Tuesday, July 1, 2025

ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‍ ಗೆ 1500/- ರೂ ಸಹಾಯಧನಕ್ಕೆ ಅರ್ಜಿ

ತೋಟಗಾರಿಕೆ ಇಲಾಖೆಯಿಂದ ಪ್ರಕಟಣೆ:
ರೈತ ಬಾಂದವರೇ, ನೀವು ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿದ್ದಿರಾ? ಅದರಲ್ಲೂ ಅಡಿಕೆ ಬೆಳೆಯನ್ನು ಬೆಳೆದು ರೋಗಕ್ಕೆ ತುತ್ತುಗಿರುವ ಬೆಳೆಗೆ ರಾಜ್ಯದ ತೋಟಗಾರಿಕೆ ಇಲಾಖೆಯಿಂದ ಪ್ರತಿ ಹೆಕ್ಟೇರ್‍ ಗೆ ಸಹಾಯಧನವನ್ನು ನೀಡಲಾಗುತ್ತಿದೆ. ಈ ಲಾಭ ಪ್ರತಿಯೊಬ್ಬ ರೈತರು ಲಾಭ ಪಡೆಯಲಿ ಎಂಬ ಉದ್ದೇಶದಿಂದ ಇಲಾಖೆ ಹಿರಿಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.

ರೈತ ಬಾಂದವರೇ, ನಮ್ಮ ಕರ್ನಾಟಕ ರಾಜ್ಯದಲ್ಲಿ ಅಡಿಕೆ ಬೆಳೆ ಒಂದು ಪ್ರಮುಖ ಬೆಳೆ. ಅಡಿಕೆಯನ್ನು ನಮ್ಮ ರಾಜ್ಯದ ಕರಾವಳಿ, ಮಲೆನಾಡು, ಮತ್ತು ಫಟ್ಟ ಪ್ರದೇಶ ಮತ್ತು ಮೈದಾನ ಪ್ರದೇಶಗಳಾದ ತುಮಕೂರು, ಚಿತ್ರುದುರ್ಗ, ದಾವಣಗೆರೆ, ಈ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

Areca Nut Varieties :ಕೆಲವು ಮುಖ್ಯವಾದ ತಳಿಗಳು:

ತೀರ್ಥಹಳ್ಳಿ, ದಕ್ಷಿಣ ಕನ್ನಡ, ಶ್ರೀ ವರ್ಧನ, ಮಂಗಳ, ಸುಮಂಗಳ , ಮೋಹಿತ ನಗರ, ಸಿರ್ಸಿ-1, ಸ್ವರ್ಣ ಮಂಗಳ ಇನ್ನೂ ಹಲವು ತಳಿಗಳು ಇರುತ್ತವೆ.

ಈ ಸಹಾಯಧನ ಯಾವ ರೋಗಕ್ಕೆ ನೀಡಲು ಅರ್ಜಿ ಅಹ್ವಾನಿದ್ದಾರೆ? ಆ ರೋಗದ ಬಗ್ಗೆ ಮಾಹಿತಿ ತಿಳಿಯೋಣ ?
Symptoms of areca nut leaf spot disease: ಅಡಿಕೆ ಎಲೆಚುಕ್ಕೆ ರೋಗದ ಲಕ್ಷಣಗಳು:
ಅಡಿಕೆ ಎಲೆಗಳ ಮೇಲೆ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಂಡು ದೊಡ್ಡದಾಗಿ ಕೂಡಿಕೊಂಡು ಎಲೆ ಸುಟ್ಟಂತೆ ಕಂಡು ಬರುತ್ತವೆ,ತೀವ್ರ ಬಾದೆಗೊಳಬಾದ ಎಲೆಗಳು ಒಣಗಿ ಉದುರುತ್ತವೆ.

