Thursday, September 19, 2024

ಎಲೆ ಚುಕ್ಕೆ : ಕಡೆಗಣಿಸಿದರೆ ಇಳಿದೀತು ಅಡಿಕೆ ಇಳುವರಿ, ಯಾವ ರೋಗಾಣು ಕಾರಣ, ರೋಗದ ಲಕ್ಷಣಗಳೇನು? ನಿರ್ವಹಣೆ ಹೇಗೆ??

ಎಲೆ ಚುಕ್ಕೆ ರೋಗವನ್ನು ಅಡಿಕೆ ಸಸಿ ಮತ್ತು ಸಣ್ಣ ಮರಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಕಾಣಬಹುದು. ಕೆಳಭಾಗದ ಒಂದೆರಡು ಸೋಗೆಗಳಲ್ಲಿ ಚುಕ್ಕೆಗಳಿರುತ್ತವೆ. ಇತ್ತೀಚೆಗೆ ಈ ರೋಗವು ಹಲವೆಡೆ ಗಂಭೀರ ಸ್ವರೂಪವನ್ನು ಪಡೆದಿದೆ. ತಕ್ಷಣ ನಿರ್ವಹಣಾ ಕ್ರಮಗಳನ್ನು ಅನುಸರಿಸಿಕೊಳ್ಳಬೇಕಾಗಿದ್ದು ಅನಿವಾರ್ಯ.

ಮೊಟ್ಟಮೊದಲು ಎಲೆಚುಕ್ಕೆ ರೋಗದ ತೀವ್ರತೆಯನ್ನು ಗಮನಿಸಿದ್ದು ಭಾರತದ ಈಶಾನ್ಯ ಭಾರತದ ರಾಜ್ಯ ತ್ರಿಪುರದ ಜಂಪುಯಿ ಹಿಲ್ಸ್ ಪ್ರದೇಶದಲ್ಲಿದೆ.ಕರ್ನಾಟಕದ ಮೂಡಿಗೆರೆ ತಾಲೂಕಿನ ಕಳಸದ ಮರಸಣಿಗೆ ಪ್ರದೇಶದಲ್ಲ್ಲೂ ಈ ರೋಗ ಕಾಣಿಸಿಕೊಂಡಿತ್ತು. ಮರಸಣಿಗೆಯಲ್ಲಿ ಮೊದಲು ಕೆಲವೇ ತೋಟಗಳಿಗೆ ಸೀಮಿತವಾಗಿದ್ದ ರೋಗಲಕ್ಷಣ, ಮರು ವರ್ಷದಲ್ಲಿ ಹಲವು ತೋಟಗಳಿಗೆ ಹಬ್ಬಿತ್ತು.

ಗಾಳಿ ಮೂಲಕ ಹರಡುವ ಕಾರಣ, ಪ್ರಾಥಮಿಕ ಹಂತದಲ್ಲೆ ನಿರ್ವಹಣೆ ಮಾಡದಿದ್ದರೆ, ಇದನ್ನು ನಿಯಂತ್ರಿಸುವುದು ಕಷ್ಟ. ಈಗ ಶಿವಮೊಗ್ಗದ ನಿಟ್ಟೂರು, ಚಿಕ್ಕಮಗಳೂರಿನ ಶೃಂಗೇರಿ ಮತ್ತು ಕಳಸ ಮಡಿಕೇರಿಯ ಸಂಪಾಜೆ, ದ.ಕ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ ಮತ್ತು ಕಡಬ, ಕಾಸರಗೋಡಿನ ಸ್ವರ್ಗ ಮತ್ತು ಮುಳ್ಳೇರಿಯ ಸೇರಿದಂತೆ ಹಲವು ಪ್ರದೇಶದಲ್ಲಿ ಎಲೆ ಚಿಕ್ಕೆ ರೊಗದ ಲಕ್ಷಣಗಳು ಕಾಣಿಸಿಕೊಂಡಿವೆ. ಕೇರಳ ಮತ್ತು ತಮಿಳುನಾಡಿಗೂ ರೋಗ ಪಸರಿಸಿದೆ.

