Friday, October 18, 2024

Krishi mela brahmavar-ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದಲ್ಲಿ ಎರಡು ದಿನಗಳ ಕೃಷಿ ಮೇಳ ಆಯೋಜನೆ! ಮೇಳದ ಆಕರ್ಷಣೆಗಳ ಮಾಹಿತಿ ಇಲ್ಲಿದೆ.

ನಮಸ್ಕಾರ ರೈತರೇ, ರೈತರಿಗೆ ಕೃಷಿ ಮಾಹಿತಿಗಳು ಹೆಚ್ಚಾಗಿ ಸಿಗಲಿ ಎಂಬ ಉದ್ದೇಶದಿಂದ ಅಲ್ಲಲ್ಲಿ ಕೃಷಿ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದಲ್ಲಿ ಎರಡು ದಿನಗಳ ಕೃಷಿ ಮೇಳ ಆಯೋಜನೆ ಮಾಡಲಾಗುತ್ತಿದೆ. ಮೇಳದ ಆಕರ್ಷಣೆಗಳ ಮಾಹಿತಿ ತಿಳಿಯಲು ಈ ಲೇಖನವನ್ನು ಸಂಪೂರ್ಣ ಓದಿ.

ಹೌದು ರೈತರೇ, ಇದೇ ತಿಂಗಳು ಅಕ್ಟೋಬರ್ 26 ಮತ್ತು 27 ರಂದು ಎರಡು ದಿನಗಳ ಕೃಷಿ ಮೇಳವನ್ನು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ,ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮತ್ತು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಇವರ ಜಂಟಿ ಸಹಯೋಗದೊಂದಿಗೆ ಕೃಷಿ ಮೇಳ 2024 ನಡೆಯಲಿದೆ.

ಈ ಕೃಷಿ ಮೇಳ ನಡೆಯುವ ಸ್ಥಳವು ಉಡುಪಿ ಜಿಲ್ಲೆಯ ಬ್ರಹ್ಮಾವರದ ಹತ್ತಿರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದಲ್ಲಿ ನಡೆಯಲಿದೆ. ಇದರಲ್ಲಿ ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ಹಾಕಬಹುದು ಮತ್ತು ಕೃಷಿ ವಸ್ತುಗಳನ್ನು ಮಾರಾಟ ಮಾಡಬಹುದು.

ಇದನ್ನೂ ಓದಿ:ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಬೆಳೆ ನಮೂದು ತಪ್ಪಾಗಿದ್ದರೆ ಹೀಗೆ ಆಕ್ಷೇಪಣೆ ಸಲ್ಲಿಸಬಹುದು!

Krishi mela brahmavar-ಕೃಷಿ ಮೇಳದ ವಿಶೇಷತೆಗಳು:

1)ವಿವಿಧ ಭತ್ತದ ತಳಿಗಳು ಮತ್ತು ಬೀಜೋತ್ಪಾದನೆ.

2)ಕೃಷಿ ಡ್ರೋನ್ ಬಳಕೆ ಪ್ರಾತ್ಯಕ್ಷಿಕೆ.

3)ಕಾಡು ಪ್ರಾಣಿ ಹಾವಳಿ ನಿಯಂತ್ರಣ ಸಾಧನ ಪ್ರಾತ್ಯಕ್ಷಿಕೆ.

4)ವಿವಿಧ ಹುಲ್ಲಿನ ಮೇವಿನ ತಳಿಗಳ ಪ್ರಾತ್ಯಕ್ಷಿಕೆ ತಾಕುಗಳು.

5)ತೋಟಗಾರಿಕೆ ಬೆಳೆಗಳಲ್ಲಿ ಕಸಿ ಕಟ್ಟುವಿಕೆ ಮತ್ತು ಸಸ್ಯಾಭಿವೃದ್ದಿ.

6)ಸಾವಯವ ಗೊಬ್ಬರ, ಕಾಂಪೋಸ್ಟ, ಎರೆಹುಳ ಗೊಬ್ಬರ, ಅಜೋಲ್ಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ.

7)ಹೈನುಗಾರಿಕೆ, ಮೀನುಗಾರಿಕೆ, ಆಡು, ಕುರಿ, ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆ.

8)ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ.

9)ಮೌಲ್ಯಧಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ.

10)ಹಣ್ಣು ಮತ್ತು ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.

ಇದನ್ನೂ ಓದಿ:ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ಧಿ ಗೃಹಲಕ್ಷ್ಮಿ ಹಣ ಬಿಡುಗಡೆ! ಚೆಕ್ ಮಾಡಲು ಇಲ್ಲಿದೆ ಲಿಂಕ್.

Stall booking-ಮಳಿಗೆಗಳನ್ನು ಮುಂಗಡ ಕಾಯ್ದಿರಿಸಲು ಸಂಪರ್ಕಿಸಿ:

1)ಡಾ. ಶಂಕರ್ ಎಂ ಹಿರಿಯ ಕ್ಷೇತ್ರ ಅಧೀಕ್ಷಕರು-9480838982

2)ಡಾ.ಮೋಹನ್ ಕುಮಾರ್ ಸಹಾಯಕ ಪ್ರಾಧ್ಯಾಪಕರು-7760331096

3)ಪ್ರವೀಣ ಕೆ ತಾಂತ್ರಿಕ ಅಧಿಕಾರಿ -8919034892

ಇತ್ತೀಚಿನ ಸುದ್ದಿಗಳು

Related Articles