Sunday, June 15, 2025

CROP SURVEY-ನಿಮ್ಮ ಸರ್ವೇ ನಂಬರ್‌ ಕೃಷಿಯೇತರ ಎಂದು ನಮೂದಿಸಲಾಗಿದೆಯೆ ತಿಳಿದುಕೊಳ್ಳಿ! 2025ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಇನ್ನೇನು ಆರಂಭವಾಗಲಿದೆ!

ನಮಸ್ಕಾರ ರೈತರೇ, ಮುಂಗಾರು ಹಂಗಾಮಿನ 2024 ರ ರೈತರ ಬೆಳೆ ಸಮೀಕ್ಷೆ ಆ್ಯಪ್ ಮತ್ತು ಖಾಸಗಿ ನಿವಾಸಿಗಳ ಬೆಳೆ ಸಮೀಕ್ಷೆ ಆಯಪ್‌ ಮೂಲಕ ರೈತರು ಬೆಳೆದ ಬೆಳೆಗಳ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಅದರಲ್ಲಿ ಹಲವಾರು ರೈತರ ಜಮೀನಿನ ಸರ್ವೇ ನಂಬರಗಳು ಸಮೀಕ್ಷೆಗೆ ಬಾರದೇ ಇದ್ದು ಅದಕ್ಕೆ ಕಾರಣ ಕಂದಾಯ ಇಲಾಖೆವತಿಯಿಂದ ಕೃಷಿಯೇತರ ಎಂದು ನಮೂದಿಸಿರುವುದರಿಂದ ಬರದೆ ಇರಬಹುದು ಅದನ್ನೂ ಸರಿಪಡಿಸಿಕೊಳ್ಳಲು  2025ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಗೆ ಆರಂಭಕ್ಕೂ ಮುನ್ನೂ ಕಾಲವಕಾಶ ನೀಡಲಾಗಿದೆ.

ಇದಕ್ಕೆ ನೀವೂ ನಿಮ್ಮ ಹತ್ತಿರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಬಳಿ ವಿಚಾರಿಸಿ ಸರಿಪಡಿಸಿಕೊಳ್ಳಬೇಕು. ಅದಕ್ಕಿಂತ ಮೊದಲು ನಿಮ್ಮ ಸರ್ವೇ ನಂಬರ್‌ ಕೃಷಿಯೇತರ ಎಂದು ನಮೂದಿಸಲಾಗಿದೆಯೇ ಎಂದು ತಿಳಿದುಕೊಳ್ಳಿ.

ಇದನ್ನೂ ಓದಿ:CC CAMERA ಅಳವಡಿಸುವಿಕೆ ಮತ್ತು ದುರಸ್ಥಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ!

Crop survey-ಬೆಳೆ ಸಮೀಕ್ಷೆ ಮಾಹಿತಿಯನ್ನು ಎಲ್ಲಿ ಪ್ರಯೋಜನಕ್ಕೆ ಬರುತ್ತದೆ ಗೊತ್ತಾ?

1)ಕೃಷಿ/ ಬೆಳೆ ಸಾಲ ಪಡೆಯಲು ಬೆಳೆ ಸಮೀಕ್ಷೆ ಮಾಹಿತಿ ಕಡ್ಡಾಯವಾಗಿ ಬೇಕು.

2)ಬೆಳೆ ವಿಮೆ ಮಾಡಿಸಲು ಮತ್ತು ಅದರ ಪರಿಹಾರ ಪಡೆಯಲು ಕಡ್ಡಾಯವಾಗಿ ಬೇಕು.

3)ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಯಂತ್ರೋಪಕರಣ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ಬೇಕು.

4)ಬೆಳೆ ಹಾನಿ ಮತ್ತು ಬೆಳೆ ನಷ್ಟ ಉಂಟಾದಾಗ ಬೆಳೆ ಸಮೀಕ್ಷೆ ಮಾಹಿತಿ ಬೇಕು.

5)ಸಾಂಖಿಕ್ಯ ಇಲಾಖೆಗೆ ಬೇಕಾಗುತ್ತದೆ.

Crop survey checking-ನಿಮ್ಮ ಜಮೀನಿನ ಸರ್ವೇ ನಂಬರ್‌ ಕೃಷಿಯೇತರ ಎಂದು ನಮೂದು ಆಗಿದೆಯೇ ಇಲ್ಲವೇ ಎಂದು ನೋಡುವ ವಿಧಾನ.

1)ಮೊದಲಿಗೆ ಈ ಲಿಂಕ್ ಮೇಲೆ (bele darshak app) ಕ್ಲಿಕ್ ಮಾಡಿ bele darshak app ನ್ನು ಡೌನ್ಲೋಡ್‌ ಮಾಡಿಕೊಳ್ಳಿ.

2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದುವರೆಯಿರಿ.

3)ಇದಾದ ಮೇಲೆ ನಿಮ್ಮ ಸರ್ವೆ ನಂಬರ್‌ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ.

ಇದನ್ನೂ ಓದಿ:ಕೃಷಿ ಇಲಾಖೆಯ ಸೌಲಭ್ಯಗಳು ಮತ್ತು ಷರತ್ತುಗಳು!

4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ್‌ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.

5)ನಂತರ ನಿಮಗೆ ಕೃಷಿಯೇತರ ಬಳಕೆ ಎಂದು ನಮೂದಿಸಲಾಗಿದೆ ಕಂದಾಯ ಇಲಾಕೆ ಅಥವಾ ಕೃಷಿ ಇಲಾಖೆ ಸಂಪರ್ಕಿಸಿ ಎಂದು ಬಂದರೆ ತಾವು ಹತ್ತಿರದ ಕಂದಾಯ ಇಲಾಖೆಯೆ ಗ್ರಾಮ ಆಡಳಿತ ಅಧಿಕಾರಿ ಬಳಿ ಹೋಗಿ ಸರಿಪಡಿಸಿಕೊಳ್ಳಿ.

6) ಹಾಗೆ ಬರದೆ ಇದ್ದಲ್ಲಿ ಈ ಕೆಳಗಿನ ಮಾಹಿತಿ ನೋಡಬಹುದು.

7)ಇದಾದ ಮೇಲೆ ಮಾಲೀಕರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.

8)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ ಮುಂದೆವರೆಯಿರಿ.

9)ಕ್ಲಿಕ್‌ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್‌ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್‌ ನಂಬರ್‌ ಮೇಲೆ ಕ್ಲಿಕ್‌ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.

10)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್‌ ಮಾಡಿ.

11)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್‌, ಮೊಬೈಲ್‌ ನಂ, ಅದರ ಕೆಳಗಡೆ ಬೆಳೆ ಹೆಸರು, ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಷರ್‌, ಛಾಯಾಚಿತ್ರ ವೀಕ್ಷಿಸಿ, ಋತು ಎಂಬ ಆಯ್ಕೆಗಳು ಕಾಣಿಸುತ್ತವೆ.

12)ತಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ.

ದಾಖಲಾದ ಬೆಳೆ ವಿವರ ತಿಳಿಯಲು ಇಲ್ಲಿದೆ ಲಿಂಕ್ Click here….  

ಇತ್ತೀಚಿನ ಸುದ್ದಿಗಳು

Related Articles