ಆತ್ಮೀಯ ಪ್ರಿಯ ರೈತ ಬಾಂದವರೇ ,HDM ಯೋಜನೆಯಡಿ ತೋಟಗರಿಕೆ ಬೆಳೆಗಾರಿಗೆ ಇಲಾಖೆ ಬೆಳೆಯ ಮೇಲೆ ಹೊದಿಕೆ (Mulching peper) ಅಳವಡಿಸಲು ತೋಟಗಾರಿಕೆ ಇಲಾಖೆ ಸಹಾಯಧಕ್ಕೆ ಅರ್ಜಿ ಆಹ್ವಾನಿಸಿರುತ್ತದೆ. ಈ ಒಂದು ಸಹಾಯಧನವನ್ನು ಸದುಪಯೋಗ ಪಡೆಯಬೇಕಾಗಿ ರೈತ ಬಾಂದವರಿಗೆ ತಿಳಿಸಲಾಗಿರುತ್ತೆ ಆಗಿದ್ದರೇ ಯಾವ ರೀತಿ ಪಡೆಯುವುದು? ಅರ್ಹತೆಗಳೆನು? ಎಷ್ಟು ಸಹಾಯಧನ ? ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ನೀವು ಈ ಮಾಹಿತಿ ಓದಿ ಇತರೇ ರೈತರಿಗೂ ದಯವಿಟ್ಟು ಮಾಹಿತಿಯನ್ನು ಹಂಚಿಕೊಳ್ಳಿ.
Purpose of Subsidy: ಇಲಾಖೆ ಈ ಕಳೆ ಚಾಪೆ ಸಹಾಯಧನ ನೀಡುವ ಉದ್ದೇಶ:
1.ಕಳೆಗಳನ್ನು ನಿಯಂತ್ರಿಸುವುದರ ಜೊತೆಗೆ, ಕಳೆ ಚಾಪೆಗಳು ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಮತ್ತು ಸಸ್ಯಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
2.ತೋಟಗಾರಿಕೆ ಬೆಳೆಗಳನ್ನು ಸಂರಕ್ಷಿತ ವಾತವರಣದಲ್ಲಿ ಬೆಳೆಯುವುದಕ್ಕೆ ಪ್ರೋತ್ಸಾಯಿಸುತ್ತದೆ.
3.ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮ ಜೀವಿಗಳನ್ನು ಬೆಳವಣಿಗೆಗೆ ಸಹಾಕಾರಿಯಾಗಿದೆ .
4.ಕಳೆ ಚಾಪೆಯು ಸೂಕ್ಷ್ಮ ರಂಧ್ರಗಳನ್ನು ಹೊಂದಿದ್ದು ನೀರು ಮತ್ತು ಗಾಳಿಯ ಚಲನೆಗೆ ಸಹಾಕಾರಿಯಾಗಿದೆ.
5.ಪೋಷಕಾಂಶಗಳು ಪೋಲಾಗುವುದನ್ನು ತಪ್ಪಿಸಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಲಿದೆ.
6.ತೋಟಗಾರಿಕೆ ಬೆಳೆಗಳಲ್ಲಿ ಕಳೆ ಬೆಳವಣಿಗೆಯನ್ನು ನಿಯಂತ್ರಿಸಲು ಕಳೆ ಚಾಪೆ (Weed Mat ) ಪರಿಣಾಮಕಾರಿ ಪರಿಣಾಮವನ್ನು ನಿಡುತ್ತದೆ .
7.ಕಳೆ ಚಾಪೆಯು ಸೂರ್ಯನ ಬೆಳಕನ್ನು ನಿರ್ಭಂದಿಸುವುದರಿಂದ ಕಳೆ ಬೆಳವಣಿಗೆಯನ್ನುಕುಂಟಿತಗೊಳಿಸುತ್ತದೆ.
ಇದನ್ನೂ ಓದಿ: E-Pauti Movement: ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!
Beneficiary Eligibility: ಫಲಾನುಭವಿಗಳ ಅರ್ಹತೆ :
1.ಫಲಾನುಭವಿಗಳ ಹೆಸರಿನಲ್ಲಿ ಜಮೀನು ಹೊಂದಿರಬೇಕು.
2.ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಓಪ್ಪಿಗೆ ಪತ್ರ ಪಡೆದಿರಬೇಕು (Notary ರವರಿಂದ ದೃಡೀಕರಣ ಮಾಡಿಸಬೇಕು).
3.ತಂದೆ ಅಥವಾ ತಾಯಿ ಹೆಸರಿನಲಿ ಜಮೀನಿದ್ದು, ಅವರು ಮರಣ ಹೊಂದಿದಲ್ಲಿ ಮಾತ್ರ ಮರಣ ಪತ್ರ- ಸಕ್ಷಮ ಪ್ರಾಧಿಕಾರದಿಂದ, ಗ್ರಾಮ ಆಡಳಿತಾಧಿಕಾರಿಯಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲಿ.. ಅರ್ಜಿ ಸಲ್ಲಿಸುವುದು.
4.ಮಹಿಳೆಯ ಹೆಸರಿನಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ತಾರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು.
ಮಹಿಳೆಯರ ಹೆಸರಿನಲಿಯೇ ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಬೇಕು.
Application Procedure and selection of beneficiaries: ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಪರಿಶೀಲನೆ ಮತ್ತು ಫಲಾನುಭವಿಗಳ ಆಯ್ಕೆ:-
ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ರವರು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಮಾರ್ಗಸೂಚಿಯ ಪ್ರಕಾರ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲು ಜಿಲ್ಲೆಗೆ ನಿಗಧಿಪಡಿಸಿರುವ ಗುರಿಯ ಮಿತಿಯಲಿ.. ಪ್ರಕಟಣೆಯನ್ನು ಸ್ಥಳೀಯ ಪತ್ರಿಕೆಗಳ ಮುಖಾಂತರವಾಗಿ ಹಾಗೂ ಜಿಲೆಯ ಎಲಾ, ಕಛೇರಿ ಸೂಚನಾ ಫಲಕದಲ್ಲಿ ಪ್ರದರ್ಶಿಸುವ ಮೂಲಕ ಹೆಚ್ಚಿನ ಪ್ರಚಾರ ನೀಡಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸುವುದು, ಈ ಬಗ್ಗೆ, ಎಲ್ಲಾ, ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ನೀಡತಕ್ಕದ್ದು.
ಪ್ರಕಟಣೆಯಲಿ ಕಡ್ಡಾಯವಾಗಿ ಫಲಾನುಭವಿಗಳ ಆರ್ಹತೆ, ಆಯ್ಕೆಯ ಮಾನದಂಡಗಳು, ಸಲಿಸಬೇಕಾದ ದಾಖಲಾತಿಗಳು, ಅರ್ಜಿಯನ್ನು ಸಲಿಸಲು ಕೊನೆಯ ದಿನಾಂಕ, ಜಿಲೆ..ಗೆ ನಿಗದಿಪಡಿಸಿದ ಗುರಿ ಮತ್ತು ನಿಗಧಿಪಡಿಸಿದ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕರಿಸಿದ್ದಲಿ ಅನುಸರಿಸುವ ವಿಧಾನದ ಬಗ್ಗೆ, ಸ್ಪಷ್ಟವಾಗಿ ಮಾಹಿತಿ ಇರತಕ್ಕದ್ದು. ಒಂದು ವೇಳೆ ನಿಗಧಿಪಡಿಸಿರುವ ಗುರಿಗಳಿಗಿಂತ ಹೆಚ್ಚುವರಿ ಅರ್ಜಿ ಬಂದಲಿ.. ಇಂತಹ ರೈತರಿಗೆ ಅನುದಾನ ಉಳಿಕೆಯಾಗಿದಲಿ. ರೈತರ ಅರ್ಜಿಯನ್ನು ಪರಿಗಣಿಸುವ ಬಗ್ಗೆ, ಲಿಖಿತವಾಗಿ ತಿಳಿಸತಕ್ಕದ್ದು.
