ನಮಸ್ಕಾರ ರೈತ ಭಾಂದವರೇ, 2023-24 ನೇ ಸಾಲಿನ ಬೆಳೆ ವಿಮೆ ಪಾವತಿಸಿದ ರೈತರಿಗೆ ವಿವಿಧ ಬೆಳೆ ವಿಮಾ ಕಂಪನಿಗಳು ಹಣವನ್ನು ಬಿಡುಗಡೆ ಮಾಡುತ್ತೀವೆ. ಆದ್ದರಿಂದ ನಿಮ್ಮ ಬೆಳೆ ವಿಮೆ ಜಮೆಯಾಗಿದೇ ಎಂದು ನಿಮ್ಮ ಮೊಬೈಲ್ ನಲ್ಲಿ ಮನೆಯಲ್ಲೇ ಕುಳಿತು ನೋಡಬಹುದು.
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ರೈತರಿಗೆ ಯಾವ ಬೆಳೆಗೆ ಎಷ್ಟು ವಿಮೆ ಜಮೆಯಾಗಲಿದೇ ಮತ್ತು ಬೆಳೆ ವಿಮೆ ಹಣ ಜಮೆ ಆಗಿದೆಯೋ, ಇಲ್ಲವೋ ಎಂದು ಹೇಗೆ ತಿಳಿಯಬೇಕು ಎಂಬುದನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಜನರ ಜೀವಕ್ಕೆ ವಿಮೆ ಹೇಗೆ ಕಾರ್ಯ ನಿರ್ವಹಿಸುತ್ತದೆಯೋ ಹಾಗೆ ಬೆಳೆ ವಿಮೆಯು ರೈತರ ಬೆಳೆ ಹಾನಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಅದರಂತೆ ಈಗಾಗಲೇ ತುಂಬಾ ಜನ ರೈತರು ಬೆಳೆ ವಿಮೆ ಮಾಡಿದ್ದು 2023-24ರ ವಿಮೆ ಜಮೆ ಬಗ್ಗೆ ತಿಳಿಯಲು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ರಾಜ್ಯ ಸರಕಾರದ ಸಂರಕ್ಷಣೆ (Samrakshane.karnataka.gov.in) ಪೋರ್ಟಲ್ ಭೇಟಿ ಮಾಡಿ ರೈತರು ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು 2023-24ರ ಯಾವೆಲ್ಲ ಬೆಳೆಗಳಿಗೆ ವಿಮೆ ಜಮೆ ಮಾಡಲಾಗಿದೆ ಎಂದು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.
Crop insurance status-ನಿಮ್ಮ ಬೆಳೆ ವಿಮೆಗೆ ಹಣ ಎಷ್ಟು ಜಮೆ ಆಗಲಿದೆ ಎಂದು ಚೆಕ್ ಮಾಡಿಕೊಳ್ಳುವ ವಿಧಾನ:
Samrakshane.karnataka.gov.in ವೆಬ್ಸೈಟ್ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ ಎಂದು ತಿಳಿದುಕೊಳ್ಳಬಹುದು. ಬೆಳೆಗೆ ಎಷ್ಟು ವಿಮೆ ಪ್ರಿಮಿಯಂ ಪಾವತಿ ಮಾಡಲಾಗಿದೆ ಸಂಪೂರ್ಣ ವಿವರ ಪಡೆಯಬಹುದು.
Step-1:ರೈತರು ತಮ್ಮ ಮೊಬೈಲ್ ನಲ್ಲಿ ಮೊದಲಿಗೆ ಈ KHARIF CROP INSURANCE ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2023-24 “ ಹಾಗೂ ಋತು: ಮುಂಗಾರು/kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-2: ಬಳಿಕ ಈ ಪೇಜಿನ ಕೆಳಗೆ “Farmers”ಕಾಲಂ ನಲ್ಲಿ ಕಾಣುವ “primium calculator/ಪ್ರಿಮಿಯಂ ಲೆಕ್ಕಾಚಾರ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ನಂತರ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿದ ಮೇಲೆ ಪ್ರಿಮಿಯಂ ವಿವರದ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಆ ಗ್ರಾಮದಲ್ಲಿ ಬೆಳೆ ವಿಮೆಗೆ ಆಯ್ಕೆಯಾದ ಬೆಳೆ ಮತ್ತು ಅದರ ಪ್ರಿಮಿಯಂ ಮೊತ್ತದ ಸಂಪೂರ್ಣ ವಿವರವನ್ನು ತಾವು ಕಾಣಬಹುದು.
ಇದನ್ನೂ ಓದಿ:ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕೃಷಿ ಇಲಾಖೆಯಲ್ಲಿ 1ಲಕ್ಷ ಸಹಾಯಧನ ನೀಡಲಾಗುತ್ತದೆ.
ಜಿಲ್ಲಾವಾರು ವಿಮಾ ಕಂಪನಿಗಳ ಸಹಾಯವಾಣಿ ನಂಬರಗಳು:
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ನಂಬರ್ 18004250505, ಯೂನಿವರ್ಸಲ್ ಸೋಂಪೊ ನಂಬರ್ 18002005142, ಎಸ್.ಬಿ.ಐ ವಿಮಾ ಕಂಪನಿ ನಂಬರ 18001501551, 18002091111, ಹೆಚ್.ಡಿ.ಎಫ್.ಸಿ ಅರ್ಗೋ 18001037712, ಬಜಾಜ್ ಅಲಾಯನ್ಸ್ 18002095959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ 18001024088 ಈ ಮೇಲೆ ತಿಳಿಸಿದ ಸಹಾಯವಾಣಿ ನಂಬರ್ಗಳಿಗೆ ಸಂಪರ್ಕಿಸಿ ನಿಮ್ಮ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.