Friday, September 20, 2024

ಹೊಸ ವೃತ್ತಿ ಆರಂಭಿಸುವ ಆಸಕ್ತರಿಗೆ 100000/-ರೂ ಪ್ರೋತ್ಸಾಹಧನ.ಯಾವ ಸಮುದಾಯಕ್ಕೆ ಈ ಯೋಜನೆಯ ಲಾಭ? ಅರ್ಹತೆಗಳೇನು? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?ದಾಖಲೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

ಹೊಸ ವೃತ್ತಿ ಆರಂಭಿಸುವ ಆಸಕ್ತರಿಗೆ 100000/-ರೂ ಪ್ರೋತ್ಸಾಹಧನ.
ಯಾವ ಸಮುದಾಯಕ್ಕೆ ಈ ಯೋಜನೆಯ ಲಾಭ? ಅರ್ಹತೆಗಳೇನು? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?ದಾಖಲೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

ಆತ್ಮೀಯ ಸ್ನೇಹಿತರೇ ನೀವು ಏನಾದರೂ ಸ್ವಂತ ಉದ್ಯೋಗ ಅಥವಾ ವೃತ್ತಿ ಆರಂಭಿಸಲು ಆಸಕ್ತ ಇದ್ದು ಆರ್ಥಿಕ ತೊಂದರೆ ಇದ್ದರೆ ಅಂತವರಿಗೆ ಸರ್ಕಾರದಿಂದ ಪ್ರೋತ್ಸಹಾಧನವನ್ನು ನೀಡಲಾಗುತ್ತಿದೆ. ಹೌದು 2023-24 ನೇ ಸಾಲಿನಲ್ಲಿ ವೃತ್ತಿ ಪ್ರೋತ್ಸಾಹ 1,00,000/- ಸಾಲದೊಂದಿಗೆ ಅವರ ಜೀವನವನ್ನು ಕಟ್ಟಿಕೊಳ್ಳಲು ಆರ್ಥಿಕ ಸಹಾಯವನ್ನು ನೀಡುತಿದೆ. ಈ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿಯಲ್ಲಿ 50% ಸಾಲ ಮತ್ತು 50% ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡಲಾಗುತ್ತದೆ.

Vrutti Protsaha Loan Scheme 2023 :ಯೋಜನೆ ವಿವರ :

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಡಿ 2023-24 ನೇ ಸಾಲಿನ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ಹಣ್ಣು, ಹಂಪಲು, ಕೋಳಿ ಮತ್ತು ಮೀನು ಮಾರಾಟ, ಎಳನೀರು, ಕಬ್ಬಿನ ಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲ್ಯಾಂಡರಿ, ಡ್ರೈ ಕ್ಲೀನಿಂಗ್, ಹೇರ್ ಡೈಸಿಂಗ್ ಸಲೂನ್, ಬ್ಯೂಟಿ ಪಾರ್ಲರ್, ವಾಟರ್ ವಾಶ್, ಪಂಕ್ಚರ್, ಮೆಕ್ಯಾನಿಕ್ ಶಾಪ್, ದ್ವಿಚಕ್ರ, ತ್ರಿಚಕ್ರ ವಾಹನ ರಿಪೇರಿ, ಬಿದರಿವೇರ್ ಕೆಲಸ, ರೇಷ್ಮೆ ರೀಲಿಂಗ್ ಮತ್ತು ಟ್ವಿಸ್ಟಿಂಗ್, ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ

ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಪಡಿಸಲು ನಿಗಮದಿಂದ ಶೇ.50% ಸಹಾಯಧನದೊಂದಿಗೆ 1ಲಕ್ಷ ರೂ. ಸಾಲವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತಿದೆ ಈ ಯೋಜನೆ ಲಾಭವನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಪಡೆದು ತಮ್ಮ ವೃತ್ತಿಯನ್ನು ಆರಂಭಿಸಬಹುದಾಗಿದೆ.

ಮುಂಗಾರು ಸೂರ್ಯಕಾಂತಿ ಬೆಳೆದ ರೈತರಿಗೆ ಸರ್ಕಾರದಿಂದ 6750/- ರೂ ಬೆಂಬಲ ಬೆಲೆ ನಿಗಧಿ;

Vrutti Protsaha Loan Scheme:ವೃತ್ತಿ ಪ್ರೋತ್ಸಾಹ ಯೋಜನೆಯಡಿ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

ಯಾವ ವೃತ್ತಿ ಆರಂಭಿಸುತ್ತರಿ ಅದರ ಯೋಜನಾ ವರದಿ
ಆಧಾರ್ ಕಾರ್ಡ್
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
ಸ್ವಯಂ ಘೋಷಣೆ ಪತ್ರ
ನಿವಾಸದ ದೃಡೀಕರಣ
ಬ್ಯಾಂಕ್ ಪಾಸ್ ಬುಕ್ ಪ್ರತಿ

2023-24 ನೇ ಸಾಲಿನ ಉಚಿತ ಹೊಲಿಗೆ ಯಂತ್ರ ಮತ್ತು ಪವರ್‍ ಟೂಲ್ಸ ವಿತರಣೆ :

Vrutti protsaha Loan yojane: ಯೋಜನೆಯ ಮಾನದಂಡಗಳು:

  1. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
  2. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  3. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
  4. ಎಲ್ಲಾ ಮೂಲಗಳಿಂದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ನಗರ ಪ್ರದೇಶದಲ್ಲಿ ರೂ.1,03,000/- ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.81,000/- ಗಿಂತ ಕಡಿಮೆಯಿರಬೇಕು.
  5. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ಹುದ್ದೆಯಲ್ಲಿರಬಾರದು.
  6. ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು. ರಾಜ್ಯದಲ್ಲೇ ಅತಿಹೆಚ್ಚು ಬೆಳೆವಿಮೆ ಪರಿಹಾರ ಈ ಜಿಲ್ಲೆಯ ರೈತರಿಗೆ !!!

Vrutti Protsaha Loan Scheme 2023: ಅರ್ಜಿ ಸಲ್ಲಿಸುವ ವಿಧಾನ :


ಈ ಯೋಜನೆಗೆ ಅರ್ಹ ಅಭ್ಯರ್ಥಿಗಳು ಮೇಲೆ ಕಾಣಿಸಿರುವ ಎಲ್ಲಾ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Vrutti Protsaha Loan Scheme 2023 Online Application Link:

ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್: kmdc.karnataka.gov.in,

kmdconline.karnataka.gov.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-10-2023

ಇತರೆ ಯೋಜನೆಗಳ ಬಗ್ಗೆ ಮಾಹಿತಿ:


ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.
ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ರೂ 60,000 ರವರೆಗೆ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!
ಈ ಮೂರು ಯೋಜನೆಯಡಿ ವಿದ್ಯಾರ್ಥಿವೇತನ 2,35,000/- ರೂ ಇಂದೇ ಅರ್ಜಿ ಸಲ್ಲಿಸಿ.
2019 ರ ಹಿಂದಿನ ವಾಹನಗಳಿಗೆ ಈ ನಿಯಮ ಕಡ್ಡಾಯ!!!
ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ
ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ.

ಇತ್ತೀಚಿನ ಸುದ್ದಿಗಳು

Related Articles