Thursday, September 19, 2024

ಜಲಾನಯನ ಅಭಿವೃದ್ದಿ ಇಲಾಖೆ ವತಿಯಿಂದ Watershed scheme: 20 ಲಕ್ಷ ವರೆಗಿನ ಸಾಲಕ್ಕೆ ಶೇ. 4 % ಬಡ್ಡಿ ಸಹಾಯಧನ ಯೋಜನೆ:

ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕರ ಸಂಸ್ಥೆಗಳ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕಗಳು ನೀಡುವ ತಲಾ ರೂ.20.00 ಲಕ್ಷ ವರೆಗಿನ ಸಾಲಕ್ಕೆ ಶೇ.4 % ಬಡ್ಡಿ ಸಹಾಯಧನ ನೀಡುವ ಯೋಜನೆಯನ್ನು ರಾಜ್ಯದ ಜಲಾನಯನ ಇಲಾಖೆ ರೂಪಿಸಿದೆ.
ಯೋಜನೆಯ ಮಾನದಂಡಗಳು ಮತ್ತು ದಾಖಲಾತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ರೈತ ಉತ್ಪಾದಕರ ಸಂಸ್ಥೆಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಮೌಲ್ಯ ಸರಪಳಿಯ ಪದ್ಧತಿಯನ್ನು ಅಳವಡಿಸುವ ಮೂಲಕ ರೈತರ ಉತ್ಪನ್ನಗಳನ್ನು ಕ್ರೋಡಿಕರಿಸಿ, ಮೌಲ್ಯವರ್ಧಿಸಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಂಸ್ಕರಿಸಿದ ಉತ್ಪನ್ನಗಳನ್ನು ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಒದಗಿಸುವ ಮೂಲಕ ಹಿಂದುಳಿದ ತಾಲ್ಲೂಕುಗಳ ರೈತ ಉತ್ಪಾದಕರ ಸಂಸ್ಥೆಗಳ ಆದಾಯ ವೃದ್ಧಿಸಲು ಸಹಕಾರಿಯಾಗಲು ಸದರಿ ಯೋಜನೆಯನ್ನು ರೂಪಿಸಲಾಗಿರುತ್ತದೆ.

Scheme Eligibility and Criteria: ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತೆ ಮಾನದಂಡಗಳು:

  1. ಅರ್ಜಿಯನ್ನು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಉಪ ಕೃಷಿ ನಿರ್ದೇಶಕರ ಕಛೇರಿ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ರೈತ ಸಂಪರ್ಕ ಕೇಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಿಂದ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಜಾಲತಾಣದಿಂದ Watershed department website ಪಡೆದು, ಭರ್ತಿಮಾಡಿ ನಿಗಧಿಪಡಿಸಿದ ದಿನಾಂಕದೊಳಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸುವುದು.
  2. ರಾಜ್ಯದಲ್ಲಿ ಹಿಂದುಳಿದ ತಾಲ್ಲೂಕಿನಲ್ಲಿ ರಚನೆಗೊಂಡು, ಕಂಪನಿ ಕಾಯ್ದೆ 2013 ಅಡಿಯಲ್ಲಿ ನೋಂದಾಯಿಸಿರಬೇಕು.
  3. ಕನಿಷ್ಠ 600 ರೈತ/ಷೇರುದಾರರನ್ನು ಹೊಂದಿರಬೇಕು.

ಇದನ್ನೂ ಓದಿ: Krishi Bhagya Scheme 2023-24: 100 ಕೋಟಿ ವೆಚ್ಚ ದಲ್ಲಿ “ಕೃಷಿ ಭಾಗ್ಯ” ಯೋಜನೆ ಮರುಜಾರಿ:

