Monday, October 7, 2024

ಬಾರ್‍ ಸೆಪ್ಲೇಯರ್ ಆಗಿದ್ದ ಹಳ್ಳಿ ಹೈದ ,ಪಶು ಸಂಗೋಪನೆಯಲ್ಲಿ ಸಾಧನೆ ಮಾಡಿ ಜೀವನ ಕಟ್ಟಿಕೊಂಡಿರುವ ಯಶೋಗಾಥೆ

ಸಾಧನೆ ಮಾಡುವ ಛಲ ಆಸೆ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಹಳ್ಳಿ ಹೈದಾ ಮಂಜುನಾಥ ಮಾಸ್ತಂಕ ಉತ್ತಮ ಉದಾಹರಣೆಯಾಗಿದ್ದಾರೆ. ಹುಟ್ಟಿದ ಊರನ್ನು ಬಿಟ್ಟು ಎಲ್ಲೋ ದೂರದ ಊರಲ್ಲಿ ಬಾರ್ ನಲ್ಲಿ ಸೆಪ್ಲೇಯರ್ ಆಗಿದ್ದವನು ಇಂದು ಸ್ವುದ್ಯೋಗ ಹೈನುಗಾರಿಕೆ ಮೂಲಕ ಉತ್ತಮ ಕೃಷಿಕನಾಗಿ ಹೊರಹೊಮ್ಮಿದ್ದಾನೆ.

ಪ್ರಾರಂಬದ ವರ್ಷ : ಸುಮಾರು 2014-15ನೇ ಸಾಲಿನಿಂದ ಕೇವಲ ಒಂದು ಹಸುವಿನಿಂದ ಆರಂಭಿಸಿದ ಇವನು 10-12 ಉತ್ತಮ ತಳಿಯ ಹಸುವನ್ನು ಸಾಕಿ ಮನೆಯಂಗಳದಲ್ಲಿ ಹಾಲಿನ ಹೊಳೆಯನ್ನು ಹರಿಸಿದ್ದಾನೆ.

ಮಧ್ಯಸ್ಥಿಕೆ : ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಇತರೆ ಹೈನುಗಾರಿಕೆಯಲ್ಲಿ ಸಾಧನೆಗೈದ ಪ್ರಗತಿಪರ ರೈತರು ತರಬೇತಿಗಳು ಇತ್ಯಾದಿಗಳು ಮಧ್ಯಸ್ಥಿಕೆಯಿಂದ ಉತ್ತಮ ಕೃಷಿಕನಾಗಿದ್ದಾನೆ.

ಅನ್ವೇಷಣೆ ಪ್ರೇರಣೆ ಮೂಲ:– ಸ್ವ-ಉದ್ಯೋಗ ಮಾಡಬೇಕಂದು ನಿರ್ಧರಿಸಿದ್ದರಿಂದ ಹೈನುಗಾರಿಕೆ ಆಯ್ಕೆ ಮಾಡಿಕೊಂಡು ಯಾವ ರೀತಿಯಲ್ಲಿ ಆ ಕ್ಷೇತ್ರದಲ್ಲಿ ಮುಂದುವರೆಯಬಹುದು ಎಂಬುದನ್ನು ಅನೇಕ ಕಡೆ ವಿಚಾರಿಸಿದಾಗ ಹಾಗೂ ಅನ್ವೇಷಿಸಿದಾಗ ಸಂಧರ ರೈತರ ಯಶೋಗಾಥಗಳನ್ನು ಓದಿದ ಹಾಗೂ ನೋಡಿದ ನಂತರ ತಾನು ಇದರಂತೆ ಸಾಧನೆ ಮಾಡಬೇಕು ಪ್ರೇರಣೆ ದೊರೆತು ಅದರಂತೆ ಇಂದು ಸಾಧನೆ ತೋರಿದ್ದಾನೆ.

ಇದನ್ನೂ ಓದಿ: ಕೃಷಿಗೆ ಬೇಕಾದ ಎಲ್ಲಾ ರೀತಿಯ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ಸಹಾಯಧನದಲ್ಲಿ ಲಭ್ಯ:

