ನಮಸ್ಕಾರ ರೈತರೇ, ರೈತರಿಗೆ ಕೃಷಿಯಲ್ಲಿನ ವಿನೂತನ ತಂತ್ರಜ್ಞಾನಗಳ ಪರಿಚಯ ಮಾಡಲು ಮತ್ತು ರೈತರಿಗೆ ಕೃಷಿ ಮತ್ತು ತೋಟಗಾರಿಕೆಯಲ್ಲಿನ ನವೀನ ಆವಿಸ್ಕಾರಗಳ ಪರಿಚಯ ಮಾಡಲು ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೃಷಿ ಮೇಳವನ್ನು ಇದೇ ಡಿಸೆಂಬರ್ 27 ಮತ್ತು 28 ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಡೇಮಡ್ಕಲ್ ಸಂಸ್ಥೆಗಳು ಆಯೋಜನೆ ಮಾಡಲಾಗುತ್ತಿವೆ.
ಕೃಷಿ ಮೇಳದಲ್ಲಿ ವಿವಿಧ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳು ಇರಲಿವೆ. ಹಾಗೂ ಕೃಷಿಗೆ ಸಂಬಂಧ ಪಟ್ಟ ತಂತ್ರಜ್ಞಾನ ಮಳಿಗೆಗಳು ಕೂಡ ಇರಲಿವೆ. ಕೃಷಿ ಮೇಳದಲ್ಲಿ ಕೃಷಿಯಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಸಹ ಮಾಡಲಿದ್ದಾರೆ.
ಇದನ್ನೂ ಓದಿ:ಅಡಮಾನ ರಹಿತ ಕೃಷಿ ಸಾಲದ ಮಿತಿಯನ್ನು 2ಲಕ್ಷಕ್ಕೆ ಏರಿಕೆ ಮಾಡಿದ ಆರ್ ಬಿ ಐ!
KRISHI MELA-ಕೃಷಿ ಮೇಳದ ವಿಶೇಷತೆಗಳು ಹೀಗಿದೆ.
1)ಕೃಷಿಯಲ್ಲಿ ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆ
2)ಕಾರ್ಬನ್ ಕ್ರೆಡಿಟ್
3)ಮಾಧ್ಯಮಿಕ ಕೃಷಿ ಮತ್ತು ಭತ್ತದ ಸಾಂಪ್ರದಾಯಿಕ ತಳಿಗಳ ಪ್ರಾತ್ಯಕ್ಷಿಕೆ
4)ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆ
5)ವೈಜ್ಞಾನಿಕ ಮೀನು ಕೃಷಿ
6)ವಿದೇಶಿ ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ
7)ಹವಾಮಾನ ಆಧಾರಿತ ಕೃಷಿ
8)ಕೃಷಿ-ತೋಟಗಾರಿಕೆ ತಂತ್ರಜ್ಞಾನಗಳು
9)ವೈಜ್ಞಾನಿಕ ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ
10)ತಾರಸಿ ಕೈತೋಟ
11)ಎರೆಹುಳು ಗೊಬ್ಬರ ತಯಾರಿಕೆ
12)ಕಾಳುಮೆಣಸು ಮತ್ತು ಏಲಕ್ಕಿ ಬೆಳೆಗಳ ತಾಯಿ ಕ್ಷೇತ್ರ
13)ರೈತ-ವಿಜ್ಞಾನಿಗಳ ವಿಚಾರ ವಿನಿಮಯ
14)ಪ್ರಗತಿಪರ ರೈತರಿಗೆ ಸನ್ಮಾನ
ಇದನ್ನೂ ಓದಿ:ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 3 ದಿನಗಳ ತೋಟಗಾರಿಕಾ ಮೇಳ ಆಯೋಜನೆ!
15)ವಿವಿಧ ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಕೃಷಿ ಪರಿಕರಗಳ ಸಂಸ್ಥೆಗಳಿಂದ ಬೀಜ, ಗೊಬ್ಬರ, ಸಸ್ಯ ಸಂಸರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ
ಮಳಿಗೆಗಳನ್ನು ಕಾಯ್ದುರಿಸಲು ಸಂಪರ್ಕಿಸಿ
ಡಾ.ಪ್ರಮೀಳ ಸಿ.ಕೆ (ಹಿರಿಯ ಕ್ಷೇತ್ರಾಧೀಕ್ಷಕರು)-9480838984, 9380184632
ಡಾ.ಉಲ್ಲಾಸ, ಎಂ.ವೈ (ಯೋಜನಾ ಮುಖ್ಯಸ್ಥರು)-6361596337
ಡಾ.ಯಮುನಾ, ಬಿ.ಜಿ (ವಿಜ್ಞಾನಿಗಳು)-9164538707