Saturday, October 5, 2024

Revenue department pension schemes-ಕಂದಾಯ ಇಲಾಖೆಯಿಂದ ಪಿಂಚಣಿ ಬರುವವರು ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲವಾದಲ್ಲಿ ನಿಮ್ಮ ಪಿಂಚಣಿ ಬರುವುದು ನಿಲ್ಲುತ್ತದೆ.

ಕರ್ನಾಟಕ ರಾಜ್ಯ ಸರಕಾರದ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಹಲವು ಪಿಂಚಣಿ ಯೋಜನೆಗಳಿವೆ. ಈ ಪಿಂಚಣಿ ಯೋಜನೆಗಳನ್ನು ಪಿಂಚಣಿ ನಿರ್ದೇಶನಾಲಯದಿಂದ ಸಾರ್ವಜನಿಕರ ಖಾತೆಗೆ ನೇರ ಹಣ ವರ್ಗಾವಣೆ ಮಾಡುತ್ತಾರೆ.

ಕಂದಾಯ ಇಲಾಖೆಯನ್ನು ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ. ಈ ಮಾತೃ ಇಲಾಖೆಯಲ್ಲಿ  BPL ಮತ್ತು APL ಕುಟುಂಬ ಪಡಿತರ ಚೀಟಿ ಹೊಂದಿದವರಿಗೆ ಪ್ರತಿ ತಿಂಗಳು ಪಿಂಚಣಿ ಬರುವ ಸೌಲಭ್ಯಗಳಿವೆ. ಅದಲ್ಲದೆ ಮಳೆಯಿಂದ ಮನೆಗಳು ಬಿದ್ದು ಹೋದಲ್ಲಿ , ಮತ್ತು ಪ್ರಾಕೃತಿಕ ವಿಕೋಪದಿಂದ ಬೆಳೆಗಳಿಗೆ ಹಾನಿ ಆದಲ್ಲಿ ಪರಿಹಾರವನ್ನು ಕಂದಾಯ ಇಲಾಖೆಯಿಂದ ನೀಡಲಾಗುತ್ತದೆ.

ಕಂದಾಯ ಇಲಾಖೆಯಿಂದ ಪಿಂಚಣಿ ಅವುಗಳಿಗೆ ಅರ್ಜಿಸಲ್ಲಿಸಿದವರು ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲವಾದಲ್ಲಿ ನಿಮ್ಮ ಪಿಂಚಣಿ ಬರುವುದು ನಿಲ್ಲುತ್ತದೆ. ಪಿಂಚಣಿ ನಿಲ್ಲದ ಹಾಗೆ ಮಾಡಲು ನಿಮ್ಮ ಬ್ಯಾಂಕ್‌ ಖಾತೆ ಹೊಂದಿರುವ ಬ್ಯಾಂಕ್‌ ಗೆ ಭೇಟಿ ಮಾಡಿ ಬ್ಯಾಂಕ್‌ ಅಕೌಂಟ್‌ ನಂಬರ್‌ ಗೆ (NPCI AADHAR SEEDING) ಆಧಾರ ಸೀಡಿಂಗ್‌ ಮಾಡಿಸಿ.

ಇದನ್ನೂಓದಿ: ಜಾನುವಾರುಗಳಿಗೆ ತಪ್ಪದೇ ಹಾಕಿಸಬೇಕಾದ ಲಸಿಕೆಗಳು ಅದರ ಮಾಹಿತಿ ಇಲ್ಲಿದೆ ನಿಮಗಾಗಿ.

 ಅಕೌಂಟ್‌ ನಂಬರ್‌ ಗೆ (NPCI AADHAR SEEDING) ಆಧಾರ ಸೀಡಿಂಗ್‌ ಮಾಡಿಸದೆ ಇರುವವರಿಗೆ ಪಿಂಚಣಿ ಯೋಜನೆಯ ಹಣ ಅವರ ಖಾತೆಗೆ ಬೀಳುವುದಿಲ್ಲ. ಹಾಗಾಗಿ ಕಡ್ಡಾಯವಾಗಿ ನಿಮ್ಮ ಬ್ಯಾಂಕ್‌ ಗೆ ಭೇಟಿ ಮಾಡಿ ಆಧಾರ್‌ ಸೀಡಿಂಗ್‌ ಮಾಡಿಸಿ.

Revenue department pension schemes-ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಚಾಲನೆಯಲ್ಲಿರುವ ಪಿಂಚಣಿಗಳ ವಿವರ:

1) ಸಂಧ್ಯಾ ಸುರಕ್ಷಾ ಯೋಜನೆ: ರೂ.1200 ತಿಂಗಳಿಗೆ

2) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ: ರೂ.800 ತಿಂಗಳಿಗೆ

3)ಮನಸ್ವಿನಿ ಯೋಜನೆ: ರೂ.800 ತಿಂಗಳಿಗೆ

4)ವಿಧವಾ ಪಿಂಚಣಿ ಯೋಜನೆ: ರೂ.800 ತಿಂಗಳಿಗೆ

5)ಮೈತ್ರಿ ಯೋಜನೆ: ರೂ.800 ತಿಂಗಳಿಗೆ

6)ಅಂಗವಿಕಲರ ಮತ್ತು ಬುದ್ದಿಮಾಂದ್ಯ ಪಿಂಚಣಿ :ರೂ.1400 ತಿಂಗಳಿಗೆ

7)ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ: ರೂ.10000

8)ಎಂಡೋಸಲ್ಪಾನ್‌ ಸಂತ್ರಸ್ತರಿಗೆ ಮಾಸಿಕ ಪಿಂಚಣಿ : ರೂ.2000

9)ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಪಿಂಚಣಿ: ರೂ.800 ತಿಂಗಳಿಗೆ

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ!

Revenue pension beneficiary list-ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ ಸಿಗಲಿದೆ ಪಿಂಚಣಿ ಹಣ:

ಈ ಲಿಂಕ್‌ pension beneficiary list ಮೇಲೆ ಕ್ಲಿಕ್‌ ಮಾಡಿ ಅಧಿಕೃತ ಪಿಂಚಣಿ ನಿರ್ದೇಶನಾಲಯದ ವೆಬ್ಸೈಟ್‌ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮೀಣ/ ನಗರ ಆಯ್ಕೆ ಮಾಡಿಕೊಂಡು  ಬಳಿಕ ನಿಮ್ಮ ಹೋಬಳಿ, ಗ್ರಾಮ ಆಯ್ಕೆ ಮಾಡಿ ಕೆಳಗೆ ಕಾಣುವ Captcha ಕೋಡ ಅನ್ನು ಹಾಕಿ Serach ಬಟನ್‌ ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ. ಆ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ  ಪ್ರತಿ ತಿಂಗಳು ಪಿಂಚಣಿ ಜಮಾ ಆಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles