Friday, September 20, 2024

VARMI COMPOST-ಎರೆಹುಳು ಗೊಬ್ಬರ ಘಟಕ ರಚನೆಗೆ ಗ್ರಾಮ ಪಂಚಾಯತನಿಂದ ರೂ.20000 ಸಾವಿರ ಸಹಾಯಧನ!

ಸಾವಯವ ಕೃಷಿ ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ, ಪ್ರಾಚೀನ ಕಾಲದಿಂದಲೂ ಎರೆಹುಳು ರೈತನ ಮಿತ್ರ ಎಂಬ ಮಾತು ಹೆಚ್ಚು ರೂಢಿಯಲ್ಲಿದೆ. ಏಕೆಂದರೆ ಎರೆಹುಳು ನಿಸರ್ಗದಲ್ಲಿ ನಿರಂತರವಾಗಿ ಮಣ್ಣುನ್ನು ಉಳುಮೆ ಮಾಡಿ ಮಣ್ಣಿನ ಫಲವತ್ತತೆಯನ್ನು  ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಎರೆಹುಳು ಕೃಷಿ ಪದ್ಧತಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕೃಷಿ ಉತ್ಪಾದನೆ ಕೈಗೊಂಡು ಖರ್ಚು ಕಡಿಮೆ ಮಾಡಿ ಮಣ್ಣಿನ ಫಲವತ್ತತೆಯನ್ನು ನಿರಂತರವಾಗಿ ಹೆಚ್ಚಾಗಿಸುತ್ತದೆ.

ಸಾವಯವ ಪದಾರ್ಥಗಳಾದ ದನಕರುಗಳ ಕೊಟ್ಟಿಗೆ ತ್ಯಾಜ್ಯ, ಬೆಳೆ ತ್ಯಾಜ್ಯ, ಗಿಡಮರಗಳ ಹಸಿರು ಎಲೆ, ತಪ್ಪಲು ಹಸಿರು ಗೊಬ್ಬರ, ಕಳೆಕಸಗಳ ತ್ಯಾಜ್ಯ ಇತ್ಯಾದಿ ಮರುಬಳಕೆ ಮಾಡುವುದು ಬಹು ಮುಖ್ಯ ಇವುಗಳನ್ನು ಸಾವಯವ ಗೊಬ್ಬರಗಳ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ.

ಇದನ್ನೂ ಓದಿ:ವಿದ್ಯಾರ್ಥಿಗಳ ಬಸ್‌ ಪಾಸ್‌ ಗೆ ಆನ್ಲೈನ್‌ ಅರ್ಜಿ ಸಲ್ಲಿಕೆ ಆರಂಭ.

ಸಾವಯವ ಗೊಬ್ಬರ ಹಾಗೂ ಎರೆಹುಳ ಗೊಬ್ಬರಗಳ ಉತ್ಪಾದನೆ ಮಾಡಿಕೊಳ್ಳಲು ಗ್ರಾಮ ಪಂಚಾಯತ್‌ಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಎರೆಹುಳ ಗೊಬ್ಬರದ ಜೋಡಿ ತೊಟ್ಟಿ ರಚನೆಗೆ ರೂ.20000 ಸಾವಿರ ಹಣವನ್ನೂ ನೀಡಲಾಗುತ್ತಿದೆ. ಇದಕ್ಕೆ ಗ್ರಾಮ ಪಂಚಾಯತ ನಲ್ಲಿ ಅರ್ಜಿ ಸಲ್ಲಿಸಿ ಕೆಲಸ ಮಾಡಿ ಪಡೆದುಕೊಳ್ಳಬಹುದು.

ಎರೆಹುಳು ಗೊಬ್ಬರ ತಯಾರಿಸುವ ವಿಧಾನಗಳು:

ಗುಂಡಿ ಪದ್ಧತಿ: ಈ ವಿಧಾನದಲ್ಲಿ 3 ರಿಂದ 4 ಮೀಟರ್‌ ಉದ್ದ, 1 ಮೀಟರ್‌ ಅಗಲ, 0.5 ಮೀ ಆಳದ ಗುಂಡಿಗಳನ್ನು ಅತೀ ಕಡಿಮೆ ಖರ್ಚಿನಲ್ಲಿ ಎರೆಹುಳು ಗೊಬ್ಬರ ತಯಾರಿಸುವ  ಪದಧತಿ ಇದೆ.