ಇದನ್ನೂ ಓದಿ: Crop insurance: ಬೆಳೆ ವಿಮೆ ಪರಿಹಾರ ಹೇಗೆ ರೈತರಿಗೆ ದೊರೆಯುವುದು ???
ರೋಗಾಣು :


ಫಿಲೋಸ್ಟಿಕಾ ಅರೆಕೆ ಮತ್ತು ಕೊಲೆಟೋಟ್ರೈಕಮ್ ಸ್ಪಿಸಿಸ್ ಎನ್ನುವ ಶಿಲೀಂದ್ರಗಳು ಇದಕ್ಕೆ ಕಾರಣ. ಕೊಲೆಟೋಟ್ರೈಕಮ್ ಶಿಲೀಂಧ್ರವು ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗವನ್ನು ಉಂಟುಮಾಡುತ್ತದೆ. ಈ ಶಿಲೀಂಧ್ರದ ಬೇರೆ ಬೇರೆ ಉಪಜಾತಿಗಳು (C. Fructicola, C, karstii, C.siamense etc) ತರುವ ಸಂಕೀರ್ಣ ರೋಗವಿದು. ಹಿಂಗಾರ ಒಣಗುವ ರೋಗದಿಂದ ಒಂದು ವರ್ಷದ ಫಸಲು ಮಾತ್ರ ನಷ್ಟವಾಗುತ್ತದೆ. ಆದರೆ ಎಲೆ ಚುಕ್ಕೆ ರೋಗದಿಂದ ಪತ್ರ ಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಟಿತವಾಗುತ್ತದೆ. ಇದು ಮರದ ಬೆಳವಣಿಗೆ ಮತ್ತು ಇಳುವರಿ ಮೇಲ ಧೀರ್ಘ ಕಾಲ ದುಷ್ಪರಿಣಾಮ ಬೀರಬಹುದು.

ರೋಗ ಲಕ್ಷಣಗಳು:

ಅಡಿಕೆ ಸೋಗೆಯಲ್ಲಿ ಕಂದು ಬಣ್ಣದ ಸಣ್ಣ ಚಿಕ್ಕೆ ಮೂಡಿ, ಹಳದಿ ಬಣ್ಣದಿಂದ ಅಮೃತವಾಗಿದ್ದರೆ, ಅದು ಎಲೆ ಚುಕ್ಕೆ ರೋಗವೆಂದರ್ಥ ಕೆಲವೊಮ್ಮೆ ಕಪ್ಪು ಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕೆಗಳನ್ನೂ ಕಾಣಬಹುದು. ಈ ರೀತಿಯ ಸಣ್ಣ ಚಿಕ್ಕೆಗಳು ದೊಡ್ಡದಾಗಿ, ಒಂದಕ್ಕೊಂದು ಸೇರಿ ಇಡೀ ಸೋಗೆಗೆ ಹಬ್ಬಿ ಅದನ್ನು ಒಣಗಿಸುತ್ತವೆ. ಮೊಟ್ಟಮೊದಲು ಕೆಳಭಾಗದ ಒಂದೆರಡು ಎಲೆಗಳಲ್ಲಿ ರೋಗಲ್ಷಣ ಕಾಣುತ್ತದೆ. ರೋಗತೀವ್ರತೆ ಹೆಚ್ಚಾದಾಗ ನಾಲ್ಕ್ಯದು ಎಲೆಗಳಿಗದು ಹಬ್ಬಿರುತ್ತದೆ. ಹೆಚ್ಚು ಗಾಳಿಯಿರುವ ಪ್ರದೇಶದಲ್ಲಿ ಎಲೆಯಲ್ಲಿ ಕಡ್ಡಿ ಮಾತ್ರ ಉಳಿಯುತ್ತದೆ.

ನಿರ್ವಹಣೆ ಹೇಗೆ?

•ಅಧಿಕ ರೋಗಭಾದಿತ ಎಲೆಗಳನ್ನು ತುಂಡರಿಸಿ ತೆಗೆದು ನಾಶ ಮಾಡುವುದು ಸೋಂಕು ಕಡಿಮೆಗೊಳಿಸಲು ಪ್ರಯೋಜನಕಾರಿ. ಈ ಕೆಲಸ ಪ್ರಾಯೋಗಿಕವಾಗಿ ಕಷ್ಟ ಆದರೆ, ತೀವ್ರ ಬಾಧೆಯಿರುವಲ್ಲಿ ಅನಿವಾರ್ಯ.
•ರೋಗಬಾಧಿತ ತೋಟದಲ್ಲಿ ಅಡಿಕೆ ಕೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಮಾಡುವುದೊಳಿತು.


