Thursday, November 21, 2024

Pumpset aadhar link-ಕೃಷಿ ಪಂಪಸೆಟ್ ಗೆ ಆಧಾರ್ ಲಿಂಕ್ ಆಗಿಲ್ಲವೇ ಹಾಗಿದ್ದರೇ ನಿಮಗೆ ಈ ಸೌಲಭ್ಯ ಸಿಗುವುದಿಲ್ಲ! ಲಿಂಕ್ ಮಾಡಲು ಏನು ಮಾಡಬೇಕು ಎಲ್ಲಿ ಮಾಡಿಸಬೇಕು ಇಲ್ಲಿದೆ ಮಾಹಿತಿ.

ಕರ್ನಾಟಕ ರಾಜ್ಯ ಸರಕಾರವು ಕೃಷಿ ನೀರಿನ ಪಂಪಸೆಟ್ ಗೆ ಆಧಾರ್ ಲಿಂಕ್ ಮಾಡಿಸಬೇಕು ಎಂದು ಆದೇಶವನ್ನು ಹೊರಡಿಸಿ ಈಗಾಗಲೇ ಎರಡು ತಿಂಗಳು ಸಮಯ ಕಳೆಯಿತು ಅನಿಸುತ್ತೆ. ಆದರೂ ಇನ್ನೂ ಸುಮಾರು ಜನ ರೈತರು ತಮ್ಮ ಕೃಷಿ ಪಂಪಸೆಟ್ ಗೆ ಆಧಾರ್ ಲಿಂಕ್ ಮಾಡದೆ ಬಾಕಿ ಇದ್ದಾರೆ. ಕೃಷಿ ಪಂಪಸೆಟ್ ಆಧಾರ್ ಲಿಂಕ್ ಮಾಡಲು ಏನು ಮಾಡಬೇಕು ಎಲ್ಲಿ ಮಾಡಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು.

ರಾಜ್ಯ ಸರಕಾರದಿಂದ ಕೃಷಿ ಪಂಪಸೆಟ್ ಗೆ ಆಧಾರ್ ಲಿಂಕ್ ಮಾಡಿಸುವುದು ಇದೇ ತಿಂಗಳೂ 25/08/2024 ಕೊನೆಯ ದಿನಾಂಕ ನೀಡಲಾಗಿದೆ. ಹಾಗಾಗಿ ದಿನಾಂಕ 24/08/2024 ಮತ್ತು 25/08/2024 ರಜೆ ದಿನಗಳಾಗಿದ್ದರೂ ಎಸ್ಕಾಂ ಕಛೇರಿಗಳು ರೈತರಿಗೆ ಆದಿನ ಕೃಷಿ ಪಂಪಸೆಟ್ ಗೆ ಆಧಾರ್ ಲಿಂಕ್ ಮಾಡಿಸುವ ಕೆಲಸದ ನಿಮಿತ್ಯ ತೆರೆದಿರುತ್ತವೆ. ಹಾಗಾಗಿ ತಪ್ಪದೇ ಲಿಂಕ್ ಮಾಡಲು ಬಾಕಿ ಇರುವ ಎಲ್ಲಾ ರೈತರು ಈ ಎರಡು ದಿನಗಳಲ್ಲಿ ಕಛೇರಿ ಭೇಟಿ ಮಾಡಿ ಲಿಂಕ್ ಮಾಡಿಸಬಹುದು.

ಒಂದು ವೇಳೆ ನೀವು ಲಿಂಕ್ ಮಾಡದೇ ಬಾಕಿ ಮಾಡಿದಲ್ಲಿ ನಿಮ್ಮ ಕೃಷಿ ಪಂಪಸೆಟ್ ಗೆ ನೀಡುವ ವಿದ್ಯುತ್ತ ಸಂಪರ್ಕವನ್ನು ಕಡಿತಗೊಳಿಸುವ/ಕಟ್ ಮಾಡುವ ಸಾಧ್ಯತೆಗಳು ಇರುವುದರಿಂದ ತಪ್ಪದೇ ಎಲ್ಲಾ ರೈತರು ದಿನಾಂಕ 25/08/2024 ರೊಳಗೆ ಆಧಾರ್ ಲಿಂಕ್ ಮಾಡಿಸಿ.

