ನಮಸ್ಕಾರ ರೈತರೇ, 2024ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಿಮ್ಮದು ಆಗಿಲ್ಲವೇ ಹಾಗಿದ್ದರೇ ನಿಮಗೆ ಈ ಸೌಲಭ್ಯಗಳು ಸಿಗುವುದಿಲ್ಲ. ಬೆಳೆ ಸಮೀಕ್ಷೆಯ ವರದಿಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಲು ಕಡ್ಡಾಯ ಬಳಕೆ ಮಾಡುತ್ತಿವೆ.
ಆದ್ದರಿಂದ ಪ್ರತಿಯೊಬ್ಬ ರೈತರಿಗೂ ತಮ್ಮ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಇದೇ ತಿಂಗಳು ಸೆಪ್ಟಂಬರ್ 30/09/2024 ರ ವರೆಗೆ ಅವಕಾಶವಿದ್ದು, ಎಲ್ಲರೂ ತಪ್ಪದೇ ಬೆಳೆ ಸಮೀಕೆಯನ್ನು ಮಾಡಿಕೊಂಡು ಇಲಾಖೆ ಸಹಕರಿಸಬೇಕಾಗಿ ವಿನಂತಿ.
ಒಂದು ವೇಳೆ ನಿಮಗೆ ಸಮೀಕ್ಷೆ ಮಾಡಲು ಬರದೆ ಇದ್ದಲ್ಲಿ ನೀವು ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಸಮೀಕ್ಷೆ ಮಾಡಬಹುದು.
ಈಗಾಗಲೇ ಎಲ್ಲಾ ಗ್ರಾಮಗಳಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆಯ ಮೂಲಕ ಬೆಳೆ ಸಮೀಕ್ಷೆಗಾರರನ್ನು ನೇಮಕ ಮಾಡಲಾಗಿದೆ ಅವರನ್ನು ತಾವು ಸಂಪರ್ಕಿಸಿ ಸಹ ಮಾಹಿತಿ ಪಡೆದುಕೊಂಡು ಅಥವಾ ಅವರನ್ನು ನಿಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಬೆಳೆ ಸಮೀಕ್ಷೆ ಮಾಡಿಸಬಹುದು.
DO NOT SURVEY-ಬೆಳೆ ಸಮೀಕ್ಷೆ ಮಾಡದಿದ್ದರೇ ಈ ಸೌಲಭ್ಯಗಳು ಸಿಗುವುದಿಲ್ಲ.
1)ಬೆಳೆ ವಿಮೆ ಕಟ್ಟಲು ಬರುವುದಿಲ್ಲ.
2)ಬೆಳೆ ಹಾನಿ ಪರಿಹಾರ ಬರುವುದಿಲ್ಲ.
3)ಕೃಷಿ, ತೋಟಗಾರಿಕೆ ಇಲಾಖೆಯ ಸೌಲಭ್ಯಗಳು ಸಿಗುವುದಿಲ್ಲ.
4)ಸಹಕಾರಿ ಸಂಘದ ಮತ್ತು ರಾಷ್ಟ್ರೀಕೃತ ಬ್ಯಾಂಕಗಳ ಸಾಲ ಸಿಗುವುದಿಲ್ಲ.
5)ಮಳೆ ಹಾನಿ ಪರಿಹಾರ ಸಿಗುವುದಿಲ್ಲ.
6)ಕನಿಷ್ಠ ಬೆಂಬಲ ಬೆಲೆ ದರ ಸಿಗುವುದಿಲ್ಲ.
7)ಪಹಣಿಗೆ/RTC ಬೆಳೆ ದಾಖಲು ಆಗುವುದಿಲ್ಲ.
8)ಪ್ರವಾಹ ಮತ್ತು ಬರಗಾಲದ ಪರಿಹಾರ ಸಿಗುವುದಿಲ್ಲ.
ಸೂಚನೆ:ಬೆಳೆ ಸಮೀಕ್ಷೆಯ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗೆ ಭೇಟಿ ಮಾಡಿ ವಿಚಾರಿಸಿ.
ಇಲ್ಲಿದೆ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವ ವಿಧಾನ:Click here…..