  1. 2022-23ನೇ ಸಾಲಿನಲ್ಲಿ ವಾರ್ಷಿಕ ಕನಿಷ್ಠ (ಕೃಷಿ ಪರಿಕರ ವ್ಯಾಪಾರ ಮತ್ತು ಕೃಷಿ ಉತ್ಪನ್ನ ಮಾರಾಟ/ಸಂಸ್ಕರಣೆ ವ್ಯವಹಾರದಿಂದ) ಒಟ್ಟು ರೂ.20.00 ಲಕ್ಷಗಳ ವರೆಗೆ ವ್ಯವಹಾರ ವಹಿವಾಟು ಮಾಡಿರಬೇಕು.
  2. ದಿನಾಂಕ: 01.04.2023ರ ನಂತರ ಯೋಜನೆ (Project) ಘಟಕದ ಮಂಜೂರಾತಿ ಪಡೆದು ಸಹಕಾರಿ ಅಥವಾ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದಿರಬೇಕು.
  3. ಪ್ರತಿ ತ್ರೈಮಾಸಿಕ/ಅರ್ಧವಾರ್ಷಿಕ ಅವಧಿಯೊಳಗೆ ಸಾಲ ಮರುಪಾವತಿ ಕಂತು, ಬಡ್ಡಿ ಸಹಿತ ಪಾವತಿಸಿರಬೇಕು.
  4. ಬಡ್ಡಿ ಪಾವತಿಸದೆ ಉಳಿಸಿಕೊಂಡು ದಂಡದ ಮೊತ್ತಕ್ಕೆ (Penalty Amount) ಸಂಬಂದಿಸಿದಂತೆ, ಬಡ್ಡಿ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ.
  5. 2023-24ನೇ ಸಾಲಿನಲ್ಲಿ ಸಾಲ ಪಡೆದು ಅರ್ಜಿಗಳನ್ನು ಸಲ್ಲಿಸಿದ ರೈತ ಉತ್ಪಾದಕರ ಸಂಸ್ಥೆಗಳು ಪ್ರಸಕ್ತ ಸಾಲಿಗೆ ಮಾತ್ರ ಪರಿಗಣಿಸಲಾಗುವುದು.

ಇದನ್ನೂ ಓದಿ: ಬೆಳೆಹಾನಿ, ಬೆಳೆವಿಮೆ ,ಮತ್ತು ಪಿ ಎಂ ಕಿಸಾನ್ ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

Required Documents: ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

a) ರೈತ ಉತ್ಪಾದಕರ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರದ ಪ್ರತಿ.

b) ವ್ಯಾಪಾರ ವ್ಯವಹಾರ ಅಭಿವೃದ್ದಿಗಾಗಿ ಬ್ಯಾಂಕ್ ಮೂಲಕ ಪಡೆದ ಸಾಲದ ಚಟುವಟಿಕೆಗಳ ವಿಕೃತ ಯೋಜನಾ ವರದಿಯ ಪ್ರತಿ.

c) ಬ್ಯಾಂಕ್ ನಿಂದ ನೀಡಲಾಗಿರುವ ಸಾಲ ಮಂಜೂರಾತಿ ಪ್ರಮಾಣ ಪತ್ರದ ದೃಢೀಕೃತ ಪ್ರತಿ.

d) FPOದ GST,PAN,TAN ಸಂಖ್ಯೆಗಳ ಪ್ರತಿಗಳು.

e) ಸಂಬಂಧಿಸಿದ ಕೃಷಿ ಪರಿಕರ ವ್ಯವಹಾರ ಮತ್ತು ಕೃಷಿ ಉತ್ಪನ್ನ ಮಾರಾಟ/ಸಂಸ್ಕರಣೆ ವ್ಯಾಪಾರ ವ್ಯವಹಾರದ ದಾಖಲಾತಿಗಳ ಸ್ವಯಂ ದೃಡೀಕೃತ ಪ್ರತಿ.

ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಮತ್ತು ರೈತ ಸಂಪರ್ಕ ಕೇಂದ್ರದ ಕಛೇರಿಗಳನ್ನು ಸಂಪರ್ಕಿಸುವುದು ಅಥವಾ ಜಲಾನಯನ ಅಭಿವೃದ್ಧಿ ಇಲಾಖೆಯ ಚಾಲತಾಣ https://watershed.karnataka.gov.in ರಲ್ಲಿ ಮಾಹಿತಿ ಪಡೆಯಬಹುದಾಗಿರುತ್ತದೆ.

ಇದನ್ನೂ ಓದಿ: New Rules of Income Tax: ಮನೆಯಲ್ಲಿ ನಗದು ಎಷ್ಟಿರಬೇಕು? ಆದಾಯ ತೆರಿಗೆಯ ಹೊಸ ರೂಲ್ಸ್ ಹೇಗಿದೆ? ಈ ರೂಲ್ಸ್ ಪಾಲಿಸದ್ದಿದ್ದರೆ ದಂಡ ಜೊತೆಗೆ IT ರೈಡ್ !!

ಇತ್ತೀಚಿನ ಸುದ್ದಿಗಳು

Related Articles