Thursday, November 21, 2024

Fertilizer buyer rules-ರೈತರು ರಸಗೊಬ್ಬರವನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು! ಯಾವು ನಿಮಗೆ ಗೊತ್ತೆ?

ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಕೃಷಿ ಜಮೀನಿದ್ದು ಕೃಷಿ ಮಾಡುವ ರೈತರಿಗೆ ಬೆಳೆಗಳಿಗೆ ನೀಡುವ ರಸಗೊಬ್ಬರವು ಹೇಗೆ ಇರಬೇಕು? ಎಷ್ಟು ಬೆಳೆಗಳಿಗೆ ಕೊಡಬೇಕು? ರಸಗೊಬ್ಬರವನ್ನು ಖರೀದಿಸುವಾಗ ರೈತರು ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎಂಬ ಮಾಹಿತಿನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಇಂದಿಗೂ ಎಷ್ಟೋ ಜನ ರೈತರಿಗೆ ಸರಿಯಾಗಿ ಯಾವ ಬೆಳೆಗೆ ಎಷ್ಟು ಗೊಬ್ಬರ ಕೊಡಬೇಕು, ಯಾವ ಹಂತದಲ್ಲಿ ಕೊಡಬೇಕು, ಎಂಬ ಮಾಹಿತಿ ಇಲ್ಲ ಹಾಗೂ ರಸಗೊಬ್ಬರಗಳ ಬಳಕೆಯನ್ನು ಸರಿಯಾದ ಮಾಹಿತಿ ಇಲ್ಲದೆ ಬೆಳೆಗಳಿಗೆ ಹಾಕುವುದರಿಂದ ವ್ಯರ್ಥವಾಗುವ ಸಾಧ್ಯತೆ ಹೆಚ್ಚು.

ಈ ಎಲ್ಲಾ ಮಾಹಿತಿಗಳ ಜೊತೆಗೆ ರೈತರು ತಾವು ಖರೀದಿಸುವ ರಸಗೊಬ್ಬರಗಳು ಎಷ್ಟು ಗುಣಮಟ್ಟದ್ದಿರಬೇಕು ಹಾಗೂ ರೈತರು ಎಲ್ಲಿ ರಸಗೊಬ್ಬರಗಳನ್ನು ಖರೀದಿಸಬೇಕು ಖರೀದಿಸುವಾಗ ರೈತರು ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎಂಬ ಮಾಹಿತಿ ತಿಳಿದು ಕೊಳ್ಳುವುದು ಅತೀ ಅವಶ್ಯಕವಾಗುತ್ತದೆ.

ಇದನ್ನೂ ಓದಿ:ಕುರಿ, ಕೋಳಿ, ಹಂದಿ, ಹಸುಗಳ ಸಾಕಾಣಿಕೆ ಶೇಡ್ ನಿರ್ಮಾಣ ಮಾಡಲು ರೂ.57,000/- ಸಬ್ಸಿಡಿ ಪಡೆಯಬಹುದು! ಇಲ್ಲಿದೆ ಅದರ ಮಾಹಿತಿ.

Fertilizer rules-ರಸಗೊಬ್ಬರ ಖರೀದಿಸುವಾಗ ರೈತರು ಗಮನಿಸಬೇಕಾದ ಅಂಶಗಳು:

1)ರಸಗೊಬ್ಬರ ಚೀಲವನ್ನು ತೂಕ ಮಾಡಿಸಿ ತೆಗೆದುಕೊಳ್ಳಬೇಕು.

2)ರಸಗೊಬ್ಬರದ ಚೀಲದ ಬಾಯಿಯನ್ನು ಯಂತ್ರದಿಂದ ಹೊಲೆದಿರಬೇಕು. ಒಂದು ವೇಳೆ ಕೈಯಿಂದ ಹೊಲೆದಿದ್ದರೆ ಅದಕ್ಕೆ ಸೀಸದ ಮೊರವನ್ನು ಹಾಕಿರಬೇಕು.

3)ರಸಗೊಬ್ಬರದ ಚೀಲದ ಮೇಲೆ ನಮೂದಿಸಿದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು.

4)ರಸಗೊಬ್ಬರದ ಚೀಲದ ಮೇಲೆ ಕೆಳಕಂಡ ವಿವರಗಳು ಮುದ್ರಿತವಾಗಿರಬೇಕು.

ಅ)ರಸಗೊಬ್ಬರವೆಂದು ಮುದ್ರಿತವಾಗಿರಬೇಕು.

ಆ)ರಸಗೊಬ್ಬರ ತಯಾರಕರ ಹೆಸರು ಮತ್ತು ವಿಳಾಸ.

ಇ)ರಸಗೊಬ್ಬರದ ಬ್ರ್ಯಾಂಡ್, ರಸಗೊಬ್ಬರದ ಹೆಸರು.

ಈ)ರಸಗೊಬ್ಬರದಲ್ಲಿನ ಕನಿಷ್ಠ ಶೇಕಡಾ ಪೋಷಕಾಂಶಗಳ ವಿವರಗಳು.

ಉ)ಗರಿಷ್ಠ ಮಾರಾಟ ಬೆಲೆ.

ಊ)ಗರಿಷ್ಠ ಮತ್ತು ನಿವ್ವಳ ತೂಕ.

ಇದನ್ನೂ ಓದಿ:ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯ ಲಾಭ ಪಡೆಯಲು ಇಲ್ಲಿದೆ ಉಪಯುಕ್ತ ಮಾಹಿತಿ ನಿಮಗಾಗಿ!

ಋ)ರಸಗೊಬ್ಬರಗಳ ಮಿಶ್ರಣಗಳು, ಸಿಂಗಲ್ ಸೂಪರ್ ಫಾಸ್ಪೇಟ್, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣಗಳ ಚೀಲ/ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ ಮತ್ತು ರಿಜಿಸ್ಟ್ರೇಷನ್ ಸಂಖ್ಯೆ ನಮೂದಿಸಿರಬೇಕು.

5)ರಸಗೊಬ್ಬರವನ್ನು ಖರೀದಿಸಿದಕ್ಕೆ ರಶೀತಿಯನ್ನು ಪಡೆಯಬೇಕು. ರಶೀತಿಯಲ್ಲಿ ಖರೀದಿಸಿದ ರಸಗೊಬ್ಬರಗಳ ವಿವರಗಳನ್ನು ತುಂಬಿದ್ದು ರೈತರ ಸಹಿ ಮತ್ತು ಮಾರಾಟಗಾರರ ಸಹಿ ಇರಬೇಕು.

ಇತ್ತೀಚಿನ ಸುದ್ದಿಗಳು

Related Articles