ಹಿಂದಿನ ಹಿನ್ನೆಲೆ:- ಕೃಷಿ ಕುಟುಂಬದ ಬಡ ರೈತನ ಮಗ ಎಂಬ ಹಿನ್ನಲೆ ಬಿಟ್ಟರೆ ಇನ್ಯಾವುದೇ ಗುರುತು ಇವನಿಗೆ ಇರಲಿಲ್ಲ, ಆಗಾಗ ಇದರಿಂದ ಏನು ಸಾಧಿಸಲು ಸಾದ್ಯವಿಲ್ಲ. ಎಂದು ಅರಿತು ಊರು ಬಿಟ್ಟು ಮಂಜುನಾಥ ನಂತರದ ದಿನಗಳಲ್ಲಿ ನೆಮ್ಮದಿ-ಸುಖ ಜೀವನ ಕಾಯುವುದರ ಅದು ಕೇವಲ ಕೃಷಿಯಿಂದಲೇ ಸಾಧಕ ಎಂಬುದನ್ನು ಅರಿತು ಹೈನುಗಾರಿಕೆ ಕ್ಷೇತ್ರ ಆಯ್ಕೆ ಮಾಡಿ ಇಂದು ತಾಲೂಕು ಮಟ್ಟದ ಕೃಷಿಕನಾಗಿ ಗುರುತಿಸಿಕೊಂಡಿದ್ದಾನೆ.

ವೈಯಕ್ತಿಕ:- ವೈಯಕ್ತಿಕವಾಗಿ ಯಾವುದೇ ರೀತಿಯ ಉತ್ತಮ ಹಿನ್ನೆಲೆ ಇಲ್ಲದಿದ್ದರೂ ಸ್ವ ಪ್ರಯತ್ನದಿಂದ ಹಾಗೂ ಮನೆಯವರ ಸಹಾಯಹಸ್ತದಿಂದ ಇಂದು ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ್ದಾನೆ.

ಆರ್ಥಿಕತೆ :- ಆರ್ಥಿಕತೆಯಲ್ಲಿ ಅತೀ ಹಿನ್ನೆಲೆಯನ್ನು ಹೊಂದಿದ್ದು ಈತನು ಆರ್ಥಿಕತೆಯಲ್ಲಿ ಸಫಲತೆ ಪಡೆಯಲು ಅನೇಕ ಕಷ್ಟಗಳನ್ನು ಉದ್ಯೋಗಗಳನ್ನು ಮಾಡಿ ಕೊನೆಯಲ್ಲಿ ಹೈನುಗಾರಿಕೆಯಲ್ಲಿ ಸಫಲತೆಯನ್ನು ಕಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡಿದ್ದಾನೆ.

ಪರಿಣಾಮ ಕಾಯಕಗಳಲ್ಲೂ ಅನುಭವ ಹೊಂದಿದ ಈತನು ಹೈನುಗಾರಿಕೆಯಲ್ಲಿ ಪ್ರಗತಿಯನ್ನು ಕಂಡು ಗೂಗಲ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ತನ್ನ ಹೈನುಗಾರಿಕೆಯ ಅನುಭವವನ್ನು ವ್ಯಾಪಕವಾಗಿ ಹರಡುತ್ತಿದ್ದಾನೆ.

ಮಧ್ಯಸ್ತಕೆ:- ಕೃಷಿ ಇಲಾಖೆ, ಪಶುಸಂಗೋಪನೆ ಇಲಾಕೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯೋಜನೆಗಳು ಹಾಗೂ ಪ್ರಗತಿಪರ ರೈತರ ಅನುಭವದ ಮಾತುಗಳ ಮೂಲಕ ಹೈನುಗಾರಿಕೆಯಲ್ಲಿ ಸಾಧನೆ ಕಂಡುಕೊಂಡಿದ್ದಾರೆ.

ಪರಿಣಾಮ:-
ಕೃಷಿಯಲ್ಲಿ ಸಾರ್ಥಕತೆ ಮತ್ತುನೆಮದಮದಿ ಜೀವನ
ಯೋಜನೆಗಳ ಸದುಪಯೋಗ ಮತ್ತು ಅಳವಡಿಕೆ.
ಸ್ವ-ಉದ್ಯೋಗದಿಂದ ಲಾಭ ಹಾಗೂ ಸಂತಸ . ಕೃಷಿ ತ್ಯಜಿಸುವವರಿಗೆ ಒಟ್ಟು ಉತ್ತಮ ಹಾಗೂ ಪರಿಣಾಮಕಾರಿ ಉದಾಹರಣೆ.

ಇದನ್ನೂ ಓದಿ: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ 1:3 ಅರ್ಹರಾದ ಅಭ್ಯರ್ಥಿಗಳ ಪಟ್ಟಿ

ಒಳನೋಟ:- ಬಿಡಿಗಾಸಿಗೆ ದೂರದ ಊರಲ್ಲಿ ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದವನು ಇಂದು ಸ್ವ-ಉದ್ಯಮದಿಂದ ನೆಮ್ಮದಿ ಜೀವನ ನಡೆಸುತ್ತಿದ್ದಾನೆ ಹಾಗೂ ಇತರರಿಗೂ ಮಾದರಿಯಾಗಿದ್ದಾನೆ.
ಸ್ವಂತ : ಅಂಗೈಯಗಲ ಜಮೀನು ಹೊಂದಿದ ಈತನು ಏನು ಮಾಡಬೇಕೆಂದು ಯೋಚಿಸಿದಾಗ ಮನಸ್ಸಿಗೆ ಬಂದಿದ್ದು ಹೈನುಗಾರಿಕೆ ಕಾರಣ ಕಡಿಮೆ ಕ್ರಮ ಜಾಗ ಹಾಗಾಗಿ ಅಸರಲ್ಲಿ ಆಸಕ್ತಿ ಮೂಡಿ ಸ್ವಂತಃ ಜಾಗದಲ್ಲಿ ಕೃಷಿ ಆರಂಬಿಸಿ ಯಶಸ್ವಿಯಾಗಿರುತ್ತಾನೆ.