ರೈತರನ್ನು FRUITS ತಂತ್ರಾಂಶದಲ್ಲಿ ಖಡ್ಡಾಯವಾಗಿ ನೋಂದಣಿಮಾಡಿ FID ಸಂಖ್ಯೆಯನ್ನು ಪಡೆಯುವುದು, ಅದರೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯ ವಿವರಗಳನ್ನು ಅರ್ಜಿಯಲ್ಲಿ ನಮೂದಿಸುವುದು.
ತಂತ್ರಾಂಶದಲ್ಲಿ ದೊರೆಯುವ FID ಸಂಖ್ಯೆಯ ಸಿದ್ಧ ದಾಖಲಾತಿ/ ಮಾಹಿತಿಯನ್ನು ಬಳಸಿಕೊಂಡು, ಹೆಚ್ಚುವರಿ ದಾಖಲಾತಿ/ ಮಾಹಿತಿಯ ಅವಶ್ಯಕವಿದ್ದಲ್ಲಿ ಮಾತ್ರ ಅಂತಹ ದಾಖಲಾತಿಗಳನ್ನು ರೈತರಿಂದ ಪಡೆಯುವುದು.
ರೈತರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅರ್ಜಿಗಳ ಅಂತಿಮ ಪಟ್ಟಿ ಮಾಡಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡುವುದು.
ಹೆಚ್ಚು ಮಳೆ ಬೀಳುವ ಉತ್ತರಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಲೆನಾಡಿನ ಅಡಿಕೆ ತೋಟಗಳಲ್ಲಿ ಬಳಸಲು ಸೂಕ್ತವಾಗಿದ್ದು ನಿಮ್ಮ ಕೃಷಿ ಪದ್ಧತಿಗಳಿಗೆ ಕಳೆ ಚಾಪೆಯನ್ನು ಹೇಗೆ ಸಂಯೋಜಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡು ಬಳಸಿದ್ದಲ್ಲಿ ಹೆಚ್ಚಿನ ಉಪಯೋಗವಾಗುತ್ತದೆ. ತೋಟಗಾರಿಕೆ ಬೆಳೆಯಲ್ಲಿ ಬಳಸುವ ಕಳೆ ಚಾಪೆಯು (ವೀಡ್ ಮ್ಯಾಟ್) ಕನಿಷ್ಠ 105-110 ಜಿಎಮ್ ದಪ್ಪದ ಹೆಚ್ಚು ಬಾಳಿಕೆ ಬರುವ ಉತ್ತಮ ಗುಣಮಟ್ಟದ ಪಾಲಿಪ್ರೊಪಿಲಿನ್ ನಿಂದ ಮಾಡಿದ್ದಾಗಿರಬೇಕು.
ಇದನ್ನೂ ಓದಿ: ಅತಿವೃಷ್ಠಿಯಿಂದ ಬೆಳೆ ಪರಿಹಾರಕ್ಕೆ ಕಡ್ಡಾಯವಾಗಿ ಈ ಕೆಲಸ ಮಾಡಿ:
Subsidy from the Department: ಇಲಾಖೆಯಿಂದ ದೊರೆಯುವ ಸಹಾಯಧನ :
2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಳೆ ಚಾಪೆ ಖರೀದಿಗೆ ಶೇ.50ರ ಸಹಾಯಧನ ಲಭ್ಯವಿದ್ದು. ಪ್ರತಿ ಚ.ಮೀಟರ್ ಗೆ ರೂ.50/- ಗರಿಷ್ಠ ಖರ್ಚು ಭರಿಸಬಹುದಾಗಿದ್ದು .500 ಸಹಾಯಧನಂತೆ ಪ್ರತಿ ಚ.ಮೀಟರ್ 0.25/-ಸಹಾಯಧನ ನೀಡಲಾಗುವುದು. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 1 ಎಕರೆ ( 4000 ಚ.ಮೀ) ಗೆ ಗರಿಷ್ಠ 1.00 ಲಕ್ಷಗಳ ಸಹಾಯಧನ ಪಡೆಯಬಹುದಾಗಿದೆ.
ಇದನ್ನೂ ಓದಿ: HDM scheme Letter
ವಿಶೇಷ ಮಾಹಿತಿ:
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಯೋಜನೆಯ ಲಾಭ ಪಡೆಯಲು ಕೋರಲಾಗಿದೆ.