:

*ಒಬ್ಬರ ಕೆಲಸ ಕಾರ್ಯಗಳ ಬಗ್ಗೆ ಮಾತ್ರ ಮತ್ತೊಬ್ಬ ರಾಜಕಾರಣಿ ಟಿಕೆ ಟಿಪ್ಪಣಿ ಮಾಡಬಹುದು

*ವೈಯಕ್ತಿಕ ಟೀಕೆ, ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತ ಹೇಳಿಕೆ ನೀಡಬಾರದು

*ವೈಯಕ್ತಿಕ ನಿಂದನೆ ಅಥವಾ ಜಾತಿ ನಿಂದನೆ ಮಾಡುವಂತಿಲ್ಲ

*ಸಭೆ ಸಮಾರಂಭ ನಡೆಸಲು ಪೊಲೀಸರ ಅನುಮತಿ ಬೇಕು

*ಜನರ ಖಾಸಗಿ ಬದುಕಿಗೆ ಧಕ್ಕೆ ತರುವಂತೆ ಪ್ರಚಾರ ಮಾಡುವಂತಿಲ್ಲ.

(ಕೇಂದ್ರ ಚುನಾವನಾ ಆಯೋಗ ಹೊರಡಿಸಿದ ಆದೇಶ ಈದಾಗಿರುತ್ತದೆ.)

ಇತ್ತೀಚಿನ ಸುದ್ದಿಗಳು

Related Articles