•ಹೆಚ್ಚು ಬಾಧೆಯಿರುವ ತೋಟದಲ್ಲಿ ಅಗಸ್ಟ- ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ ಪ್ರೋಪಿಕೊನಝೋಲ್ (Propiconazole 25 EC) ಶಲೀಂದ್ರ ನಾಶಕಗಳನ್ನು ಎಲೆಗಳಿಗೆ ಸಿಂಪರಣೆ ಮಾಡಬೇಕು. ಪ್ರಮಾಣ: ಒಂದು ಲೀಟರ್ ನೀರಿಗೆ ಒಂದು ಮಲ್ಲಿಲೀಟರ್.ಎರಡನೇ ಸಿಂಪಡಣೆಗೆ ಕಾರ್ಬೇನ್ಡಜಿಮ್ + ಮಾಂಕೋಜೆಬ್ ( ಒಂದು ಲೀಟರ್ ನೀರಿಗೆ ಎರಡು ಗ್ರಾಂ) ಬಳಸಬಹುದು. ಅಥವಾ ಅಂತರ್ವ್ಯಾಪಿ ಶೀಲೀಂದ್ರನಾಶಕಗಳಾದ ಟೆಬುಕೊನಝೋಲ್ (Tebuconazole 25.9%) ಮತ್ತು ಹೆಕ್ಸಾಕೊಝೋಲ್ (Hexaconazole 5 EC) ಅನ್ನೂ ಬಳಸಬಹುದು. ಪ್ರಮಾಣ: ಒಂದು ಲೀಟರ್ ನೀರಿಗೆ ಒಂದು ಮಿಲ್ಲಿಲೀಟರ್.


•ತೀವ್ರ ರೋಗಬಾಧೆ ಇರುವಲ್ಲಿ ಜನವರಿ ನಂತರ ಸಿಂಗಾರ ಒಣಗುವ ರೋಗಕ್ಕೆ ಪ್ರೋಪಿಕೊನಝೋಲ್ ಶೀಲೀಂದ್ರನಾಶಕ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬಹುದು.


•ರೋಗಬಾಧೆ ಇರುವ ಕೆಲವು ತೋಟಗಳಲ್ಲಿ ಪೊಟಾಶಿಯಂ ಅಂಶ ಅಡಿಕೆ ಇರುವುದನ್ನು ಗಮನಿಸಲಾಗಿದೆ.ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ನೀಡುವುದೊಳಿತು. ಸಾಮಾನ್ಯವಾಗಿ. ಅಡಿಕೆ ಮರಕ್ಕೆ 12 ಕಿಲೋ ಗ್ರಾಂ ಹಟ್ಟಿ ಗೊಬ್ಬರ ಮತ್ತು ಹಸಿರೆಲೆ, ಯೂರಿಯ(220 ಗ್ರಾಂ), ಫಾಸ್ಪೇಟ್ (200 ಗ್ರಾಂ) ಮತ್ತು ಪೊಟಾಷ್ (240- 350 ಗ್ರಾಂ) ನೀಡಬೆಕು. ರಸಗೊಬ್ಬರಗಳನ್ನು ಕನಿಷ್ಠ ೆರಡು ಕಂತುಗಳಲ್ಲಿ ನೀಡಬೇಕು. ಜೊತೆಗೆ ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಕೂಡ ನೀಡಬಹುದು.

ಇದನ್ನೂ ಓದಿ: P M Kisan Samman Nidhi Scheme: ಫಲಾನುಭವಿಗಳಿಗೆ ಆಧಾರಗೆ ಮೊಬೈಲ್ ಲಿಂಕ್ ಆಗದೇ ಇದ್ದರೂ ಕೆವೈಸಿ ಮಾಡಿಸಬಹುದು ಎಂದು ಸಿಹಿಸುದ್ದಿ ನೀಡಿದ ಇಲಾಖೆ:

ಈ ರೋಗವು ಸಿಂಗಾರ ಅಥವಾ ಬೆಳೆಗೆ ತೊಂದರೆ ಉಂಟುಮಾಡುವುದಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ. ಹಾಗಾಗಿ, ತೀವ್ರ ಬಾಧಿತ ಎಲೆಗಳ ನಾಶ ಮತ್ತು ಶಿಲೀಂದ್ರನಾಶಕದ ಸೂಕ್ತ ಬಳಕೆ, ಸಮುದಾಯ ಮಟ್ಟದ ರೋಗ ನಿಯಂತ್ರಣ ಕ್ರಮಗಳು ಬಲು ಮುಖ್ಯವಾಗುತ್ತವೆ.

ಮಾಹಿತಿ ಕೃಪೆ: ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು.

ಇತ್ತೀಚಿನ ಸುದ್ದಿಗಳು

Related Articles