Thursday, January 23, 2025

Crop survey work-ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಇನ್ನೂ ಆಗಿಲ್ಲವೇ ಆದಷ್ಟು ಬೇಗನೆ ಬೆಳೆ ಸಮೀಕ್ಷೆಗಾರರನ್ನು ಭೇಟಿ ಮಾಡಿ ಸಮೀಕ್ಷೆ ಮಾಡಿಸಿ. ಬೆಳೆ ಸಮೀಕ್ಷೆಗಾರರ ಮಾಹಿತಿ ಇಲ್ಲಿದೆ.

ನಮಸ್ಕಾರ ರೈತರೇ, 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಿ. ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಬೇಕು ಅಥವಾ ಮಾಡಿಸಿ.

ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಮೂಲಕ ಈಗಾಗಲೇ ನಿಮ್ಮ ನಿಮ್ಮ ಗ್ರಾಮ ಮತ್ತು ಸರ್ವೇ ನಂಬರ್ ಗಳಿಗೆ ಬೆಳೆ ಸಮೀಕ್ಷೆಗಾರರನ್ನು ನೇಮಕ ಮಾಡಲಾಗಿದೆ. ಅವರು ಯಾರು ಮತ್ತು ಅವರ ಸಂಪರ್ಕ ಮೊಬೈಲ್ ಸಂಖ್ಯೆ ಸಮೇತವಾಗಿ ಮಾಹಿತಿಯನ್ನು ನಿಮಗೆ ಇಲ್ಲಿ ತಿಳಿಸಿಕೊಡಲಾಗುತ್ತದೆ.

Bele darshaka app-ನಿಮ್ಮ ಗ್ರಾಮಕ್ಕೆ ನೇಮಕವಾದ ಬೆಳೆ ಸಮೀಕ್ಷೆಗಾರರು ಯಾರು ಎಂದು ತಿಳಿದುಕೊಳ್ಳುವ ವಿಧಾನ:

1)ಮೊದಲಿಗೆ GOOGLE PLYSTORE ಹೋಗಿ ಅಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ bele darshank app ನ್ನು ಡೌನ್ಲೋಡ್‌ ಮಾಡಿಕೊಳ್ಳಿ.

2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದೆವರೆಯಿರಿ.

ಇದನ್ನೂ ಓದಿ:ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ಧಿ ಗೃಹಲಕ್ಷ್ಮಿ ಹಣ ಬಿಡುಗಡೆ!ಚೆಕ್ ಮಾಡುವ ವಿಧಾನ.

3)ಇದಾದ ಮೇಲೆ ಅಲ್ಲಿ ಕೆಳಗೆ ಕಾಣಿಸುವ ಗ್ರಾಮದ ಬೆಳೆ ಸಮೀಕ್ಷೆಗಾರರ ವಿವರ ಮೇಲೆ ಕ್ಲಿಕ್‌ ಮಾಡಿ.

4) ನಂತರ ನಿಮಗೆ ಬೆಳೆ ಸಮೀಕ್ಷೆದಾರರ ಹೆಸರು ಬರುತ್ತದೆ.

5)ಬೆಳೆ ಸಮಿಕ್ಷೆದಾರರ ಹೆಸರು ನಂತರ ಅವರ ಮೊಬೈಲ್ ನಂಬರ್ ಸಹ ಅದರಲ್ಲಿ ನಿಮಗೆ ಸಿಗುತ್ತದೆ.

6)ನಂತರ ಆ ಬೆಳೆ ಸಮೀಕ್ಷೆದಾರರಿಗೆ ಹಂಚಿಕೆ ಮಾಡಲಾದ ಸರ್ವೇ ನಂಬರ್ ಗಳ ವಿವರ ಬರುತ್ತದೆ.

7)ನಿಮ್ಮ ಸರ್ವೇ ನಂಬರ್ ಗೆ ಯಾರು ಬೆಳೆ ಸಮೀಕ್ಷೆದಾರರು ಎಂದು ನೋಡಿ ಅವರನ್ನು ಸಂಪರ್ಕಿಸಿ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮಾಡಿಸಬಹುದು. ಇಲ್ಲವಾದಲ್ಲಿ ಅವರಿಂದ ಬೆಳೆ ಸಮೀಕ್ಷೆಯ ಮಾಹಿತಿ ಪಡೆದುಕೊಂಡು ಸ್ವತಃ ತಾವೇ ಸಮೀಕ್ಷೆ ಮಾಡಿಕೊಳ್ಳಬಹುದು.

ಇದನ್ನೂ ಓದಿ:ಪಿಎಂಕಿಸಾನ್ ಯೋಜನೆಯ 18ನೇ ಕಂತು ಬಿಡುಗಡೆ! ನಿಮಗೆ ಬಂತೆ ತಿಳಿದುಕೊಳ್ಳುವ ವಿಧಾನ.

ಬೆಳೆ ಸಮೀಕ್ಷೆಗಾರರ ವಿವರ ತಿಳಿಯಲು ಇಲ್ಲಿದೆ ಲಿಂಕ್ Click here….

ಇತ್ತೀಚಿನ ಸುದ್ದಿಗಳು

Related Articles