ನಮಸ್ಕಾರ ರೈತರೇ, ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಇದೇ ತಿಂಗಳು ಡಿಸೆಂಬರ್ 21,22,23 ಮೂರು ದಿನಗಳ ಕಾಲ ರೈತರಿಗಾಗಿ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ತೋಟಗಾರಿಕಾ ಮೇಳದ ವಿಶೇಷತೆಗಳ ಏನು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಈ ಬಾರಿಯ ತೋಟಗಾರಿಕಾ ಮೇಳದ ಘೋಷ ವಾಕ್ಯವು “ಆರ್ಥಿಕತೆ ಹಾಗೂ ಪೌಷ್ಠಿಕತೆಗಾಗಿ ತೋಟಗಾರಿಕೆ” ಎಂದು ನೀಡಲಾಗಿದೆ. ಈ ಬಾರಿಯ ತೋಟಗಾರಿಕೆ ಮೇಳದಲ್ಲಿ ರೈತರ ಆರ್ಥಿಕತೆ ಹಾಗೂ ಜನರಿಗೆ ಪೌಷ್ಠಿಕತೆಯ ಹಣ್ಣು ಮತ್ತು ತರಕಾರಿಗಳನ್ನು ನೀಡುವ ಕುರಿತು ಎಂದು ತಿಳಿಸಲಾಗಿದೆ.
ತೋಟಗಾರಿಕಾ ಮೇಳದಲ್ಲಿ ವಿವಿಧ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳು ಇರಲಿವೆ. ಹಾಗೂ ಕೃಷಿಗೆ ಸಂಬಂಧ ಪಟ್ಟ ತಂತ್ರಜ್ಞಾನ ಮಳಿಗೆಗಳು ಕೂಡ ಇರಲಿವೆ. ತೋಟಗಾರಿಕಾ ಮೇಳದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಸಹ ಮಾಡಲಿದ್ದಾರೆ.
Totagarike MELA-ಈ ಬಾರಿ ಕೃಷಿ ಮೇಳದ ವಿಶೇಷತೆಗಳು ಹೀಗಿದೆ.
1)ಪೌಷ್ಠಿಕತೆಗಾಗಿ ತೋಟಗಾರಿಕಾ ಬೆಳೆಗಳು
2)ಸಸ್ಯ ಸಂರಕ್ಷಣೆಯಲ್ಲಿ ಡ್ರೋನಗಳ ಬಳಕೆ
3)ಸಂರಕ್ಷಿತ ಬೇಸಾಯ
4)ನೀರು ಸಂರಕ್ಷಣೆಗಾಗಿ ತಂತ್ರಜ್ಞಾನ
5)ಆರ್ಥಿಕತೆಗಾಗಿ ಪರ್ಯಾಯ ಬೆಳೆಗಳ ಆಯ್ಕೆ
6)ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ ಮತ್ತು ರಸಾವರಿ ಮಾದರಿಗಳು
7)ಕೃಷಿ ಹೊಂಡ/ತುಂತುರು ನೀರಾವರಿ/ಹನಿ ನೀರಾವರಿ
8)ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ
9)ಸಾವಯವ ಕೃಷಿಯಲ್ಲಿ ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ.
10)ತರಕಾರಿ ಮತ್ತು ಹೂ ಬೆಳೆಗಳ ಪ್ರಾತ್ಯಕ್ಷಿಕೆ
11)ಭವಿಷ್ಯತ್ ಬೆಳೆಗಳು:ಡ್ರ್ಯಾಗನ್ ಹಣ್ಣು, ಅಂಜೂರ, ನೇರಳೆ ಇತ್ಯಾದಿ
12)ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು.
13)ಸಿರಿ ಫಲಗಳ ಪ್ರಾತ್ಯಕ್ಷಿಕೆ
14)ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ.
15)ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದರ್ಶನ
16)ಕೃಷಿ ಅರಣ್ಯ ಪದ್ಧತಿಗಳು
17)ಫಲ ಪುಷ್ಪ ಪ್ರದರ್ಶನ
18)ಸಮಗ್ರ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು
19)ಜೇನು ಕೃಷಿ-ಮಧುವನ ಪ್ರದರ್ಶನ
20)ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ
ಹೆಚ್ಚಿನ ಮಾಹಿತಿಗಾಗಿ ಹಾಗೂ ಮಳಿಗೆಗಳಿಗಾಗಿ ಸಂಪರ್ಕಿಸಿ
9480696381/6364064901/9448344103/9972159613/9481001141