Friday, October 18, 2024

Pm kisan amount status-ಪಿಎಮ್ ಕಿಸಾನ್ 18ನೇ ಕಂತು ನಿಮಗೆ ಜಮೆ ಆಗಿದೆಯೋ ಇಲ್ಲವೇ ಎಂದು ನೋಡಿ ಕೊಳ್ಳುವ ವಿಧಾನ!

ನಮಸ್ಕಾರ ರೈತರೇ, ಮೊನ್ನೆ ಅಷ್ಟೇ ಅಕ್ಟೋಬರ್ 5 ರಂದು ಕೇಂದ್ರ ಸರಕಾರವು ಪಿಎಮ್ ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತು ಬಿಡುಗಡೆ ಮಾಡಿದರು. ಈ ಕಂತು ಯಾರಿಗೆಲ್ಲ ಜಮೆ ಆಗಿದೆ ನಿಮಗೆ ಜಮೆ ಆಗಿದೆಯೇ ಇಲ್ಲವೇ ಎಂದು ನೋಡಿಕೊಳ್ಳುವ ವಿಧಾನ ಹೇಗೆ ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ಹೌದು ರೈತರೇ, ಮೊನ್ನೆ ಅಷ್ಟೇ ಅಕ್ಟೋಬರ್ 5 ರಂದು 18 ನೇ ಕಂತು ಜಮೆ ಮಾಡಲಾಗಿದೆ. ಈ ಹಣವು ಹಲವಾರು ಜನರಿಗೆ ಬಂದಿದ್ದು ಅವರ ಗಮನಕ್ಕೆ ಗೊತ್ತಿರುವುದಿಲ್ಲ ಅದನ್ನು ತಿಳಿದುಕೊಳ್ಳಬೇಕು ಎಂದು ಹಾಗೂ ನಿಮಗೆ ಇಲ್ಲಿಯವರೆಗೂ ಎಷ್ಟು ಕಂತು ಜಮೆ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ತುಂಬಾ ಅನುಕೂಲಕರವಾಗಿದೆ. ಇದರಿಂದ ರೈತರಿಗೆ ಸುಲಭವಾಗಿ ಬೀಜ ಮತ್ತು ಗೊಬ್ಬರಗಳನ್ನು ಖರೀದಿ ಮಾಡಬಹುದು.

ಇದನ್ನೂ ಓದಿ:ಉಚಿತ ಊಟ ಮತ್ತು ವಸತಿಯೊಂದಿಗೆ 10 ದಿನಗಳ ಕೋಳಿ ಸಾಕಾಣಿಕೆ ತರಬೇತಿ ಅರ್ಜಿ ಆಹ್ವಾನ!

Pm kisan amount status-18ನೇ ಕಂತು ನಿಮಗೆ ಜಮೆ ಆಗಿದೆಯೇ ಇಲ್ಲವೇ ಎಂದು ನೋಡುವ ವಿಧಾನ:

ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರೆದುಕೊಳ್ಳುತ್ತದೆ.

step-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರೆದುಕೊಂಡ ನಂತರ Farmers Corner ನಲ್ಲಿ ಹಲವು ಅಂಕಣಗಳಿವೆ E-kyc ಅಂಕಣ, New farmer registration ಅಂಕಣ, Know your status ಅಂಕಣ, Beneficiary list ಅಂಕಣ, Nmae correction as per Aadhar ಅಂಕಣ ಹೀಗೆ ಹಲವು ಅಂಕಣಗಳಿವೆ.

step-2: ಈ ಎಲ್ಲಾ ಅಂಕಣಗಳಲ್ಲಿ ನೀವು Know your status ಅಂಕಣದ ಮೇಲೆ ಕ್ಲಿಕ್ ಮಾಡಬೇಕು.

step-3: ನಂತರ ಅದರಲ್ಲಿ Know your Registration no. ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಕ್ಲಿಕ್ ಕೊಡಿ OTP ಬರುತ್ತದೆ, OTP ಹಾಕಿ ನಿಮ್ಮ Registration number ತೆಗೆದುಕೊಳ್ಳಬೇಕು.

step-4:ನಂತರ Know your status ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ಪಡೆದುಕೊಂಡ Registration number ಹಾಕಿ ಮತ್ತೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ ಅದನ್ನು ಹಾಕಿದರೆ ನಿಮ್ಮ profile page ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಹಾಗೂ ಇಲ್ಲಿಯವರೆಗೂ ಬಂದಿರುವ ಎಲ್ಲಾ ಕಂತಿನ ಹಣದ ವಿವರ ಅದರಲ್ಲಿ ಕೊಡಲಾಗಿದೆ.

ಇದನ್ನೂ ಓದಿ:ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಇನ್ನೂ ಆಗಿಲ್ಲವೇ ಆದಷ್ಟು ಬೇಗನೆ ಬೆಳೆ ಸಮೀಕ್ಷೆಗಾರರನ್ನು ಭೇಟಿ ಮಾಡಿ ಸಮೀಕ್ಷೆ ಮಾಡಿಸಿ.ಬೆಳೆ ಸಮೀಕ್ಷೆದಾರರ ಮಾಹಿತಿ ಇಲ್ಲಿದೆ.

PM-Kisan pending reasons-ಕಿಸಾನ್ ಸಮ್ಮಾನ್ ನಿಧಿ ಹಣ ಬರದಿರಲು ಕಾರಣಗಳು:

1)E-kyc ಮಾಡಿಸದೆ ಬಾಕಿ ಇರುವ ರೈತರು.

2)ಒಂದೇ ಕುಟುಂಬ ಪರಿಶೀಲನೆಗೆ ಬಾಕಿ ಇರುವವರು.

3)ಕೃಷಿ ಜಮೀನು ವರ್ಗಾವಣೆ ಮತ್ತು ಮಾರಾಟ ಮಾಡಿರುವುದು.

4)RTC ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರುಗಳ ಬದಲಾವಣೆ ಇರುವವರು.

5)ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್(aadhar seeding) ಮಾಡದೆ ಇರುವವರು.

6)village VNO login physical verification ಬಾಕಿ ಇರುವವರು.

7)income tax file ಮಾಡಿರುವವರು.

ಇತ್ತೀಚಿನ ಸುದ್ದಿಗಳು

Related Articles