Thursday, September 19, 2024

How to Change Phone Number in Ration card:ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಆತ್ಮೀಯ ಓದುಗರೇ ರಾಜ್ಯ ಸರ್ಕಾರ ಕರ್ನಾಟಕದ ಎಲ್ಲಾ BPL (ಬಿಪಿಲ್ ಬಡತನ ರೇಖೆಗಿಂತ ಕೆಳಗೆ) ,ಮತ್ತು APL (ಬಡತನ ರೇಖೆಯ ಮೇಲೆ) ಕಾರ್ಡ ಹೊಂದಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಅಡಿ ಪ್ರತಿ ಮಹಿಳಾ ಅಂದರೆ ಮನೆಯ ಒಡತಿ (ರೇಷನ್ ಕಾರ್ಡ್ ) ಯಾವ ಒಬ್ಬ ಮಹಿಳೆಯ ಹೆಸರಿಗೆ ಇರುತ್ತದೆಯೋ ಆ ಮಹಿಳೆಗೆ 2000/- ರೂ ಗೃಹಲಕ್ಷೀ ಮತ್ತು ಅನ್ನಭಾಗ್ಯ ಯೋಜನೆಯಡಿ 5 kg ಅಕ್ಕಿ ಬದಲು ನೇರ Direct benefit Transfer ಮೂಲಕ ಹಣ ಜಮಾ ಮಾಡುವುದಾಗಿ ಮಾಹಿತಿ ನೀಡಿರುತ್ತದೆ.

ಆ ಒಂದು ಹಣ ಜಮಾ ಆಗಬೇಕಾದರೆ ಎಲ್ಲಾ ಬಡತನ ರೇಖೆಗಿಂತ ಕೆಳಗಿರುವ BPL ಮತ್ತು APL ಕಾರ್ಡ ಹೊಂದಿರುವ ಮಹಿಳೆಯರು ತಮ್ಮ ರೇಷನ್ ಕಾರ್ಡ್‌ಗೆ ಮೊಬೈಲ್ ನಂಬರ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಯಾಕೆಂದರೆ ಅರ್ಜಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಅದರಂತೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಮೊಬೈಲ್‌ ಸಂಖ್ಯೆಗೆ ಅರ್ಜಿ ಸಲ್ಲಿಸಬೇಕಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ಸಂದೇಶ ಬರಲಿದೆ. ಈ ಒಂದು ಕಾರಣಕ್ಕೆ ಜೋಡಣೆ ಅವಶ್ಯಕ.

ಒಂದು ವೇಳೆ ನಿಮಗೆ ಯಾವ ಮೊಬೈಲ್ ನಂಬರ್‍ ಜೋಡಣೆಯಾಗಿದೆ ಅಂತ ತಿಳಿಯದೆ ಇದ್ದರೆ ಅಥವಾ ಜೋಡಣೆಯಾದ ನಂಬರ್‍ ಕಳೆದುಕೊಂಡಿದ್ದರೆ ಯಾವುದೇ ಭಯ ಬೇಡ .

ಇದನ್ನೂ ಓದಿ: ಎಲೆ ಚುಕ್ಕೆ : ಕಡೆಗಣಿಸಿದರೆ ಇಳಿದೀತು ಅಡಿಕೆ ಇಳುವರಿ, ಯಾವ ರೋಗಾಣು ಕಾರಣ, ರೋಗದ ಲಕ್ಷಣಗಳೇನು? ನಿರ್ವಹಣೆ ಹೇಗೆ??

ಹೌದು, ಆತ್ಮೀಯ ಓದುಗರೇ ನಿಮ್ಮ Ration card ಪಡಿತರ ಚೀಟಿಯಲ್ಲಿ ಹಳೆ ಮೊಬೈಲ್‌ ನಂಬರ್‌. ಇದೀಗ ನಿಮ್ಮ ಬಳಿ ಆ ಮೊಬೈಲ್‌ ನಂಬರ್‌ ಉಪಯೋಗಿಸುತ್ತಿಲ ,ಇದೀಗ ಮೊಬೈಲ್‌ ನಂಬರ್‌ ಅನ್ನು ಬದಲಾವಣೆ ಮಾಡಿಸಬೇಕಾದ ಅನಿವಾರ್ಯತೆ ಉಂಟಾಗಿದೆಯೇ ಹಾಗಾದ್ರೆ ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸುವುದು ಹೇಗೆ? ಈ ಗೊಂದಲಕ್ಕೆ ಪರಿಪೂರ್ಣ ಉತ್ತರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೇಷನ್‌ ಕಾರ್ಡ್‌ನಲ್ಲಿರುವ ನಿಮ್ಮ ಮೊಬೈಲ್‌ ನಂಬರ್‌ ಕಳೆದುಹೋಗಿದ್ದು, ನಿಮಗೆ ಯಾವುದೇ ಸಂದೇಶ ಬರುತ್ತಿಲ್ಲ ಎಂದಾದರೆ ನೀವು ನಿಮ್ಮ ನಂಬರ್‌ ಅನ್ನು ಬದಲಾಯಿಸಬೇಕಾದ ಅನಿವಾರ್ಯತೆಯಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ರೇಷನ್‌ ಕಾರ್ಡ್‌ನಲ್ಲಿರುವ ನಿಮ್ಮ ಮೊಬೈಲ್‌ ನಂಬರ್‌ಗೆ ಸಂದೇಶ ಬರುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಕೂಡಲೇ ನೀವು ನಿಮ್ಮ ಮೊಬೈಲ್‌ ನಂಬರ್‌ ಅನ್ನು ರೇಷನ್‌ ಕಾರ್ಡ್‌ ನಲ್ಲಿ ಅಪ್ಡೇಟ್‌ ಮಾಡುವುದು ಸೂಕ್ತವಾಗಿದೆ.