Improved practices followed in Areca Nut cultivation:

ಅಡಿಕೆ ಬೆಳೆಯಲ್ಲಿ ಅನುಸರಿಸಬೇಕಾದ ಬೇಸಾಯ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿಯನ್ನು ಈ ಕೆಳಗಿನಂತೆ ನೀಡಿರುತ್ತಾರೆ.
1.ಮೇ ತಿಂಗಳಿನಲ್ಲಿ ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಸ್ವಚ್ಛ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು.
2.ಕೆಳಗೆ ಬಿದ್ದಿರುವ ರೋಗ ಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರುಗಳನ್ನು ಆರಿಸಿ ತಗೆದು ಸುಡುವುದು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.
3.ಅಡಿಕೆ ಕೊಯ್ಲಿನ ಸಮಯದಲ್ಲಿ ಒಣಗಿಸಿದ ರೋಗ ಪೀಡಿತ ಹಿಂಗಾರುವನ್ನು ಕಡ್ಡಾಯವಾಗಿ ತಗೆಯುವುದು.
4.ತೋಟದಲ್ಲಿ ಗಾಳಿ ಮತ್ತು ಬೆಳಕು ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.
5.ಮುಂಜಾಗ್ರತಾ ಕ್ರಮವಾಗಿ ಜೂನ್ ತಿಂಗಳಿನಲ್ಲಿ ಶೇ. 1 ರ ಬೋರ್ಡೋ ದ್ರಾವಣದಿಂದ ಗೊನೆ, ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಸೂಕ್ತ 6.ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಿ ದ್ರಾವಣದ ರಸಸಾರ 8 ಇರುವಂತೆ ಜಾಗರೂಕತೆ ವಹಿಸಿಬೇಕು.

7.ದ್ರಾವಣ ಸಿಂಪರಣೆ ಮಾಡುವಾಗ ಸೂಕ್ಷ್ಮ ಹನಿಗಳಾಗಿದ್ದರೆ ಸೂಕ್ತ. ಎಂದು ಉತ್ತರ ಕನ್ನಡ ಜಿಲ್ಲೆ , ಸಿದ್ದಾಪುರ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅತೀ ಮುಖ್ಯವಾದ ಪ್ರಕಟಣೆ !!!

Crop Subsidy:ಹಾಗಿದ್ದರೇ, ಯಾವ ಬೆಳೆಗೆ ಸಹಾಯಧನ ? ಎಷ್ಟೀರುತ್ತೇ ಸಹಾಯಧನ ?

ಈ ಒಂದು ಸಹಾಯಧನವನ್ನು ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿಗೆ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟರ್ಗೆ ರೂ. 1500/- ರಂತೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿರುತ್ತಾರೆ.

(ವಿಶೇಷ ಸೂಚನೆ: ಇದು ಶಿವಮೊಗ್ಗ ಜಿಲ್ಲೆಯಲ್ಲಿ ನೀಡಿರುವ ಮಾಹಿತಿ ಇದೇ ರೀತಿ ಅಡಿಕೆ ಬೆಳೆಯುವ ಪ್ರತಿ ಜಿಲ್ಲೆಗೂ ಈ ಯೋಜನೆ ಇರುದಾಗಿ ಒಮ್ಮೆ ರೈತ ಬಾಂದವರು ವಿಚಾರಿಸಿ.)

ಅರ್ಜಿಗೆ ಬೇಕಾದ ದಾಖಲೆಗಳು:
ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಪಡೆದು,
ಭರ್ತಿ ಮಾಡಿದ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣೆ,
ಆಧಾ‌ರ್ ಕಾರ್ಡ
ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
ಜಾತಿ ಪ್ರಮಾಣ ಪತ್ರದ ಪ್ರತಿ

ಇದನ್ನೂ ಓದಿ: Spices Board: ಅತೀ ಕಡಿಮೆ ದರಕ್ಕೆ ಸಂಬಾರ ಸಸಿಗಳ ಮಾರಾಟ:

Last date: ಕೊನೆಯ ದಿನಾಂಕ:
ಜೂ 30 ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಆಹಾ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು ಜಿಲ್ಲಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವುದು.

ಇದನ್ನೂ ಓದಿ: PM Kisan Scheme Ineligible Beneficiaries: 7 ಲಕ್ಷ ಜನರನ್ನು ಈ ಯೋಜನೆಯಿಂದ ಕೈ ಬಿಟ್ಟ ಸರ್ಕಾರ.!!!

ಇತ್ತೀಚಿನ ಸುದ್ದಿಗಳು

Related Articles