ಕರ್ನಾಟಕ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅಕ್ರಮವಾಗಿ ಮತ್ತು ಆದಾಯ ತೆರಿಗೆ ಕಟ್ಟುತ್ತೀರುವವರ ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆ ಮಾಡಲಾಗಿದ್ದು! ಆ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಉಂಟೇ ಚೆಕ್ ಮಾಡಿಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ನಕಲಿ-ಅಕ್ರಮ ಬಿಪಿಎಲ್ ಕಾರ್ಡ್ (BPL card cancelled) ಹೊಂದಿರುವರು ಹೆಚ್ಚಾಗಿದ್ದಾರೆ. ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದರು BPL card ಹೊಂದಿರುವವರನ್ನು ಆಹಾರ ಇಲಾಖೆಯು ಹುಡಕಿ ಅಂತವರ ರೇಷನ್ ಕಾರ್ಡನ್ನು ರದ್ದು ಪಡಿಸಲಾಗುತ್ತಿದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಒಟ್ಟು 11 ಲಕ್ಷ ಅನರ್ಹ ಬಿಪಿಎಲ್ ಕಾರ್ಡದಾರರನ್ನು ಹುಡುಕುವ ಕಾರ್ಯ ಭರದಿಂದ ಸಾಗಿದ್ದು ಸರಕಾರಿ ನೌಕರಿಯಲ್ಲಿರುವವರು, ವಾರ್ಷಿಕ ಆದಾಯ ತೆರಿಗೆ ಪಾವತಿಸುವವರು ಸಹ ಬಿಪಿಎಲ್ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ.
BPL card suspension list- ರೇಷನ್ ಕಾರ್ಡ್ ರದ್ದಾದ ಪಟ್ಟಿ ನೋಡುವ ವಿಧಾನ.
ಆಹಾರ ಇಲಾಖೆಯಿಂದ ನಕಲಿ ಬಿಪಿಎಲ್ ಕಾರ್ಡದಾರರ ಹುಡುಕಿ ರದ್ದು ಪಡಿಸುವ ಕಾರ್ಯ ನಡೆದಿದ್ದು ಅಂತಹ ಅನರ್ಹ ಪಟ್ಟಿಯನ್ನು ಈ ಕೆಳಗಿನ ವಿಧಾನದ ಮೂಲಕ ನೋಡಬಹುದು.
ವಿಧಾನ-1:ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ ಲಿಂಕ್ (Ration card cancelled list) ಮೂಲಕ ಪ್ರವೇಶ ಮಾಡಬೇಕು.
ವಿಧಾನ-2:ನಂತರ ಅದರಲ್ಲಿ ಇ-ರೇಷನ್ ಕಾರ್ಡ(E-ration card) ನಲ್ಲಿ show cancelled/suspended list ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-3:ಅದಾದಮೇಲೆ ಜಿಲ್ಲೆ, ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಬೇಕು ನಂತರ go ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ತಾಲೂಕಿನಲ್ಲಿ ಆ ತಿಂಗಳಿನಲ್ಲಿ
ರದ್ದಾದ ಎಲ್ಲಾ ರೇಷನ್ ಕಾರ್ಡ ದಾರರ ಪಟ್ಟಿ ಬರುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ ಉಂಟೆ ಚೆಕ್ ಮಾಡಿಕೊಳ್ಳಿ.
BPL card suspension-ಬಿಪಿಎಲ್ ಕಾರ್ಡ ಪಡೆದ ಅನರ್ಹರು ಯಾರು?
1)ಆದಾಯ ತೆರಿಗೆ ಪಾವತಿಸುವವರು.
2)ಸರಕಾರಿ ಮತ್ತು ಅರೆ ಸರಕಾರಿ ಕಛೇರಿಯಲ್ಲಿ ನೌಕರಿಯನ್ನು ಮಾಡುತ್ತಿರುವವರು ಕಾರ್ಡ ಪಡೆಯಲು ಅನರ್ಹರು.
3)ಸ್ವಂತ ಮನೆಯನ್ನು ಕಟ್ಟಿಸಿ ಆ ಮನೆಗಳನ್ನು ಬಾಡಿಗೆಗೆ ನೀಡಿರುವವರು.
4)7.5 ಹೆಕ್ಟೇರ್ ಗಿಂತ ಅಧಿಕ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ ಪಡೆಯಲು ಅರ್ಹರಲ್ಲ ಎಂದು ಇಲಾಖೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸೂಚನೆ: ಅಕ್ರಮವಾಗಿ ರೇಷನ್ ಕಾರ್ಡ್ ಪಡೆದುಕೊಂಡಿದ್ದರೆ ಸ್ವಇಚ್ಛೆ ಮೂಲಕ ಹಿಂದುರಿಗಿಸಬಹುದು. ಅವರಿಗೆ ದಂಡದ ಪ್ರಮಾಣ ಕಡಿಮೆ.
ಆಹಾರ ಇಲಾಖೆಯ ಲಿಂಕ್: Click here….