Thursday, September 19, 2024

Agriculture land info-ಹೊಲದಲ್ಲಿ ಕಾಲುದಾರಿ ಹಾಗೂ ಬಂಡಿದಾರಿ ಮುಚ್ಚುವಂತಿಲ್ಲ:ಎಂದು ರಾಜ್ಯ ಸರಕಾರದ ಆದೇಶ. ಸಮಸ್ಯೆ ಮಾಡಿದಲ್ಲಿ ಹೀಗೆ ಮಾಡಿ.

ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಗ್ರಾಮ ನಕಾಶೆ ಪ್ರಕಾರ ಇರುವ ಕಾಲುದಾರಿ, ಬಂಡಿದಾರಿ ಅಥವಾ ಇತರೆ ದಾರಿಗಳನ್ನು ಯಾವುದೇ ಜಮೀನಿನ ಮಾಲೀಕ ಮುಚ್ಚುವುದು ಕಾನೂನು ಬಾಹಿರ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ರೈತರು ಕೃಷಿ ಉದ್ದೇಶಕ್ಕೆ ಬಳಸುವ ಕೃಷಿ ಸಲಕರಣೆ ಸಾಗಿಸಲು, ಬೆಳೆ ಸಾಗಿಸಲು ಅನ್ಯ ಭೂ ಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಹಲವು ದೂರುಗಳು ಇಲಾಖೆಗೆ ಬಂದಿದ್ದು, ಗ್ರಾಮ ನಕಾಶೆ ಪ್ರಕಾರ ಗುರುತಿಸಿರುವ ಕಾಲುದಾರಿ, ಬಂಡಿದಾರಿಗಳಲ್ಲಿ ರೈತರು ಸಂಚರಿಸಲು ಯಾವುದೇ ಅಡ್ಡಿ ಮಾಡುವಂತಿಲ್ಲ.

ಆದರೂ ಕೆಲ ಭೂ ಮಾಲೀಕರು ತಮ್ಮ ಭೂಮಿ ಮೂಲಕ ಹಾದು ಹೋಗಬೇಕಿರುವ ರೈತರಿಗೆ ತಿರುಗಾಡಲು ಅಡ್ಡಿಪಡುತ್ತಿದ್ದಾರೆ. ರಸ್ತೆ ಗುರುತಿಸಿರುವ ಜಾಗಗಳನ್ನು ಮುಚ್ಚಿಸುವುದು, ರೈತರು ಬಹುಕಾಲದಿಂದ ಬಳಸುವ ದಾರಿಗಳಲ್ಲಿ ತಿರುಗಾಡಲು ವೈಯಕ್ತಿಕ ದ್ವೇಷದಿಂದ ಅಡ್ಡಿಪಡಿಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಆದೇಶವನ್ನು ಜಾರಿ ಮಾಡಿದೆ.

ಇದನ್ನೂ ಓದಿ: ಕಿಸಾನ್ ಸಮ್ಮಾನ್ ರೂ.2000  ಹಣ ಬಂದಿಲ್ಲವೇ, ಇಲ್ಲಿವೇ ಕಾರಣಗಳು!

ಕರ್ನಾಟಕ ಭೂ ಕಂದಾಯ ನಿಯಮಗಳು 1996ರ ನಿಯಮ 59ರ ಅಡಿ ‘ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ’ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ದಾರಿ ಬಿಡಲು ಸಂಬಂಧಪಟ್ಟ ಜಮೀನುಗಳವರು ಒಪ್ಪಿದರೆ ಹಕ್ಕುಗಳ ದಾಖಲೆ ರಿಜಿಸ್ಟರ್ ನಲ್ಲಿ ನಮೂದಿಸಲು ಅವಕಾಶವಿದೆ.

ಇಂಡಿಯನ್ ಅಮೇಡಮೆಂಟ್ ಆ್ಯಕ್ಟ್ 1882ರ ಪ್ರಕಾರ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕುನ್ನು ಹೊಂದಿದ್ದಾರೆ. ಇದಕ್ಕೆ ನೆರೆ ಹೊರೆಯ ಜಮೀನಿನವರು ಯಾವುದೇ ತಂಟೆತಕರಾರು ತರುವಂತಿಲ್ಲ.

 ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವಲ್ಲಿ ಸಮಸ್ಯೆ ಮಾಡಿದಲ್ಲಿ ಹೀಗೆ ಮಾಡಿ.

ಇದನ್ನೂ ಓದಿ: Fid(ರೈತರ ನೋಂದಣಿ) ಮಾಡಿದ್ದರೂ ಬೆಳೆ ವಿಮೆಯಲ್ಲಿ ಸರ್ವೇ ನಂಬರ್ ಕಾಣಿಸುತ್ತಿಲ್ಲವೇ ಇಲ್ಲಿದೆ ಕಾರಣ!

ಇಂತಹ ಸಮಸ್ಯೆ ಬಗೆಹರಿಸಲು ತಾಲೂಕಿನ ತಹಸೀಲ್ದಾರ್ ಗಳ ಗಮನಕ್ಕೆ ತರಬೇಕು ಅವರು ಕ್ರಮ ಕೈಗೊಳ್ಳುತ್ತಾರೆ. ನಕಾಶೆ ಪ್ರಕಾರ ಿರುವ ಕಾಲು ದಾರಿ, ಬಂಡಿ ದಾರಿ, ಅಥವಾ ಇತರೆ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ಬಳಸುವ ದಾರಿಯನ್ನು ಮುಚ್ಚಿಸಿರುವ ಪ್ರಕರಣಗಳು ಕಂಡು ಬಂದರೆ ಕೂಡಲೇ ತೆರವುಗೊಳಿಸಬೇಕೆಂದು ಸರಕಾರದ ಆದೇಶವಿದೆ.

ಇತ್ತೀಚಿನ ಸುದ್ದಿಗಳು

Related Articles