ಆತ್ಮೀಯ ರೈತ ಬಾಂದವರೇ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸದಾ ಮುಂದಿರುವ ವಿಜಯ ಕರ್ನಾಟಕವು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನ್ನದಾತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 200ಕ್ಕೂ ಅಧಿಕ ಮಾದರಿ ರೈತರಿಗೆ Model Farmers ಪುರಸ್ಕಾರ ಮಾಡಲು ರಾಜ್ಯಾದ್ಯಂತ ರೈತ ಸಾಧಕರ ಆಯ್ಕೆ ವಿಕೆ-ಸೂಪರ್ ಸ್ಟಾರ್ ರೈತ 2023-24′ VK-Super star apploication ಪುರಸ್ಕಾರ 6ನೇ ಆವೃತ್ತಿ ಅರ್ಜಿ ಆರಂಭಿಸಿದೆ.
5 ವರ್ಷಗಳಿಂದ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಬಾರಿಯ ಅಭಿಯಾನದಲ್ಲಿ ಪಾಲ್ಗೊಳ್ಳ ಬಯಸುವ ರೈತರು ಅರ್ಜಿ ನಮೂನೆಯಲ್ಲಿ ತಮ್ಮ ವಿವರಗಳನ್ನು ಸ್ಪುಟವಾಗಿ ಬರೆದು, ನಿಮ್ಮ ಸಾಧನೆಯ ಮಾಹಿತಿಯನ್ನು ಪ್ರತ್ಯೇಕ ಹಾಳೆಯಲ್ಲಿ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಿ ಹಾಗೂ ತುಂಬಿದ ಅರ್ಜಿಯ ಫೋಟೊ ತೆಗೆದು ವಾಟ್ಸ್ಆ್ಯಪ್ ಮಾಡಿ ನೋಂದಾಯಿಸಿಕೊಳ್ಳಬಹುದು ಹಾಗೂ ನಿಮ್ಮ ಕೃಷಿಗೆ ಸಂಭಂದಿಸಿದಂತೆ ಕಿರು ವೀಡಿಯೋ ಕೂಡಾ ಕಳುಹಿಸಬಹುದು.
Qualifications: ಪಾಲ್ಗೋಳ್ಳಲು ಅರ್ಹತೆ -ಕೃಷಿ ವಿಭಾಗಗಳು
ಕೃಷಿಯಲ್ಲಿ ಯಶಸ್ಸು ಕಂಡುಕೊಂಡವರು
ಸಾವಯವ ಪದ್ಧತಿಯಲ್ಲಿ ಹಣ್ಣು. ತರಕಾರಿ ಬೆಳೆಯುವವರು
ದೇಸಿ/ಜವಾರಿ ಬೀಜ, ತಳಿ ಸಂರಕ್ಷಣೆಯಲ್ಲಿ ತೊಡಗಿರುವವರು
ಆನ್‌ಲೈನ್ ಅಥವಾ ಸೂಪರ್ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ಪೂರೈಸುವ ಮೂಲಕ ಲಾಭ ಪಡೆದವರು
ರೈತಾಪಿ ಕಂಪನಿ, ಸಂಘಗಳನ್ನು ಸ್ಥಾಪಿಸಿ ಗ್ರಾಹಕರಿಗೆ ನೇರವಾಗಿ ಸರಬರಾಜು ಮಾಡುತ್ತಿರುವವರು
ರೈತ ಸಂತೆ, ಸಾವಯವ, ಸಿರಿಧಾನ್ಯ ಸಂತೆ, ಕೊರಿಯರ್ ಮೂಲಕ ಗ್ರಾಹಕರಿಗೆ ಕೃಷಿ ಉತ್ಪನ್ನ ತಲುಪಿಸುತ್ತಿರುವವರು ತಮ್ಮ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸುವವರು
ಈ ಸಮಗ್ರ ಕೃಷಿ, ಪರ್ಯಾಯ ಕೃಷಿ, ಸುಸ್ಥಿರ ಬೇಸಾಯ. ಮಿಶ್ರ ಬೆಳೆ, ಶೂನ್ಯ ಬಂಡವಾಳದಿಂದ ಕೃಷಿಯಲ್ಲಿ ಲಾಭ ಪಡೆದವರು
ಕೃಷಿ ಯಂತ್ರೋಪಕರಣಗಳ ಹೊಸ ಆವಿಷ್ಕಾರ ಮಾಡಿರುವವರು
ಕಡಿಮೆ ಜಾಗ ಮತ್ತು ಕಡಿಮೆ ನೀರು ಬಳಸಿ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡುಕೊಂಡವರು
ಪಶುಸಂಗೋಪನೆ, ಕೋಳಿ ಸಾಕಣೆ, ಜೇನು ಸಾಕಣೆ, ಮೀನುಗಾರಿಕೆ, ಪುಷ್ಪ ಕೃಷಿ ಮತ್ತಿತರ ಉಪಕಸುಬುಗಳಲ್ಲಿ ಅಭಿವೃದ್ಧಿ ಕಂಡವರು
ರೇಷ್ಮೆ ಮತ್ತು ಹತ್ತಿ ಬೆಳೆಯಲ್ಲಿ ಯಶಸ್ಸು ಪಡೆದ ರೈತರು
ಕೃಷಿ ಸಂಬಂಧಿತ ಸಂಶೋಧನೆಗಳ ಮೂಲಕ ವಿಶೇಷ ಸಾಧನೆ ಮಾಡಿದವರು
Last date for registration : ನೋಂದಣಿಗೆ ಕಡೆಯ ದಿನ:
ಬುಧವಾರ, 20ನೇ ಡಿಸೆಂಬರ್ 2023
ದೂರವಾಣಿ ಸಂಖ್ಯೆ: 7899852930
Address: ಕಳುಹಿಸಬೇಕಾದ ವಿಳಾಸ:
ವಿಜಯ ಕರ್ನಾಟಕ, ಅಕ್ಷರ ಶಾಮ ಬಿಲ್ಡಿಂಗ್, ನಂ. 1-855/2,
ಮೊದಲ ಮಹಡಿ, ಹಳೆ ಜೇವರ್ಗಿ ರಸ್ತೆ, ಕಲಬುರಗಿ- 585102
application form: ಅರ್ಜಿ ನಮೂನೆ
ಇದನ್ನೂ ಓದಿ: free fodder seeds kit: ಪಶು ಇಲಾಖೆಯಿಂದ ಉಚಿತ ಮೇವಿನ ಬೀಜ ವಿತರಣೆ:
ವಿ.ಸೂ: ಹಿಂದಿನ ಆವೃತ್ತಿಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪುರಸ್ಕಾರ ಪಡೆದ ಸಾಧಕ ರೈತರಿಗೆ ಅವಕಾಶವಿರುವುದಿಲ್ಲ.