ಬಿನ್ನತೆ:- ಕೇವಲ ಒಂದೆ ಬೆಳೆ ನಂಬಿ ಸಾಲಗಾರನಾಗಿ ಹಾಗೂ ಖಿನ್ನತೆ ಒಳಗಾದ ರೈತರನ್ನು ಗಮನಿಸಿದ ಈತನು ಉಪಕಸುಬುಗಳನ್ನು ಅನುಸರಿಸಿದರೆ ಒಂದಲ್ಲ ಒಂದು ಕೃಷಿಯಿಂದ ಲಾಭ ಮಾಡಬೇಕೆಂದು ಯೋಚನೆ ಮಾಡಿ ಹೈನುಗಾರಿಕೆ ಜೊತೆ ನಾಟಿ ಕೋಳಿ ಸಾಕಾಣಿಕೆ, ಡೈರಿ ನಿರ್ವಹಣೆ ಇತರರ ಜಮೀನು ಲಾವಣಿ ಮೂಲಕ ನಿರ್ವಹಿಸಿ ಕೃಷಿ ಹಾಗೂ ಅನೇಕ ಕೃಷಿ ಕಸುಬುಗಳನ್ನು ಅನುಸರಿಸಿ ಇತರ ರೈತರಿಗಿಂತ ಬಿನ್ನತೆಯನ್ನು

ಉತ್ಪತ್ತಿ:- ಮೊದಲ ಹಂತದಲ್ಲಿ ಹೂಡಿದ ಬಂಡವಾಳಕ್ಕೆ ಅಷ್ಟೇ ಲಾಭ ಬರುತ್ತಿತ್ತು ನಂತರದದಿನಗಳಲ್ಲಿ ತನ್ನ ಕೃಷಿಯಲ್ಲಿ ಮಾಡಿಕೊಂಡ ಬದಲಾವಣೆಯಿಂದಾಗಿ ಉತ್ಪತ್ತಿ ದ್ವಿಗುಣವಾಯಿತು ಅದು ಹೇಗೆಂದರೆ ಹಾಲನ್ನು ಬೇರೆ ಡೈರಿಗೆ ಮಾರುವುದರಿಂದ ಸ್ವಲ್ಪ ಮಟ್ಟಿಗೆ ಲಾಭ ಕಾಣಬಹುದು ಅದರ ಬದಲು ಅರನ್ನು ಮನೆ ಮನೆಗೆ ಹಾಕುವುದರಿಂದ ಿನ್ನು ಲಾಭವನ್ನು ಪಡೆಯಬಹುದು ಹಾಗೂ ಅದರ ಜೊತೆ ಕೋಳಿ ಸಾಕಾಣಿಕೆಯನ್ನು ಮಾಡಿ ಮೊಟ್ಟೆ ಹಾಗೂ ಕೋಳಿ ಮಾರಾಟ ಮಾಡಿ ಲಾಭ ಪಡೆಯಬಹುದು ಎಂದು ಯೋಚಿಸಿ ತನ್ನ ಉತ್ಪತ್ತಿಯಲ್ಲಿ ಸ್ವಿಗುಣ ಸಾಧಿಸಿದ್ದಾನೆ.