ಇದನ್ನೂ ಓದಿ:ಪವರ್ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ!

ಸೂಚನೆ: ನಮ್ಮ ಎಲ್ಲಾ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಇರುವ ಭಾವನೆ ಆಧಾರ್ ಲಿಂಕ್ ಮಾಡಿಸದೆ ಇದ್ದರೆ ಏನು ಆಗುದಿಲ್ಲ ಎಂಬ ಭಾವನೆ ಇರುತ್ತದೆ. ಹಾಗೆ ಮಾಡಿ ಬಾಕಿ ಮಾಡಿದಲ್ಲಿ ನಿಮಗೆ ಉಚಿತ ವಿದ್ಯುತ್ತ ಗೃಹ ಜ್ಯೋತಿ ನಿಲ್ಲಬಹುದು ಮತ್ತೆ ಕೃಷಿ ಪಂಪಸೆಟ್ ಗೆ ವಿದ್ಯುತ್ತ್ ಬಿಲ್ ನೀಡಲುಬಹುದು. ಹಾಗೆ ಆಗಲೂ ಬಿಡದೆ ತಪ್ಪದೆ ಆಧಾರ್ ಲಿಂಕ್ ಮಾಡಿಸಿ.

ಕೃಷಿ ಪಂಪಸೆಟ್ ಗೆ ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು?

ದಿನಾಂಕ 25/08/2024 ರೊಳಗೆ ತಮ್ಮ ತಮ್ಮ ಹತ್ತಿರ ಇರುವ ಎಸ್ಕಾಂ ಶಾಖಾಧಿಕಾರಿಗಳ ಕಛೇರಿಗಳನ್ನು ಭೇಟಿ ಮಾಡಿ ಅಥವಾ ಎಸ್ಕಾಂ ಉಪ ಕೇಂದ್ರಗಳಲ್ಲಿ ಹೋಗಿ ಕೃಷಿ ಪಂಪಸೆಟ್ ಗಳಿಗೆ ಆಧಾರ್ ಲಿಂಕ್ ಮಾಡಿಸಿ. ಅಥವಾ ಲೈನ್ ಮೆನ್ ಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ.

ಕೃಷಿ ಪಂಪಸೆಟ್‌ ಗಳಿಗೆ ಆಧಾರ್‌ ಜೋಡಣೆಯ ಉದ್ದೇಶ ಏನು?

1)ಸರಕಾರ ಪ್ರತಿ ವರ್ಷ ಎಸ್ಕಾಂಗಳಿಗೆ ನೀಡುತ್ತಿರುವ ಸಬ್ಸಿಡಿಗೂ ವಿದ್ಯುತ್‌ ಬಳಕೆಗೂ ಹೋಲಿಕೆ  ಆಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳವುದು.

2)ಅಕ್ರಮ ಪಂಪಸೆಟ್‌ ಗಳಿಗೆ ಕಡಿವಾಣ ಹಾಕುವುದು.

ಇದನ್ನೂ ಓದಿ:ಪಹಣಿ/ಆರ್.ಟಿ.ಸಿ ಗೆ ಆಧಾರ್ ಲಿಂಕ್ ಮಾಡಲೂ ಇನ್ನೂ ಅವಕಾಶವಿದೆ! ನಿಮ್ಮದು ಲಿಂಕ್ ಆಗಿದೆಯೇ ಹೀಗೆ ಚೆಕ್ ಮಾಡಿಕೊಳ್ಳಿ.

3)ಸಬ್ಸಿಡಿ ನಿಜವಾದ ಫಲಾನುಭವಿಗೆ ಹೋಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವುದು.

4)ಪಂಪಸೆಟ್‌ ಗಳಿಗೆ ಉಚಿತ ವಿದ್ಯುತ್‌ ಪಡೆಯುತ್ತಿರುವ ಶ್ರೀಮಂತರ ಪತ್ತೆ ಹಚ್ಚಲು ಸುಲಭವಾಗುತ್ತದೆ.

5)ಬೇರೆಯವರ ಹೆಸರಿನಲ್ಲಿರುವ ಕೃಷಿ ಪಂಪಸೆಟ್‌ ಪತ್ತೆ ಹಚ್ಚಲು.

ಇತ್ತೀಚಿನ ಸುದ್ದಿಗಳು

Related Articles