ನಮಸ್ಕಾರ ರೈತರೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು 2024ರ ಆಳ್ವಾಸ್ ವಿರಾಸತ್ ಆಯೋಜನೆಯ ದಿನಾಂಕವನ್ನು ನಿಗದಿ ಪಡಿಸಿದೆ. ಅದರ ಜೊತೆಯಲ್ಲಿ ರೈತರ ಸಂತೆ ಮತ್ತು ಕೃಷಿ ಮೇಳ ಸಹ ಆಯೋಜನೆ ಮಾಡಲಾಗುತ್ತಿದೆ.
ಹೌದು ರೈತರೇ, ಡಿಸೆಂಬರ್ 10 ರಿಂದ 15 ರವರೆಗೆ ಅನ್ವೇಷನಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ 5 ದಿನಗಳ ಕಾಲ ಆಳ್ವಾಸ್ ಶಿಕ್ಷಣ ಸಂಸ್ಥೆಯು 2024ರ ಆಳ್ವಾಸ್ ವಿರಾಸತ್ ಜೊತೆಗೆ ರೈತರ ಸಂತೆ ಮತ್ತು ಕೃಷಿ ಮೇಳವನ್ನು ಪ್ಯಾಲೇಸ್ ಗ್ರೌಂಡನಲ್ಲಿ ನಡೆಸಲಿದೆ.
ಆಹಾರೋತ್ಸವ-ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ:ಅಕ್ರಮವಾಗಿ ಪಡೆದ ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮದು ಉಂಟೇ ಚೆಕ್ ಮಾಡಿಕೊಳ್ಳಿ.
ಆಹಾರೋತ್ಸವ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳು, ಫಾಸ್ಟಫುಡ್ ಹಾಗೂ ವೈವಿಧ್ಯಮಯ ಪಾನೀಯಗಳಿಗೆ ಸಂಬಂಧಿಸಿದ ಸಿಧ್ಧ ಮತ್ತು ಸ‍್ಥಳದಲ್ಲೇ ತಯಾರಿಸಿ ನೀಡುವ ಆಹಾರ ಮಳಿಗೆ ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಹೂವು ಬೀಜಗಳ ಮಾರಾಟ, ನರ್ಸರಿಗಳು, ಸಾವಯವ, ರಾಸಾಯನಿಕ ಗೊಬ್ಬರಗಳು, ಕೃಷಿ ಪರಿಕರ/ಉಪಕರಣ, ಯಂತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಬಾರಿಯ ಪ್ರಮುಖ ಆಕರ್ಷಣೆ ಎಂದರೆ ರೈತರ ಸಂತೆ. ಈ ರೈತರ ಸಂತೆಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಮೊದಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮೊದಲು ಬಂದವರಿಗೆ ಮೊದಲ ಆದ್ಯತೆ.
ಕರಕುಶಲ ವಸ್ತುಗಳಾದ ಸೆರಾಮಿಕ್ಸ ಮತ್ತು ಗಾಜಿನ ವಸ್ತುಗಳು, ಫೈಬರ್ ಮತ್ತು ಜವಳಿ ಕರಕುಶಲ ವಸ್ತುಗಳು, ಹೂವಿನ ವಸ್ತುಗಳು, ಚರ್ಮದ ಕರಕುಶಲ ವಸ್ತುಗಳು, ಗೃಹಪಯೋಗಿ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಹಾರ ಮತ್ತು ಕರಕುಶಲ ಮೇಳದ ಮಾರಾಟ ಮತ್ತು ಪ್ರದರ್ಶನ ಕೃಷಿಸಿರಿ ವೇದಿಕೆಯಲ್ಲಿ ನಡೆಯಲಿದೆ. ಒಟ್ಟಾರೆ ಈ ಮೇಳದಲ್ಲಿ 500 ರಿಂದ 600 ಮಳಿಗೆಗಳನ್ನು ತೆರೆಯಲು ಅವಕಾಶವಿದ್ದು, ಆಸಕ್ತ ವ್ಯಾಪರಿಗಳು ನೋಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ:ರಾಜ್ಯದ 17.61 ಲಕ್ಷ ರೈತರಿಗೆ 2.021 ಕೋಟಿ ಬೆಳೆ ವಿಮೆ ಹಣ ಜಮೆ ಮಾಡಲಾಗಿದೆ! ನಿಮಗೆ ಬಂತೆ ಚೆಕ್ ಮಾಡಿಕೊಳ್ಳಿ.
ಮಳಿಗೆ ಹಾಕಲು ಮತ್ತು ವ್ಯಾಪಾರ ಮಾಡಲು ಮಳಿಗೆ ಪಡೆಯಲು ಸಂಪರ್ಕಿಸಿ.
ನರ್ಸರಿ ಮಳಿಗೆಗೆ – ಡಾ.ಕೆವಿ ಸುರೇಶ್ -9880496920 ಡಾ.ರಾಹುಲ್ ಫಾಟಕ್ -8197025728
ಡಾ.ಶಶಿಕುಮಾರ್ -9113019074
ಆಹಾರ ಮತ್ತು ಕರಕುಶಲ ಮಳಿಗೆಗೆ- ನಾರಾಯಣ-8197487197 ಮಹೇಶ-8050499626