Monday, September 16, 2024

Coconut Tree Climbing Insurance: ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಸೌಲಭ್ಯ:

ಆತ್ಮೀಯ ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತೆಂಗು ಅಭಿವೃದ್ದಿ ಮಂಡಳಿವತಿಯಿಂದ ವಿಮಾ ಕಂಪನಿ ಸಹಯೋಗದೊಂದಿಗೆ ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು/ ಕೃಷಿ ಕಾರ್ಮಿಕರು ತೆಂಗಿನ ತೋಟದಲ್ಲಿ ಕೆಲಸ ಮಾಡುವಾಗ ಅಕಸ್ಮಿಕ ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ/ ಅಂಗವಿಕಲರಾಗಿದ್ದಲ್ಲಿ ವಿವಿಧ ಹಂತದಲ್ಲಿ ವಿಮೆಯನ್ನು ನೀಡಲು “ಕೇರಾ ಸುರಕ್ಷಾ ಯೋಜನೆಯನ್ನು” ಅನುಷ್ಠಾನ ಮಾಡಲಾಗುತ್ತದೆ ಎಂದು ತೆಂಗು ಅಭಿವೃದ್ದಿ ಮಂಡಳಿವತಿಯಿಂದ ಪ್ರಕಟಣೆಗೆ ತಿಳಿಸಲಾಗಿದೆ.

ಇದನ್ನೂ ಓದಿ: Horticulture Crop Parihara: ತೋಟಗಾರಿಕೆ ಬೆಳೆಗಳಿಗೆ ಹಾಗೂ ವಿವಿಧ ಬೆಳೆಗಳಿಗೆ ಪರಿಹಾರದ ವಿವರ:

ಆಸಕ್ತ ಅರ್ಜಿದಾರರು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಹಾಗಿದ್ದರೆ, ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಯೋಜನೆಯಡಿ ಯಾವೆಲ್ಲ ಪ್ರಯೋಜನ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

Project Details: ಯೋಜನೆಯ ವಿವರ:
ತೆಂಗು ಅಭಿವೃದ್ದಿ ಮಂಡಳಿವತಿಯಿಂದ ವಿಮಾ ಕಂಪನಿ ಸಹಯೋಗದೊಂದಿಗೆ ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು/ ಕೃಷಿ ಕಾರ್ಮಿಕರು ತೆಂಗಿನ ತೋಟದಲ್ಲಿ ಕೆಲಸ ಮಾಡುವಾಗ ಅಕಸ್ಮಿಕ ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ/ ಅಂಗವಿಕಲರಾಗಿದ್ದಲ್ಲಿ ವಿವಿಧ ಹಂತದಲ್ಲಿ ವಿಮೆಯನ್ನು ನೀಡಲು “ಕೇರಾ ಸುರಕ್ಷಾ ಯೋಜನೆಯನ್ನು” ಅನುಷ್ಠಾನ ಮಾಡಲಾಗುತ್ತದೆ ಎಂದು ತೆಂಗು ಅಭಿವೃದ್ದಿ ಮಂಡಳಿವತಿಯಿಂದ ಪ್ರಕಟಣೆಗೆ ತಿಳಿಸಲಾಗಿದೆ.

Application last date:ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ “ಕೇರಾ ಸುರಕ್ಷಾ ಯೋಜನೆಗೆ ” ಅರ್ಜಿ ಸಲ್ಲಿಸಲು ಇದೇ 20 ಫೆಬ್ರವರಿ 2024 ಕೊನೆಯ ದಿನವಾಗಿರುತ್ತದೆ.

Application Apply: ಅರ್ಜಿ ಎಲ್ಲಿ ಸಲ್ಲಿಸಬೇಕು?

ಈ ಕೆಳಗೆ ಕಾಣಿಸಿರುವ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಅರ್ಜಿಯನ್ನು ಪೊಸ್ಟ್ ಮೂಲಕ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಬೇಕು.

