Friday, November 22, 2024

ಕೃಷಿ ಇಲಾಖೆಯಲ್ಲಿ ಯಾವೆಲ್ಲಾ ಉಪಕರಣಗಳು ಸಹಾಯಧನದಲ್ಲಿ ದೊರೆಯುವವು?

Agriculture equipment subsidy: ಕೃಷಿ ಇಲಾಖೆಯಲ್ಲಿ ಯಾವೆಲ್ಲಾ ಉಪಕರಣಗಳು ಸಹಾಯಧನದಲ್ಲಿ ದೊರೆಯುವವು?
ಅಗತ್ಯ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸುವುದು ಎಲ್ಲಿ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

ಅತ್ಮೀಯ ರೈತ ಬಾಂದವರೇ ಆಧುನಿಕ ದಿನಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಕೂಲಿ- ಕಾರ್ಮಿಕರ ಕೊರತೆ ಹೆಚ್ಚುತ್ತಿದ್ದು ಇದಕ್ಕೆ ಪರ್ಯಾಯವಾಗಿ ಕೃಷಿಯಲ್ಲಿ ತಾಂತ್ರಿಕತೆ ಮತ್ತು ಕೃಷಿ ಯಂತ್ರೋಪಕರಣ ಬಳಕೆ ಅವಶ್ಯಕವಾಗಿದೆ. ಕಡಿಮೆ ಮತ್ತು ಅತೀ ಕಡಿಮೆ ಜಮೀನು ಹೊಂದಿರುವ ಮತ್ತು ಅರ್ಥಿಕವಾಗಿ ಹಿಂದುಳಿದ ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಗೆ (agriculture equipment subsidy scheme) ಕೃಷಿ ಇಲಾಖೆಯಿಂದ ಪ್ರತಿ ವರ್ಷ ಸಹಾಯಧನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ.

ಇಲಾಖೆಯಿಂದ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ ಘಟಕಗಳನ್ನು ಸಹ ಇಲಾಖೆಯಿಂದ ಪಡೆಯಬವುದು. ಕೃಷಿ ಸಂಸ್ಕರಣಾ ಘಟಕಗಗಳಿಗೆ ಸಾಮಾನ್ಯ ರೈತರಿಗೆ ಶೇ.50 ರಷ್ಟು ಹಾಗೂ ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ.90 ರಷ್ಟು ಮತ್ತು ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇ..75 ಕ್ಕೆ ಮೀರದಂತೆ ಹಾಗೂ ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.

ಬೆಳೆ ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು, 05 ಪದರಗಳುಳ್ಳ 250 GSM, ಕಪ್ಪು ಬಣ್ಣದ HDPE tarpaulins confirming IS 7903/2017 (Type- II)8X6 mtr. ಅಳತೆಯ ಟಾರ್ಪಲೀನ್ ಗಳನ್ನು ವಿತರಿಸಲಾಗುತ್ತದೆ.

ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಮೇಲಿನ ಯತ್ರೋಪಕರಣ ಖರೀದಿ ಮಾಡಲು ಇಚ್ಚಿಸುವ ರೈತರು ನಿಮ್ಮ ಹತ್ತಿರದ/ಹೋಬಳಿಯ ರೈತ ಸಂಪರ್ಕ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.

ಬೇಕಾದ ಅಗತ್ಯ ದಾಖಲಾತಿಗಳು:

  1. ಅಧಾರ್ ಕಾರ್ಡ ಪ್ರತಿ.
  2. ಬ್ಯಾಂಕ್ ಪಾಸ್ ಬುಕ್ ಪ್ರತಿ.
  3. ಪಹಣಿ/ಉತಾರ್/RTC.
  4. ಪೋಟೋ
  5. 20 ಬಾಂಡ್
  6. ಜಂಟಿ ಮಾಲೀಕರ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ.
  7. ಹಿಡುವಳಿ ಪ್ರಮಾಣ ಪತ್ರ.

ಇತರೆ ಕೃಷಿಗೆ ಸಂಬಂಧಿಸಿದ ಯೋಜನೆಗಳು:

ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:
ಇದನ್ನೂ ಓದಿ: ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:
ಇದನ್ನೂ ಓದಿ: ನಿಮ್ಮ ಮೊಬೈಲ್ ಗೆ ಬಂದಿದೆಯೇ ಈ ಸಂದೇಶ!!! ಬಂದರೆ ಬೆಳೆ ವಿಮೆ ತಿರಸ್ಕರಿಸಲಾಗುವುದು!!
ಇದನ್ನೂ ಓದಿ: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:

Agriculture equipment subsidy scheme- ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಖರೀದಿಸಬವುದಾದ ಯಂತ್ರೋಪಕರಣಗಳು:

ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್

ಭೂಮಿ ಸಿದ್ಧತೆ ಉಪಕರಣಗಳು

ಬಿತ್ತನೆ/ನಾಟಿ ಯಂತ್ರಗಳು

ಅಂತರ ಬೇಸಾಯ ಉಪಕರಣಗಳು

ಸಸ್ಯ ಸಂರಕ್ಷಣಾ/ಸಿಂಪರಣಾ ಯಂತ್ರಗಳು

ಕಟಾವು, ಒಕ್ಕಣೆ ಉತ್ಪನ್ನಗಳ ಸಂಸ್ಕರಣಾ ಯಂತ್ರಗಳು

ಮೇವು/ತ್ಯಾಜ್ಯ ನಿರ್ವಹಣಾ ಯಂತ್ರಗಳು

ಡೀಸೆಲ್ ಪಂಪಸೆಟ್ಸ್

ಡೀಸೆಲ್ ಪಂಪಸೆಟ್ (3 ಹೆಚ್.ಪಿ)

ಡೀಸೆಲ್ ಪಂಪಸೆಟ್ (4 ಹೆಚ್.ಪಿ)

ಡೀಸೆಲ್ ಪಂಪಸೆಟ್ (5 ಹೆಚ್.ಪಿ)

ಡೀಸೆಲ್ ಪಂಪಸೆಟ್ (8-10 ಹೆಚ್.ಪಿ)

ಶೇಂಗಾ ಕಟಾವು ಯಂತ್ರ ಶೇಂಗಾಕಾಯಿ ಬಿಡಿಸುವ ಯಂತ್ರ

ಬಹುಬೆಳೆ ಕಟಾವು ಯಂತ್ರ

ಬಹುಬೆಳೆ ಒಕ್ಕಣೆ ಯಂತ್ರ (10 ಹೆಚ್.ಪಿ)

ಬಹುಬೆಳೆ ಒಕ್ಕಣೆ ಯಂತ್ರ (8 ಹೆಚ್.ಪಿ) ಬೇಲರ್ (ಟ್ರ್ಯಾಕ್ಟರ್ ಚಾಲಿತ)25-55 ಹೆಚ್.ಪಿ

ಮೇವು ಕತ್ತರಿಸುವ ಯಂತ್ರ (ಹ್ಯಾಂಡ್)

ಮೇವು ಕತ್ತರಿಸುವ ಯಂತ್ರ (2 ಹೆಚ್.ಪಿ)

ಮೇವು ಕತ್ತರಿಸುವ ಯಂತ್ರ (3 ಹೆಚ್.ಪಿ) ಪಲ್ವರೈಸರ್ (1 ಹೆಚ್.ಪಿ)

ಪಲ್ವರೈಸರ್ (3 ಹೆಚ್.ಪಿ)

ಫ್ಲೋರ್ ಮಿಲ್ (7.5 ಹೆಚ್.ಪಿ)

ಫ್ಲೋರ್ ಮಿಲ್ (10 ಹೆಚ್.ಪಿ) ರಾಗಿ ಕ್ಲೀನಿಂಗ್ ಮಶಿನ್ (3 ಹೆಚ್.ಪಿ)

ದಾಲ್ ಪ್ರೊಸೆಸ್ಸರ್ – ಬೇಳೆ ಮಾಡುವ ಯಂತ್ರ (2 – ಹೆಚ್.ಪಿ)

ಮಲ್ಟಿ ಆಯಿಲ್ ಸೀಡ್ಸ್ ಪ್ರೆಸ್ ಮಶೀನ್

ಆಟೋಮೇಟಿಕ್ ಕೋಲ್ಡ್ ಆಯಿಲ್ ಪ್ರೆಸ್ ಮಶೀನ್

ಟ್ರಾಕ್ಟರ್ ಚಾಲಿತ ಎಂ.ಬಿ. ಪ್ಲೋ (ರಿವರ್ಸಿಬಲ್)

ಟ್ರಾಕ್ಟರ್ ಚಾಲಿತ ಲೇಸರ್ ಭೂಮಿ ಮಟ್ಟ ಮಾಡುವ ಯಂತ್ರ

ರೋಟೊವೇಟರ್

ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (2 ಡಿಸ್ಕ್)

ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (3 ಡಿಸ್ಕ್) ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (10 ಡಿಸ್ಕ್)

ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (14 ಡಿಸ್ಕ್)

ಕಬ್ಬಿನ ರವದಿ ಪುಡಿ ಮಾಡುವ ಯಂತ್ರ

ತೆಂಗಿ ಗರಿ ಕತ್ತರಿಸುವ ಯಂತ್ರ

ಟ್ರ್ಯಾಕ್ಟರ್ ಚಾಲಿತ ರಿಕ್ಟರ್/ ಫರೋ ಓಪನರ್ (3)

ಟ್ರ್ಯಾಕ್ಟರ್ ಚಾಲಿತ ರಿಕ್ಟರ್/ ಫರೊ ಓಪನರ್ (5)