Changing mobile number in ration card complete information step by step: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಬದಲಾಯಿಸುವುದು ಹೇಗೆ? ತಿಳಿಯಿರಿ ?

  • ಹಂತ 1: ಮೊದಲಿಗೆ ರಾಷ್ಟ್ರೀಯ ಆಹಾರ ಭದ್ರತಾ website https://ahara.kar.nic.in ಗೆ ಭೇಟಿ ಕೊಡಿ
  • ಹಂತ 2: ನಾಗರಿಕರ ಕಾರ್ನರ್’ /ಗೆ citizen corner ಅಡಿಯಲ್ಲಿ, ‘ನೋಂದಣಿ/ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ‘ ಬಟನ್ ಕ್ಲಿಕ್ ಮಾಡಿರಿ.
    ಇದೀಗ ಹೊಸ ಪೇಜ್ ತೆರೆಯುವುದು.
  • ಹಂತ 3: ನಂತರ ನಿಮ್ಮ ಮನೆಯ ಮುಖ್ಯಸ್ಥರ ಆಧಾರ್ ಸಂಖ್ಯೆ ಸೇರಿಸಿ
    ಇದಾದ ಮೇಲೆ ಪಡಿತರ ಚೀಟಿ Ration card number ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
  • ಹಂತ 4: ನಂತರ ಪಡಿತರ ಚೀಟಿಯಲ್ಲಿ ನಮೂದಿಸಿರುವಂತೆ ನಿಮ್ಮ ಮನೆಯ ಮುಖ್ಯಸ್ಥನ ಹೆಸರನ್ನು ಟೈಪ್ ಮಾಡಿರಿ
  • ನಂತರ ನಿಮ್ಮ ಮೊಬೈಲ್‌ ನಂಬರ್‌ ಸೇರ್ಪಡೆ ಮಾಡುವ ಆಯ್ಕೆ ಕಾಣಿಸಲಿದೆ
  • ಹಂತ5: ನಂತರ ಇದರಲ್ಲಿ ನಿಮ್ಮ ಹೊಸ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.
  • ಮತ್ತೆ ನೀವು ನಿಮ್ಮ ಮೊಬೈಲ್‌ ನಂಬರ್‌ ಅನ್ನು ಸೇವ್‌ ಮಾಡುವ ಆಯ್ಕೆಯನ್ನು click ಮಾಡಿರಿ.

ಇದನ್ನೂ ಓದಿ: Crop insurance: ಬೆಳೆ ವಿಮೆ ಪರಿಹಾರ ಹೇಗೆ ರೈತರಿಗೆ ದೊರೆಯುವುದು ???

ಇದೆಲ್ಲವೂ ಮುಗಿದ ನಂತರ ನಿಮ್ಮ ಹೊಸ ಮೊಬೈಲ್‌ ನಂಬರ್‌ ರೇಷನ್‌ ಕಾರ್ಡ್‌ Ration card ನಲ್ಲಿ ನೋಂದಣಿಯಾಗಿರಲಿದೆ.

ration card ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮನೆಯ ಸದಸ್ಯರ ಹೆಸರನ್ನುಸೇರ್ಪಡೆಗೊಳ್ಳಿಸುವುದು ಹೇಗೆ ತಿಳಿಯಿರಿ?

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ https://ahara.kar.nic.in/ಗೆ ಲಾಗ್ ಇನ್ Login ಆಗಬೇಕು
  • ನಂತರ ಮೇನ್‌ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿರಿ
  • ಇದೀಗ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ https://ahara.kar.nic.in/lpg/
  • ಅದರ ಮೇಲೆ ಕ್ಲಿಕ್‌ ಮಾಡಿರಿ
  • ತಕ್ಷಣವೇ ನಿಮಗೆ ಹೊಸ ಪೇಜ್‌ ತೆರೆಯಲಿದೆ
  • ನಿಮ್ಮ ಜಿಲ್ಲೆಯ ಅನುಗುಣವಾಗಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿರಿ
  • ಇದರಲ್ಲಿ ಹೊಸ ಸೇರ್ಪಡೆ/ತಿದ್ದುಪಡಿ ಪ್ರತಿಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿರಿ.
  • ಇದೀಗ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿರಿ.
  • ಅಪ್ಲೋಡ್ ಮಾಡಿದ ನಂತರ Form Submit ಕೊಡಿ.

ಇತ್ತೀಚಿನ ಸುದ್ದಿಗಳು

Related Articles