Wednesday, March 12, 2025

AZOLLA FOND-ಹಸು,ಎಮ್ಮೆಗಳ ಹಾಲು ಹೆಚ್ಚಿಸಬೇಕೆ? ಇಲ್ಲಿದೆ ಅದಕ್ಕೆ ಮಾಹಿತಿ.

ನಮಸ್ಕಾರ ರೈತರೇ, ಹಸು, ಎಮ್ಮೆಗಳ ಹಾಲಿನ ಉತ್ಪಾದನೆ ಹೆಚ್ಚಿಸುವ ಯೋಚನೆ ಏನಾದರು ಇದ್ದರೇ ಇಲ್ಲಿದೆ ಅದಕ್ಕೆ ಮಾಹಿತಿ. ನಿವೇನಾದರು ಹೈನುಗಾರಿಕೆ ಮಾಡುತ್ತಿದ್ದರೇ ಹಸು, ಎಮ್ಮೆಗಳಲ್ಲಿ ಹಾಲಿನ ಪ್ರಮಾಣ ಏರಿಕೆ ಮಾಡಬೇಕು ಎಂದರೆ ಅಜೋಲ್ಲಾ(AZOLLA) ಆಹಾರ ಬಳಕೆ ಮಾಡಿ.

ಅಜೋಲ್ಲಾ(AZOLLA) ಎಂಬ ಪಾಚಿ ತರಹ ತೇಲುವ ಜರಿಸಸ್ಯವನ್ನು ಬೆಳೆಸಿ ಹಸುಗಳಿಗೆ ನೀಡುವುದರಿಂದ ಹೈನುಗಾರಿಕೆ ಎಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸಬಹುದು. ಅಜೋಲ್ಲಾ ಹೇಗೆ ಬೆಳೆಯಬೇಕು? ಮತ್ತು ಅದರಿಂದ ಆಗುವ ಪ್ರಯೋಜನಗಳು ಏನು ಎಂದು ನಿಮಗೆ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ಪಶು ಸಮಗೋಪನೆಯಲ್ಲಿ ಮೇವಿನ ನಿರ್ವಹಣೆ  ಒಂದು ಮುಖ್ಯವಾದ ಭಾಗ. ಇದನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಿದಷ್ಟು ಆದಾಯದಲ್ಲಿ ವೃದ್ಧಿಯಾಗುವುದು. ಆದ್ದರಿಂದ ಸುಲಭ ರೀತಿಯಲ್ಲಿ ಮೇವಿನ ನಿರ್ವಹಣೆ ಮಾಡಿ, ಹಿಂಡಿಗೆ ಆಗುವ ಖರ್ಚನ್ನು ಕಡಿಮೆ ಮಾಡಲು ಅಝೋಲ್ಲಾ ಎಂಬ ನೀರಿನಲ್ಲಿ ತೇಲುತ್ತಾ ಬೆಳೆಯುವ ಸಸಿಯನ್ನು ಬೆಳೆದು ಹಾಲಿನ ಆದಾಯ ಹೆಚ್ಚಿಸಬಹುದಾಗಿದೆ.

ಇದನ್ನೂ ಓದಿ:ಕಿಸಾನ ಸಮ್ಮಾನ್ 19ನೇ ಕಂತು ಬಿಡುಗಡೆಗೆ ತಯಾರಿ! ಈ ಕೆಲಸ ಕಡ್ಡಾಯ.

ಅಝೋಲ್ಲಾ ಇದು ನೀರಿನಲ್ಲಿ ತೇಲುತ್ತಾ ಸಿಹಿ ನೀರಿನಲ್ಲಿ ಬೆಳೆಯುವ ಚಿಕ್ಕ ಸಸಿ. ಈ ಸಸಿ ಚಿಕ್ಕ ಕವಲುಗಳುಳ್ಳ ತೇಲುವ ಕಾಂಡವನ್ನು ಹೊಂದಿರುತ್ತದೆ. ಈ ಸಸಿಯು ತ್ರಿಕೋಣಾಕಾರವುಳ್ಳದ್ದಾಗಿರುತ್ತದೆ. ಬೇರುಗಳು ನೀರಿನಲ್ಲಿ ನೇತಾಡುತ್ತಿರುತ್ತವೆ. ಗಿಡದ ಕೆಳಗೆ ಅಥವಾ ನೆರಳಿನ ಅಧಿಕವಾಗಿರು ಸ್ಥಳಗಳಲ್ಲಿ ಇದನ್ನು ಬೆಳೆಯಬಹುದು.

ಅಝೋಲ್ಲಾದಲ್ಲಿ ಸಸಾರಜನಕದ ಪ್ರಮಾಣ ಹೆಚ್ಚಿರುವುದು(ಶೇ,25-30), ಅಧಿಕ ಪ್ರಮಾಣದಲ್ಲಿ ಜೀವಸತ್ವಗಳು, ಖನಿಜಾಂಶಗಳು,(ರಂಜಕ, ಪೋಟ್ಯಾಸಿಯಂ, ಕ್ಯಾಲ್ಸಿಯಂ,ಇತ್ಯಾದಿ) ಹಾಗೂ ಅತ್ಯಲ್ಪ ಪ್ರಮಾಣದ ನಾರಿನಾಂಶವನ್ನು ಹೊಂದಿರುತ್ತದೆ.

ಅಝೋಲ್ಲಾವನ್ನು ಬೆಳೆಯುವ ವಿಧಾನ:

ಆಯತಾಕಾರದ ಉದ್ದ2ಮೀ, ಅಗಲ1ಮೀ, ಹಾಗೂ ಆಳ20ಸೆಂ.ಮೀ ಅಳತೆಯ ಹೊಂಡವನ್ನು ನಿರ್ಮಿಸಬೇಕು. ಸ್ಥಳ ಆಯ್ಕೆ ಮಾಡುವಾಗ ಮುಖ್ಯವಾಗಿ ಗಿಡದ ನೆರಳು ಅಥವಾ ಅರೆ ನೆರಳು ಇರುವ ಜಾಗವನ್ನು ಆಯ್ದುಕೊಳ್ಳಬೇಕು. ಅದರಲ್ಲಿ ಪಕ್ಕದ ಮರದ ಬೇರುಗಳು ಬರದಂತೆ ತಡೆಯೊಡ್ಡಲು ಪ್ಲಾಸ್ಟಿಕ್‌ ಚೀಲಗಳನ್ನು ಹಾಕಬೇಕು. ಹೊಂಡಕ್ಕೆ 25 ಕೆ.ಜಿಯಷ್ಟು ಗಾಳಸಿದ ಫಲವತ್ತಾದ ಮಣ್ಣನ್ನು ಹೊಂಡದಲ್ಲಿ ಸಮನಾಂತರವಾಗಿ ಹರಡಬೇಕು. ನಂತರ 2-3 ದಿನಗಳ 5ಕೆ.ಜಿಯಷ್ಟು ಹಳೆ ಸಗಣಿಯನ್ನು ಮತ್ತು 30 ಗ್ರಾಂ ನಷ್ಟು ಸೂಪರ್‌ ಫಾಸ್ಪೇಟ್‌ ನ್ನು 10 ಲೀಟರ್‌ ನೀರಿನಲ್ಲಿ ಬೆರೆಸಿ ಹಾಕಬೇಕು. ನಂತರ ನೀರನ್ನು 10 ಸೆಂ.ಮೀ ನಷ್ಟು ಆಳ ಬರುವವರೆಗೆ ತುಂಬಬೇಕು. ಅದರಲ್ಲಿ ತಾಜಾ ಅಝೋಲ್ಲಾ(ಪ್ರ.ಚ.ಮೀಗೆ 500ಗ್ರಾಂ ರಂತೆ) ಬಿಡಬೇಕು.ಅಝೋಲ್ಲಾ ವೇಗವಾಗಿ ಬೆಳೆದು ಒಂದು ವಾರದಲ್ಲಿ ಘಟಕವನ್ನು ಸಂಪೂರ್ಣವಾಗಿ ಆವರಿಸುತ್ತದೆ.

ಇದನ್ನೂ ಓದಿ:ಕೃಷಿ ಇಲಾಖೆಯ ಸವಲತ್ತುಗಳು ಮತ್ತು ಪಡೆಯುವ ವಿಧಾನ!

