ನಮಸ್ಕಾರ ರೈತರೇ, ಎಷ್ಟೋ ಜನ ರೈತರಿಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ ಎಂದು ಸರಿಯಾದ ಮಾಹಿತಿ ಇರುವುದಿಲ್ಲ ನಾವು ಈ ದಿನ ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿಕೊಡುತ್ತೇವೆ.
ಹೌದು ರೈತರೇ, ರೈತರನ್ನು ಆರ್ಥಿಕವಾಗಿ ಸಭಲರನ್ನಾಗಿಸಲು ಹಲವಾರು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಅದರಲ್ಲಿ ಪ್ರಧಾನವಾಗಿ ಕೃಷಿ ಇಲಾಖೆಯು ಒಂದಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಹಾಗೂ ಪಡೆದುಕೊಳ್ಳುವ ವಿಧಾನದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಈ ಎಲ್ಲಾ ಇಲಾಖೆಗಳಲ್ಲಿ ರೈತರಿಗೆ ಹಲವಾರು ಯೋಜನೆಗಳು ಜಾರಿಯಲ್ಲಿವೆ ಈ ಎಲ್ಲಾ ಇಲಾಖೆಗಳು ರೈತರಿಗೆ ವಿವಿಧ ಸವಲತ್ತುಗಳನ್ನು ವಿರತಣೆ ಮಾಡುತ್ತವೆ.
ಕೃಷಿ ಇಲಾಖೆಯಿಂದ ಪ್ರತಿಯೊಂದು ಹೋಬಳಿ(ಪಿರ್ಕಾ) ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ ಕಛೇರಿಗಳನ್ನು ಹೊಂದಿದೆ. ಈ ಕಛೇರಿಗಳು ಹೋಬಳಿ ಮಟ್ಟದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. ರೈತರು ತಮಗೆ ಕೃಷಿ ಮಾಹಿತಿ ಮತ್ತು ಸೌಲಭ್ಯಗಳು ಬೇಕಾದಲ್ಲಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ:ಶೇ.80% ಸಹಾಯಧನ ಕೃಷಿಹೊಂಡ ಮಾಡಿಕೊಳ್ಳಲು!
Agriculture department schemes-ಕೃಷಿ ಇಲಾಖೆಯ ಸೌಲಭ್ಯಗಳು:
1)ಕೃಷಿ ಬಿತ್ತನೆ ಬೀಜಗಳು(ಪ್ರತಿ ಮೂರು ಹಂಗಾಮಿಗು ನೀಡಲಾಗುತ್ತದೆ)
2)ಲಘು ಪೋಷಕಾಂಶಗಳು(ಜಿಪ್ಸಂ,ಸುಣ್ಣ,ಬೋರಾನ್,ಜಿಂಕ್ ಸಲ್ಫೇಟ್)
3)ಸಸ್ಯ ಸಂರಕ್ಷಣಾ ಔಷಧಿಗಳು(ಬೆಳೆಗಳ ಮದ್ದು)
4)ಕೃಷಿ ಯಂತ್ರೋಪಕರಣಗಳು(ಪವರ್ ವೀಡರ್, ಪವರ್ ಸ್ರ್ಪೇಯರ್, ಪವರ್ ಟಿಲ್ಲರ್, ಟ್ರ್ಯಾಕ್ಟರ್, ಬ್ಯಾಕ್ ಪ್ಯಾಕ್ ಸ್ರ್ಪೇಯರ್, ಕೋನೋವೀಡರ್, ಇನ್ನಿತರ ಕೃಷಿ ವಸ್ತುಗಳು)
5)ತುಂತುರು ನೀರಾವರಿ ಯೋಜನೆಯಡಿ ಪಿ.ವಿ.ಸಿ ಪೈಪು, ಸ್ಪೀಂಕ್ಲರ್ ವಿತರಣೆ ಮತ್ತು ಡ್ರಿಪ್ ಪೈಪು ವಿತರಣೆ.
6)ಕೃಷಿ ಭಾಗ್ಯಯೋಜನೆ(ಕೃಷಿ ಹೊಂಡ)
7)ಕಿಸಾನ್ ಸಮ್ಮಾನ ನಿಧಿ ಯೋಜನೆ.
8)ಮಣ್ಣು ಆರೋಗ್ಯ ಕಾರ್ಡ್ ವಿತರಣೆ.
9)ರೈತರ ನೊಂದಣಿ(FID).
10)ಆತ್ಮ ಯೋಜನೆ(ತರಬೇತಿಗಳು, ಪ್ರವಾಸ, ಪ್ರಾತ್ಯಕ್ಷಿಕೆ)
Application documents-ಸೌಲಭ್ಯಗಳನ್ನು ಪಡೆಯಲು ದಾಖಲೆಗಳು:
1)RTC/ಪಹಣಿ ಪ್ರತಿ.
2)ಆಧಾರ್ ಕಾರ್ಡ್ ಪ್ರತಿ.
3)ಬ್ಯಾಂಕ್ ಪಾಸ್ ಬುಕ್ ಪ್ರತಿ.
4)ರೇಷನ್ ಕಾರ್ಡ್ ಪ್ರತಿ.
5)1 ಫೋಟೋ
ಇದನ್ನೂ ಓದಿ:ಕಿಸಾನ್ ಯೋಜನೆಯ ಸೌಲಭ್ಯ ಪಡೆಯಲು ಇಕೆವೈಸಿ ಮಾಡಿಸಿ!
6)ಪ.ಜಾತಿ/ಪ.ಪಂಗಡ ಜಾತಿ ಪ್ರಮಾಣ ಪತ್ರ.
7)ಕೃಷಿ ಇಲಾಖೆ ಸೌಲಭ್ಯಗಳ ಅರ್ಜಿ ಫಾರ್ಂ.
8)ಕೃಷಿ ಅಧಿಕಾರಿಗಳು ಹೇಳುವ ಇತರೆ ದಾಖಲೆಗಳು.
ಹೆಚ್ಚಿನ ಮಾಹಿತಿಗೆ ರೈತರು ತಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಮತ್ತು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಮಾಹಿತಿ ಪಡೆಯಬಹುದು.