ನಮಸ್ಕಾರ ರೈತರೇ, ಕೃಷಿ ಇಲಾಖೆಯ ಅಂಗವಾಗಿರುವ ಸೆಕೆಂಡರಿ ಕೃಷಿ ನಿರ್ಧೇಶನಾಲಯದ ಅಡಿಯಲ್ಲಿ ವೈಯಕ್ತಿಕ ರೈತರಿಗೆ, ಹಾಗೂ ಸ್ವಸಹಾಯ ಸಂಘಗಳಿಗೆ ಮತ್ತು FPO, ರೈತ ಸಂಘಗಳಿಗೆ, ಮಹಿಳಾ ಗುಂಪುಗಳಿಗೆ ಸ್ವ ಉದ್ಯೋಗ ಸ್ಥಾಪನೆಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.
ಸ್ವ ಉದ್ಯೋಗ ಸ್ಥಾಪನೆಗೆ ಆಸಕ್ತಿ ಇರುವವರು ಈ ಕೂಡಲೇ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಿ ವಿಚಾರಿಸಬಹುದು.
*ಸಹಾಯಧನದ ವಿವರ 10 ಲಕ್ಷದವರೆಗೆ ಸಹಾಯಧನ*
ಕರ್ನಾಟಕ ರಾಜ್ಯದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಸೆಕೆಂಡರಿ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಮಹತ್ವಾಕಾಂಕ್ಷಿಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 50% ಅಥವಾ ಗರಿಷ್ಠ ರೂ.10 ಲಕ್ಷಗಳಷ್ಟು ಸಹಾಯಧನವನ್ನು ಹಾಗೂ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ 75% ಅಥವಾ ಗರಿಷ್ಠ ರೂ.10 ಲಕ್ಷಗಳಷ್ಟು ಸಹಾಯಧನವನ್ನು ನೀಡಲಾಗುತ್ತದೆ.
ಇದನ್ನೂ ಓದಿ:ಪಡಿತರ ಚೀಟಿ(ರೇಷನ್ ಕಾರ್ಡ್) ಹೊಂದಿರುವವರು ಕಡ್ಡಾಯವಾಗಿ ಈ ಕೆಲಸ ಮಾಡಿಕೊಳ್ಳಿ!
ಈ ಯೋಜನೆಗೆ ರೈತರು ವೈಯಕ್ತಿಕವಾಗಿ, ಸ್ವಸಹಾಯ ಸಂಘಗಳು (SHG), ರೈತ ಉತ್ಪಾದಕರ ಸಂಸ್ಥೆಗಳು (FPO), ಸಹಕಾರ ಸಂಘಗಳಿಗೆ ಅವಕಾಶವಿದ್ದು
ಯಾವೆಲ್ಲ ಚಟುವಟಿಕೆಗಳಿಗೆ ಸಹಾಯಧನ ಸಿಗಲಿದೆ ಈ ಕೆಳಗಿನಂತಿದೆ*
• ಅಡಿಕೆ ಹಾಳೆ ಪ್ಲೇಟು ತಯಾರಿಕೆ
• ತೆಂಗಿನ ನಾರು ಉತ್ಪಾದನೆ
• ಕೊಕೊ ಪೀಟ್ ಘಟಕ
• ಬಿದಿರಿನ ಉಪ ಉತ್ಪನ್ನಗಳ ತಯಾರಿಕೆ
• ಎರೆಹುಳು ಘಟಕ
• ಸಾವಯವ ಗೊಬ್ಬರ ಘಟಕ
• ಬಯೋಚಾರ ಘಟಕ
• ಜೀವಾಮೃತ ತಯಾರಿಕೆ
• ಬಾಳೆ ನಾರು ಉತ್ಪನ್ನಗಳು
• ನೈಸರ್ಗಿಕ ಬಣ್ಣ ತಯಾರಿಕೆ
• ಬೆರಣಿ ಮತ್ತು ಬಸ್ಮ ತಯಾರಿಕೆ
ಇದನ್ನೂ ಓದಿ:ಉಚಿತ ಅಣಬೆ ತರಬೇತಿಗೆ ಅರ್ಜಿ ಆಹ್ವಾನ!
• ನೈಸರ್ಗಿಕ ಸಾಬೂನು ತಯಾರಿಕೆ
• ಬೇವಿನ ಪುಡಿ ಮತ್ತು ಎಣ್ಣೆ ತಯಾರಿಕೆ
• ನೈಸರ್ಗಿಕ ಸುಗಂಧ ದ್ರವ್ಯ ಉತ್ಪಾದನೆ
• ಬಯೋಫ್ಯುಯೆಲ್ ತಯಾರಿಕೆ
• ಬಿದಿರಿನ ನೇಯ್ಗೆ ಉತ್ಪನ್ನಗಳು
• ನೈಸರ್ಗಿಕ ಸೌಂದರ್ಯವರ್ಧಕ ತಯಾರಿಕೆ
• ಕೃಷಿ ಪ್ರವಾಸೋದ್ಯಮ
• ಜೇನು ಕೃಷಿ
• ಅಣಬೆ ಬೆಳೆ (ಅಣಬೆ ಬೇಸಾಯ)
• ಕೃಷಿ-ಅರಣ್ಯ (Agroforestry)
• ಡೈರಿ ಉತ್ಪನ್ನಗಳು
• ಆಹಾರ ಉತ್ಪನ್ನಗಳು (Food Products)
• ಇತರ ಲಘು ಕೃಷಿ ಆಧಾರಿತ ಉದ್ಯಮಗಳು
• ಅಂಟು ಉತ್ಪಾದನೆ
• ಬಿದಿರು ಉತ್ಪನ್ನಗಳು
• ಅಲೋವೆರಾ ಉತ್ಪನ್ನಗಳು
• ಹೊಸ ತಳಿ ಕುರಿ ಮೇಕೆ ಸಾಕಣೆ
• ಕೃಷಿ, ತೋಟಗಾರಿಕೆ, ಅರಣ್ಯ ಬೆಳೆಗಳ ನರ್ಸರಿ
• ಜೈವಿಕ ಕೀಟನಾಶಕ ತಯಾರಿಕೆ
• ಜ್ಯಾಮ್, ಜ್ಯುಸ್, ಪುಡಿ, ಪೇಸ್ಟ್, ಇತರೆ ಉತ್ಪನ್ನ ತಯಾರಿಕೆ
• ಪಶು ಆಹಾರ ತಯಾರಿಕೆ
• ಇತರೆ ಕೃಷಿ ಪೂರಕ ಉದ್ಯಮಗಳಿಗೆ ಬೇಡಿಕೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ವಿಚಾರಿಸಬಹುದು.