ಪರಿಣಾಮ:- ಉತ್ಪತ್ತಿ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನುಸರಿಸಿದ ಉಪ ಕಸುಬುಗಳೆ ಇವತ್ತು ಉತ್ತಮ ಲಾಭ ಪಡೆಯುವಲ್ಲಿ ಹಾಗೂ ಉತ್ತಮ ಕೃಷಿಕನಾಗಿ ಗುರ್ತಿಸಿಕೊಳ್ಳುವಲ್ಲಿ ಪರಿಣಾಮಕಾರಿಯಗಿದೆ.
ಕಳೆದ ಮೂರು ವರ್ಷಗಳಲ್ಲಿ ಈತನ ಒಂದು ಅನುಕರಣೆಯನ್ನು ಗಮನಿಸಿದಾಗ ಕೃಷಿಯಿಂದ ಯಾವುದೇ ಲಾಭವಿಲ್ಲ ಎಂದು ಹೇಳುವವರಿಗೆ ಇವನ ಸಾಧನೆಯೇ ಉತ್ತರ ನೀಡುವ ನಿಟ್ಟಿನಲ್ಲಿ ಬೇಳೆದಿದ್ದಾನೆ.
3ಲೀ ನಿಂದ ಹಾಲಿನ ಸಂಗ್ರಹಣೆ ಆರಂಭಿಸಿದ ಈತ ಒಂದು ಹೊತ್ತಿಗೆ 30ಲೀ ಅಂದರೆ ದಿನಕ್ಕೆ 60ಲೀ ಉತ್ಪಾದನೆ ಮಾಡಿ ಮಾರಾಟ ಮಾಡಿ ತಿಂಗಳಿಗೆ 900 ಲೀ ಹಾಲನ್ನು ಮಾರಾಟ ಮಾಡಿ 27,000/- ಲಾಭವನ್ನು ಪಡೆಯುತ್ತಿದ್ದಾನೆ.

•ಆತ್ಮಾ ಯೋಜನೆ 2017-18ನೇ ಸಾಲಿನಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ 2018-19ನೇ ಸಾಲಿನಲ್ಲಿ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ಧಾರವಾಡ.
•ಕೃಷಿ ವಿಶ್ವವಿಧ್ಯಾಲಯದಿಂದ ಪಡೆದಿರುತ್ತಾನೆ.
•ಸ್ಥಳೀಯ ಸಂಸ್ಥೆಗಳ ಮೂಲಕ ಸನ್ಮಾನ ಹಾಗೂ ಪುರಸ್ಕಾರಗಳು ದೊರೆತಿವೆ.

ಕಲಿತ ಪಾಠಗಳು:
•ಸ್ವ-ಉದ್ಯೋಗ ಆರಂಭಿಸಿದಾಗ ಮಾಹಿತಿ, ಅನುಭವ, ಆರ್ಥಿಕತೆಯಲ್ಲಿ ಏನು ಸಹಕಾರವಿಲ್ಲದೆ ಕೇವಲ ಆಸಕ್ತಿಯಿಂದ ಆರಂಭಿಸಿದ್ದರಿಂದ ಇತ್ತೀಚೆಗೆ ಆತ್ಮವಿಶ್ವಾಸ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಯಿತು.
•ಇಲಾಖೆಯಾರಸಿ ಸಂಪರ್ಕ ಯೋಜನೆಗಳ ಸಧ್ಯಳಾಕಿ, ರೈತರಿಗೆ ಇರುವ ಅವಕಾಶಗಳು, ಅಧಿಕಾರಿಗಳ ಸಹಕಾರ ಬೆಂಬಲ ಮಾರ್ಗದರ್ಶನ ಎಲ್ಲವುದರ ಮದ್ಯಸ್ಥಿಕೆಯಿಂದ ಉತ್ತಮ ಉದ್ಯೋಗ ಕಂಡುಕೊಳ್ಳಲು ಸಾದ್ಯವಾಯಿತು.

  • ಮನಸಿದ್ದರೆ ಮಾರ್ಗವಿದೆ ಎಂಬ ವಿಶ್ವಾಸದಿಂದ ಕಾರ್ಯ ಪ್ರಾರಂಬಿಸಿ, ಅದಕ್ಕಾಗಿ ಇಲಾಖೆಗಳಿವೆ, ಯೋಜನೆಗಳಿವೆ ಅವುಗಳನ್ನು ತಿಳಿದು ಅರಿತುಕೊಳ್ಳಬೇಕು.
  • ಕೃಷಿಯಲ್ಲಿ ಒಂದೇಬಾರಿಗೆ ಲಾಭ ಕಾಣುತ್ತೇವೆ ಎಂಬ ಆಸೆಯನ್ನು ತೊರೆದು ಕಾರ್ಯಪ್ರವೃತರಾಗಬೇಕು.
  • ಎಲ್ಲಾ ವಿಧದ ಕೃಷಿ ಕೈಗೊಂಡಿರುವ ಪ್ರಗತಿಪರ ರೈತರ ಸಂಪರ್ಕ ಅನುಭವ ಪಡೆಯುವುದು ಉತ್ತಮ.
  • ಮಂಜುನಾಥ ಮಾಸ್ತ್ಯ ನಾಯ್ಕ
    ಗ್ರಾಮ : ಹಸವಂತೆ
    ತಾಲ್ಲೂಕು : ಸಿದ್ದಾಪುರ
    ಜಿಲ್ಲೆ : ಉತ್ತರ ಕನ್ನಡ
    ಮೊಬೈಲ್ ನಂ : 8904538590

ಇತ್ತೀಚಿನ ಸುದ್ದಿಗಳು

Related Articles