Thursday, November 21, 2024

Ration card ekyc-ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಇ-ಕೆವೈಸಿ (e-kyc) ಮಾಡಿಸಿ, ಇಲ್ಲವಾದಲ್ಲಿ ರೇಷನ್ ಕಾರ್ಡ್ ಬಂದಾಗುವ ಸಾಧ್ಯತೆಗಳಿವೆ. ಎಲ್ಲಿ ಮಾಡಿಸಬೇಕು ಇಲ್ಲಿದೆ ಮಾಹಿತಿ.

ಆಹಾರ ಇಲಾಖೆಯು ಪಡಿತರ ಚೀಟಿ (ರೇಷನ್ ಕಾರ್ಡ್) ಹೊಂದಿರುವ ಪ್ರತಿಯೊಬ್ಬರು ತಪ್ಪದೆ ಇ.ಕೆ.ವೈ.ಸಿ (ekyc) ಮಾಡಿಸಲು ಆದೇಶವನ್ನು ಹೊರಡಿಸಿದ್ದು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಇ.ಕೆವೈ.ಸಿ ಮಾಡಿಸಿ ಇಲ್ಲವಾದಲ್ಲಿ ಪಡಿತರ ಚೀಟಿಯಿಂದ ನಿಮ್ಮ ಹೆಸರನ್ನು ಕೈಬಿಡಲಾಗುವುದು ಎಂದು ಸೂಚಿಸಲಾಗಿದೆ.

ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆಯ ಹೊಸ ವಿಧಾನ ಮತ್ತು ಪ್ರಸ್ತುತ ನಿಗದಿಪಡಿಸಿರುವ ಕೊನೆಯ ದಿನಾಂಕ ಯಾವುದು? ಪಡಿತರ ಚೀಟಿಗೆ ಇ-ಕೆವೈಸಿಯನ್ನು ಗ್ರಾಹಕರು ಎಲ್ಲಿ ಮಾಡಿಸಬೇಕು? ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿ (ration card) ಹೊಂದಿರುವ ರಾಜ್ಯದ ಎಲ್ಲಾ ಗ್ರಾಹಕರು ಮಾಸಿಕವಾಗಿ ಆಹಾರ ಧಾನ್ಯವನ್ನು ಪಡೆಯಲು ಇ-ಕೆವೈಸಿ ಅನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ:ಪಿ.ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪರಿಷ್ಕೃತ/ಹೊಸ ಪಟ್ಟಿ ಬಿಡುಗಡೆ ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ರೂ.2000 ಬರುತ್ತೆ.ಇಲ್ಲಿದೆ ಚೆಕ್ ಮಾಡಿಕೊಳ್ಳುವ ವಿಧಾನ.

why do E-kyc Ration Card-ಏಕೆ ಇ-ಕೆವೈಸಿ ಮಾಡಿಸಬೇಕು?

ಆಹಾರ ಇಲಾಖೆಯಿಂದ ನೀಡಲಾಗುವ ಪಡಿತರ ಚೀಟಿಯಲ್ಲಿ ಹಲವು ಜನರು ಮರಣ ಹೊಂದಿದ್ದು ಮತ್ತು ಹಲವು ಜನ ರೇಷನ್ ಕಾರ್ಡ್ ನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗೂ ಶ್ರೀಮಂತ ಜನರು ಈ ಪಡಿತರ ಚೀಟಿಯನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಿರುತ್ತಾರೆ. ಇದನ್ನೇಲ್ಲ ಪತ್ತೆ ಹಚ್ಚಲು ಆಹಾರ ಇಲಾಖೆಯು ಇ-ಕೆವೈಸಿ ಮಾಡಿಸಲು ತಿಳಿಸಿದೆ.

Last date for ekyc- ಇಕೆವೈಸಿ ಮಾಡಲು ಕೊನೆಯ ದಿನಾಂಕ ಯಾವುದು?

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿ (ration card) ಹೊಂದಿರುವವರಿಗೆ ಇದೇ ತಿಂಗಳು 31 ಅಗಷ್ಟ 2024 ರೊಳಗೆ ತಪ್ಪದೆ ಇಕೆವೈಸಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇ-ಕೆವೈಸಿ ಮಾಡದಿದ್ದಲ್ಲಿ ಸದಸ್ಯತ್ವ ರದ್ದು:

ಒಂದು ವೇಳೆ ಗ್ರಾಹಕರು ಕೊನೆಯ ದಿನಾಂಕದ ಒಳಗಾಗಿ ಇ-ಕೆವೈಸಿ ಮಾಡದಿದ್ದಲ್ಲಿ ಪಡಿತರ ಚೀಟಿಯಲ್ಲಿನ ಸದಸ್ಯತ್ವ ರದ್ದು ಮಾಡಲಾಗುತ್ತದೆ. ಎಂದು ಆಹಾರ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Ration Card ekyc new method-ಇ-ಕೆವೈಸಿ ಮಾಡಿಸಲು ನೂತನ ಕ್ರಮ:

ಪಡಿತರ ಚೀಟಿಯ ಗ್ರಾಹಕರು ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಲು ಬೆರಳಚ್ಚು ಬಾರದೇ ಇದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ OTP ಆಧಾರಿತವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ:ಪವರ್ ಟಿಲ್ಲರ್, ಮಿನಿ ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ!

E-kyc Ration Card-ರೇಷನ್ ಕಾರ್ಡ್ ಗೆ ಇ-ಕೆವೈಸಿ ಎಲ್ಲಿ ಮಾಡಬೇಕು?

ತಮ್ಮ ತಮ್ಮ ಗ್ರಾಮಗಳಲ್ಲಿರುವ ಆಹಾರ ಪಡಿತರ ನ್ಯಾಯ ಬೆಲೆ ಅಂಗಡಿಯಲ್ಲಿ ತಮ್ಮ ಪಡಿತರ ಚೀಟಿಗಳಿಗೆ ಉಚಿತವಾಗಿ ಇ-ಕೆವೈಸಿ (E-kyc Ration Card) ಮಾಡಬಹುದು.

ಇತ್ತೀಚಿನ ಸುದ್ದಿಗಳು

Related Articles