ಅಝೋಲ್ಲಾ ಘಟಕವನ್ನು ನಿರ್ವಹಣೆ ಮಾಡುವ ವಿಧಾನ:

ಪ್ರತಿ 10 ದಿನಗಳಿಗೊಮ್ಮೆ ಪ್ರತಿ ಚ.ಮೀ ಗೆ 15ಗ್ರಾಂ.ಸುಪರ್‌ ಫಾಸ್ಪೇಟ್‌ ಹಾಗೂ 1ಕೆ.ಜಿ ಸಗಣಿಯನ್ನು ನೀರಿನಲ್ಲಿ ಚೆನ್ನಾಗಿ ಕರಗಿಸಿ ಹಾಕುತ್ತಿರಬೇಕು. ಯಾವಾಗಲೂ ನೀರಿನ ಆಳ 10 ಸೆಂ.ಮೀ. ಇರುವ ಹಾಗೆ ನೋಡಿಕೊಳ್ಳಬೇಕು. ಪ್ರತಿ ತಿಂಗಳಿಗೊಮ್ಮೆ ಅಝೋಲ್ಲಾ ಘಟಕದ ತಳಕ್ಕೆ ಹಾಕಿದ ಮಣ್ಣನ್ನು ತಾಜಾ ಫಲವತ್ತಾದ ಮಣ್ಣಿನಿಂದ ಬದಲಾಯಿಸಬೇಕು. ಇದರಿಂದ ಸಾರಜನಕದ ಜಮಾವಣೆಯನ್ನು ನಿಯಂತ್ರಿಸಿ ಲಘು ಪೋಷಕಾಂಶಗಳ ಲಭ್ಯತೆಗೆ ಅಡತಡೆ ಯಾಗುವುದಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ಅಝೋಲ್ಲಾ ಘಟಕವನ್ನು ಸ್ವಚ್ಚಗೊಳಿಸಿ ಶುದ್ಧನೀರು, ಫಲವತ್ತಾದ ಮಣ್ಣು ಮತ್ತು ತಾಜಾ ಅಝೋಲ್ಲಾವನ್ನು ಹಾಕಿ ಬದಲಾವಣೆ ಮಾಡುತ್ತಿರಬೇಕು.

ಅಝೋಲ್ಲಾ ಬಳಕೆ ಮಾಡುವ ವಿಧಾನ:

ಅಝೋಲ್ಲಾ ಘಟಕ ಸ್ಥಾಪನೆಯಾದ ಒಂದು ವಾರಕ್ಕೆ ಕಟಾವು ಪ್ರಾರಂಭ ಮಾಡಬೇಕು. ಪ್ರತಿ ಚದರ ಮೀಟರಿಗೆ 250-300 ಗ್ರಾಂ ನಷ್ಟು ಅಝೋಲ್ಲಾವನ್ನು ಕಟಾವು ಮಾಡಬಹುದು. ಕಟಾವು ಮಾಡಿದ ಅಝೊಲ್ಲಾವನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದು ಉಪಯೋಗಿಸಬೇಕು. ಅಝೋಲ್ಲಾವನ್ನು ಹಿಂಡಿಯ ಜೊತೆಗೆ 1:1 ಪ್ರಮಾಣದಲ್ಲಿ ಪಶುಗಳಿಗೆ ಕೊಡಬೇಕು. ಪ್ರಾರಂಭದಲ್ಲಿ 200ಗ್ರಾಂ ನಿಂದ ಪ್ರಾರಂಭ ಮಾಡಿ ಪ್ರಮಾಣವನ್ನು 5 ಕೆ.ಜಿ ವರೆಗೂ ಹೆಚ್ಚಿಸಬಹುದು. ಶೇ 50 ರಷ್ಟು ಹಿಂಡಿಯ ಬದಲಾಗಿ ಅಝೋಲ್ಲಾವನ್ನು ಉಪಯೋಗಿಸಬಹುದು ಎಂದು ಕಂಡುಬಂದಿದೆ. ಒಂದು ಎಕರೆ ಪ್ರದೇಶದಿಂದ ಅಂದಾಜು 15 ಟನ್‌ ಇಳುವರಿ ಒಂದು ವರ್ಷದಲ್ಲಿ ಪಡೆಯಲು ಸಾಧ್ಯ.

ಇತ್ತೀಚಿನ ಸುದ್ದಿಗಳು

Related Articles