Thursday, November 21, 2024

Crop survey Kharif –ಬಹು ವಾರ್ಷಿಕ ಬೆಳೆಗಳನ್ನು(ಅಡಿಕೆ,ತೆಂಗು,ಕಾಳುಮೆಣಸು,ಕಾಫಿ) ಬೆಳೆಯುವ ರೈತರಿಗೆ ಬಂದಿದೆ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್! ಇಲ್ಲಿದೆ ಲಿಂಕ್‌.

ಹೌದು ರೈತ ಭಾಂದವರೇ ಮುಂಗಾರು ಹಂಗಾಮಿನ -2024ರ ಬೆಳೆ ಸಮೀಕ್ಷೆ ಇವಾಗ ಆರಂಭವಾಗಿದೆ. ಯಾರು ಇನ್ನೂ ಬೆಳೆ ಸಮೀಕ್ಷೆ ಮಾಡದೇ ಬಾಕಿ ಇರುವ ರೈತರು ಆದಷ್ಟು ಬೇಗನೆ  ಸಮೀಕ್ಷೆ ಮಾಡಿಕೊಳ್ಳಿ.

ರಾಜ್ಯ ಸರಕಾರವು ಸುಮಾರು 5- 6 ವರ್ಷಗಳಿಂದ ರೈತರು ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡುವ ಕಾರ್ಯವನ್ನು ಮಾಡುತ್ತಿದೆ. ಅದಕ್ಕಾಗಿ ಪ್ರತಿ ವರ್ಷದಲ್ಲಿ ನಾಲ್ಕು ಬಾರಿ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತದೆ. ಅವು ಪೂರ್ವ ಮುಂಗಾರು ಸಮೀಕ್ಷೆ, ಮುಂಗಾರು ಸಮೀಕ್ಷೆ, ಹಿಂಗಾರು ಸಮೀಕ್ಷೆ, ಬೇಸಿಗೆ ಸಮೀಕ್ಷೆ ಎಂದು ನಾಲ್ಕು ಹಂತಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಮಾಡಲಾಗುತ್ತದೆ.

ಯಾರೂ ಎಲ್ಲಾ ರೈತರು ತಾವು ಬಹುವಾರ್ಷಿಕ ಬೆಳೆಗಳನ್ನು (ಅಡಿಕೆ,ತೆಂಗು, ಬಾಳೆ, ಕೊಕ್ಕೊ, ಕಾಳುಮೆಣಸು. ಕಾಫಿ, ರಬ್ಬರ್,ಗೇರು) ಬೆಳೆದಿದ್ದಿರಾ ಅಂತಹ ರೈತರು ಈಗ ಬಿಡುಗಡೆ ಮಾಡಿರುವ ಮುಂಗಾರು ರೈತರ ಬೆಳೆ ಸಮೀಕ್ಷೆ ಲಿಂಕ್ ಬಳಸಿ ಸಮೀಕ್ಷೆ ಮಾಡಿಕೊಂಡರೆ ಮಾತ್ರ ಪ್ರಯೋಜನಕ್ಕೆ ಬರುತ್ತದೆ.

ಇದನ್ನೂ ಓದಿ:ಪಹಣಿಗೆ ಆಧಾರ್ ಲಿಂಕ್ ಮಾಡಲೂ ಇನ್ನೂ ಅವಕಾಶವಿದೆ. ನಿಮ್ಮ ಆಧಾರ್ ಪಹಣಿಗೆ ಲಿಂಕ್ ಆಗಿದೆಯೇ ನೋಡುವ ಲಿಂಕ್ ಇಲ್ಲಿದೆ!

ಬೆಳೆ ಸಮೀಕ್ಷೆ ಪ್ರಯೋಜನಗಳು:

ಬೆಳೆ ಸಮೀಕ್ಷೆ ಮಾಹಿತಿಯನ್ನು ಪೃಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುವುದು.


Kharif crop survey app: ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವ ವಿಧಾನ:

ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೇ-ಸ್ಟೋರ್ ನಿಂದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಜಮೀನಿಗೆ ಭೇಟಿ ಮಾಡುವ ಮೊದಲು ಮೊದಲಿಗೆ ನೆಟ್ ವರ್ಕ ಇರುವ ಸ್ಥಳದಲ್ಲೇ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ನಿಮ್ಮ ಅಧಾರ್ ವಿವರ ಮತ್ತು ಜಮೀನಿನ ಸರ್ವೆ ನಂಬರ್ ವಿವರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ವಿಧಾನ-1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ farmers kharif crop survey-2024 ಮೊಬೈಲ್ ಅಪ್ಲಿಕೇಶನ್ ಒಪನ್ ಮಾಡಿಕೊಂಡು 3 ರಿಂದ 4 ಬಾರಿ allow ಎಂದು ಒತ್ತಿ ಬಳಿಕ ಕೊನೆಯಲ್ಲಿ “Agree” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ “E-KYC ಮೂಲಕ ಆಧಾರ್ ದೃಡೀಕರಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಸಹಮತಿ ಇದೆ ಎಂದು ಟಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ “ಓಟಿಪಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-2: ತದನಂತರ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ಹಾಕಿ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ  ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ “ಸಕ್ರಿಯಗೊಳಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಸಕ್ರಿಯಗೊಳಿಸಿಕೊಳ್ಳಬೇಕು.

ವಿಧಾನ-3: ಇದಾದ ಬಳಿಕ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ತೋರಿಸುತ್ತವೆ ನಂತರ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “ಬೆಳೆ ವಿವರ ದಾಖಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಪ್ರಸ್ತುತ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.

ಇದನ್ನೂ ಓದಿ:ಕೊಳವೆ ಬಾವಿ ಕೊರೆಸಲು ಡಿ.ದೇವರಾಜ ಅರಸು ನಿಗಮದಿಂದ 4.75 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Crop survey-ಬೆಳೆ ಸಮೀಕ್ಷೆ ವಿವರ ಅಪ್ಲೋಡ್ ಮಾಡುವ ವಿಧಾನ:

ಈ ಮೇಲಿನ ವಿಧಾನವನ್ನು ಅನುಸರಿ ನಿಮ್ಮ ಜಮೀನಿನ ಬೆಳೆ ವಿವರ ದಾಖಲಿಸಿದ ಬಳಿಕ ಕೊನೆಯಲ್ಲಿ “ಅಪ್ಲೋಡ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ ತಪ್ಪದೇ ನೀವು ಮಾಡಿರುವ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಬೇಕು ಇಲ್ಲವಾದಲ್ಲಿ ಈ ವಿವರವು ನಿಮ್ಮ ಮೊಬೈಲ್ ನಲ್ಲೇ ಉಳಿದು ಬಿಡುತ್ತದೆ.

ಬೆಳೆ ಸಮೀಕ್ಷೆಯ ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

Crop survey helpline- 18004253553 ತಾಂತ್ರಿಕ ಮಾಹಿತಿಗೆ.

ಇತ್ತೀಚಿನ ಸುದ್ದಿಗಳು

Related Articles