Place: ಸ್ಥಳ: ಪ್ರಾದೇಶಕ ಕಚೇರಿ: ನಿರ್ದೇಶಕರು, ತೆಂಗು ಅಭೀವೃದ್ದಿ ಮಂಡಳಿ, ಹುಳಿಮಾವು, ಬನ್ನೇರು ಘಟ್ಟ ರಸ್ತೆ, ಬೆಂಗಳೂರು-560076 ದೂರವಾಣಿ ಸಂಖ್ಯೆ: 080-26593750, 808-26593743 ಅಥವಾ ಹತ್ತಿರದ ತೆಂಗು ಬೆಳೆಗಾರರ ಸಂಘದ ಕಚೇರಿಯನ್ನು ಭೇಟಿ ಮಾಡಿಯು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇದನ್ನೂ ಓದಿ: RTC ಮೇಲೆ ಸಾಲ ಇದೆಯೇ ? ಹಾಗೂ ಯಾವ ಬೆಳೆ ನಮೂದಾಗಿದೆ ನಿಮ್ಮ ಮೊಬೈಲ್ ನಲ್ಲೆ ಪರೀಕ್ಷಿಸಿಕೊಳ್ಳಿ: Mutation,Akarband,MR ಚೆಕ್ ಮಾಡುವ ಡೈರೆಕ್ಟ ಲಿಂಕ್

Required Documents: “ಕೇರಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1) ಅರ್ಜಿ ನಮೂನೆ.
2) ಅರ್ಜಿದಾರರ ವಯಸ್ಸಿನ ಪುರಾವೆ ಪತ್ರ ನೀಡಬೇಕು. (ಅರ್ಜಿದಾರರ ವಯಸ್ಸು 18- 65 ರ ನಡುವೆ ಇರಬೇಕು).
3) ಆಧಾರ ಕಾರ್ಡ್ ಪ್ರತಿ.
4) ಬ್ಯಾಂಕ್ ಪಾಸ್ ಬುಕ್ ಪ್ರತಿ.
5) ರೈತರ ವಾರ್ಷಿಕ ವಂತಿಗೆ ಪಾವತಿಸಿದ ರಶೀದಿ (ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು ವಾರ್ಷಿಕ ವಂತಿಗೆ ರೂ. 94.00 ಅನ್ನು ಪಾವತಿಸಲು ಡಿಡಿ ಮೂಲಕ Coconut Development Board, payble at Cochin 32. & NEFT/BHIM/Phone pay/ Google Pay/PayTM/ State Bank of India, Iyyatti In, Ernakulam Branch (Acc No. 61124170321, IFSC code:SBIN0031449 ಗೆ ಪಾವತಿಸಬೇಕು.

Insurance details: ವಿಮಾ ಸೌಲಭ್ಯದ ಮಾಹಿತಿ ವಿವರ :
“ಕೇರಾ ಸುರಕ್ಷಾ ಯೋಜನೆಗೆ ” ವಿಮೆಯ ಮೊತ್ತ ಮರಣ ಹೊಂದಿದಲ್ಲಿ 5,00,000.00,
ಶಾಶ್ವತ ಅಂಗವಿಕಲತೆ 2,50,00.00, ಆಸ್ಪತ್ರೆ ವೆಚ್ಚದ ಮರುಪಾವತಿ (ಕನಿಷ್ಠ 24 ಗಂಟೆ ಆಸ್ಪತ್ರೆ ದಾಖಲಾಗಿದ್ದಲ್ಲಿ)
ಹಾಗೂ 1,00,000.00, ಆಂಬುಲನ್ಸ್ ವೆಚ್ಚಕ್ಕಾಗಿ3 3,000. ಮೀಸಲಿಡಲಾಗಿದೆ.
ಅಲ್ಪಕಾಲದ ಅಂಗಾಂಗ ಊನತೆ 18,000.00, ಮೀಸಲಿಡಲಾಗಿದೆ.
ಅಂತ್ಯ ಸಂಸ್ಕಾರದ ವೆಚ್ಚವಾಗಿ 5,000.00ರೂ ವನ್ನು “ಕೇರಾ ಸುರಕ್ಷಾ ಯೋಜನೆಯಡಿ ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು/ ಕೃಷಿ ಕಾರ್ಮಿಕರು ತೆಂಗಿನ ತೋಟದಲ್ಲಿ ಕೆಲಸ ಮಾಡುವಾಗ ಅಕಸ್ಮಿಕ ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ/ ಅಂಗವಿಕಲರಾಗಿದ್ದಲ್ಲಿ ವಿವಿಧ ಹಂತದಲ್ಲಿ ವಿಮೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ:Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?

ಇತ್ತೀಚಿನ ಸುದ್ದಿಗಳು

Related Articles