ಟ್ರ್ಯಾಕ್ಟರ್ ಚಾಲಿತ 9 ಟೈನ್ಸ್ ಸಂಯುಕ್ತ ಬಿತ್ತನೆ ಕೂರಿಗೆ

ಹ್ಯಾಂಡ್ ಪುಶ್ ಸೀಡರ್

ಹ್ಯಾಂಡ್ ಪುಶ್ ಸೀಡರ್ ಕಂ ಫರ್ಟಿಲೈಜರ್

ಭತ್ತ ನಾಟಿ ಯಂತ್ರ

ಬ್ರಶ್ ಕಟ್ಟರ್

ರೋಟರಿ ಟಿಲ್ಲರ್ (5 ಹೆಚ್.ಪಿ)

ರೋಟರಿ ಟಿಲ್ಲರ್ (7 ಹೆಚ್.ಪಿ)

ರೋಟರಿ ಟಿಲ್ಲರ್ (5 ಹೆಚ್.ಪಿ)
ಡೀಸೆಲ್ ಪಂಪಸೆಟ್ (8-10 ಹೆಚ್.ಪಿ)

ಶೇಂಗಾ ಕಟಾವು ಯಂತ್ರ ಶೇಂಗಾಕಾಯಿ ಬಿಡಿಸುವ ಯಂತ್ರ

ಬಹುಬೆಳೆ ಕಟಾವು ಯಂತ್ರ ಬಹುಬೆಳೆ ಒಕ್ಕಣೆ ಯಂತ್ರ (10 ಹೆಚ್.ಪಿ)

ಬಹುಬೆಳೆ ಒಕ್ಕಣೆ ಯಂತ್ರ (8 ಹೆಚ್.ಪಿ)

ಬೇಲರ್ (ಟ್ರ್ಯಾಕ್ಟರ್ ಚಾಲಿತ)25-55 ಹೆಚ್.ಪಿ

ಮೇವು ಕತ್ತರಿಸುವ ಯಂತ್ರ (ಹ್ಯಾಂಡ್)

ಮೇವು ಕತ್ತರಿಸುವ ಯಂತ್ರ (2 ಹೆಚ್.ಪಿ) ಮೇವು ಕತ್ತರಿಸುವ ಯಂತ್ರ (3 ಹೆಚ್.ಪಿ)

ಪಲ್ವರೈಸರ್ (1 ಹೆಚ್.ಪಿ)

ಪಲ್ವರೈಸರ್ (3 ಹೆಚ್.ಪಿ)

ಫ್ಲೋರ್ ಮಿಲ್ (7.5 ಹೆಚ್.ಪಿ)

ಫ್ಲೋರ್ ಮಿಲ್ (10 ಹೆಚ್.ಪಿ)

ರಾಗಿ ಕ್ಲೀನಿಂಗ್ ಮಶಿನ್ (3 ಹೆಚ್.ಪಿ)

ದಾಲ್ ಪ್ರೊಸೆಸ್ಸರ್ – ಬೇಳೆ ಮಾಡುವ ಯಂತ್ರ (2 ಹೆಚ್.ಪಿ)

ಮಲ್ಟಿ ಆಯಿಲ್ ಸೀಡ್ಸ್ ಪ್ರೆಸ್ ಮಶೀನ್

ಆಟೋಮೇಟಿಕ್ ಕೋಲ್ಡ್ ಆಯಿಲ್ ಪ್ರೆಸ್ ಮಶೀನ್

ವಿಶೇಷ ಮಾಹಿತಿ: ಅನುದಾನ ಲಭ್ಯತೆ ಆಧಾರದ ಮೇಲೆ ತಾಲ್ಲೂಕುವಾರು ರೈತರಿಗೆ ಯಂತ್ರೋಪಕರಣಗಳನ್ನು ನೀಡಲಾಗುತ್ತದೆ

ಇದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಉತ್ತಮ ಸಂಸ್ಕರಣೆಗೆ ಒಳಪಡಿಸಿ ಗುಣಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ದೊರೆಯುತ್ತದೆ. ಉತ್ತಮ ಗುಣಮಟ್ಟದ ಹಾಗೂ ಸಂಸ್ಕರಿಸಿದ ಉತ್ಪನ್ನಗಳು ರೈತರಿಗೆ ಹೆಚ್ಚಿನ ಬೆಲೆಯನ್ನೂ ಸಹ ಒದಗಿಸಿಕೊಡುವುದರಿಂದ ಅವರ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತದೆ.

ಸಹಾಯಧನದಲ್ಲಿ ಎಲ್ಲಾ ಬಗ್ಗೆಯ ಕೃಷಿ ಯಂತ್ರೋಪಕರಣಗಳ ಖರೀದಿಗೆ ಇಂದೇ ಸಂಪರ್ಕಿಸಿ: 9901876682(ಕಾರ್ತಿಕ್, ಈಸೀ ಲೈಫ್ ಎಂಟರ್ ಪ್ರೈಸಸ್, ಉಡುಪಿ)

ಇತ್ತೀಚಿನ ಸುದ್ದಿಗಳು

Related Articles