ನೆಲದ ಮೇಲೆ ತೊಟ್ಟಿ ಪದ್ಧತಿ: ಈ ಪದ್ಧತಿಯಲ್ಲಿ ಇಟ್ಟಿಗೆ ಸಿಮೆಂಟ್‌ನಿಂದ ಅಥವಾ ಸಿಮೆಂಟ್‌ ಬ್ಲಾಕ್‌ಗಳಿಂದ ತೊಟ್ಟಿಗಳನ್ನು ನೆಲದ ಮೇಲೆ ತಯಾರಿಸಬಹುದು. ಎರೆಹುಳು ತೊಟ್ಟಿಗಳನ್ನು 5ಮೀ ಉದ್ದ, 1ಮೀ ಅಗಲ, 0.75ಮೀ ಎತ್ತರದ ತೊಟ್ಟಿಗಳನ್ನು ರಚನೆ ಮಾಡಿಕೊಂಡು ಎರೆಹುಳು ಗೊಬ್ಬರವನ್ನು ಉತ್ಪಾದನೆ ಮಾಡಬಹುದು. ಈ ತೊಟ್ಟಿಯಲ್ಲಿ ಮೊದಲಿಗೆ ಕೃಷಿ ತ್ಯಾಜ್ಯ ವಸ್ತುಗಳಾದ ಅಡಿಕೆ ಸಿಪ್ಪೆ, ತೆಗಿನ ಸಿಪ್ಪೆ, ತೆಂಗಿನ ಗರಿ, ಕಬ್ಬಿನ ರವದಿ, ಜೋಳದ ದಂಟು ಇತ್ಯಾದಿ ಹಾಕಬೇಕು, ನಂತರ ಇದರ ಮೇಲೆ ಸಗಣಿ ಗೊಬ್ಬರ ಹಾಕಬೇಕು, ನಂತರ ಸ್ವಲ್ಪ ಪ್ರಮಾಣದಲ್ಲಿ ಒಳ್ಳೆ ಕೃಷಿ ಮಣ್ಣನ್ನು ಹಾಕಬೇಕು. ಹೀಗೆ ತೊಟ್ಟಿ ತುಂಬುವ ಹಾಗೆ ಸಂಪೂರ್ಣ ಹಾಕಬೇಕು. ನಂತರ ಅದಕ್ಕೆ 1 ರಿಂದ 2 ಕೆ.ಜಿ ಎರೆಹುಳುಗಳನ್ನು ಬಿಡಬೇಕು. ಎರೆಹುಳು ತೊಟ್ಟಿಗೆ ನೆರಳು ಇರುವ ಕಡೆ ಅಥವಾ ನೆರಳು ಪರದೆ, ಚಪ್ಪರ ಮಾಡಬೇಕು. 2ಅಥವಾ3 ದಿನಗಳಿಗೊಮ್ಮೆ ನೀರು ಚಿಮುಕಿಸಬೇಕು ಹಾಗೂ ಶೇ.25-30 ರಷ್ಟು ತೇವಾಂಶ ಇರುವ ಹಾಗೆ ನೋಡಿಕೊಳ್ಳಬೇಕು.

ಎರೆಹುಳು ಮಡಿಗೆ ಬಿಟ್ಟ ನಂತರ 45 ದಿನಗಳಲ್ಲಿ ಮಡಿಯ ಎರೆಹುಳು ಗೊಬ್ಬರ ಶೇಖರಣೆ ಪ್ರಾರಂಭವಾಗಿದ್ದು ಕಾಣುತ್ತದೆ. ಸಾಮಾನ್ಯವಾಗಿ 60-70 ದಿನಗಳಲ್ಲಿ ಎರೆಹುಳು ಗೊಬ್ಬರ ಉತ್ಪಾದನೆಯಾಗಿರುತ್ತದೆ. ಸಾಮಾನ್ಯವಾಗಿ ಒಂದು ಟನ್‌ ಕಳೆ ತ್ಯಾಜ್ಯವನ್ನು ಉಪಯೋಗಿಸಿದರೆ 5-6 ಕ್ವಿಂ. ಎರೆಹುಳ ಗೊಬ್ಬರ ಪಡೆಯಬಹುದು.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್‌ ರಸಗೊಬ್ಬರಗಳ ಬಳಕೆಗೆ ಸೂಚನೆ.

ಎರೆಹುಳ ಗೊಬ್ಬರದಿಂದ ಮಣ್ಣಿಗೆ ಮತ್ತು ಸಸ್ಯಗಳಿಗೆ ಆಗುವ ಪ್ರಯೋಜನಗಳು:

1)ಎರೆಹುಳ ಗೊಬ್ಬರ ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ಪೂರೈಸಿ, ಬೆಳೆ ಸಧೃಡವಾಗಿ ಬೆಳೆಯಲು ಸಹಕಾರಿಯಾಗಿದೆ.

2)ಎರೆಹುಳ ಗೊಬ್ಬರ ಬಳಕೆಯಿಂದ ಬೆಳೆ ಉತ್ಪಾದನೆಯಲ್ಲಿ ಹೆಚ್ಚಳವಲ್ಲದೇ, ಆರೋಗ್ಯಕರ ಮಣ್ನು ಸಂರಕ್ಷಣೆಯಾಗುತ್ತದೆ.

3)ಇದು ಮಣ್ಣಿನ ಕಣಗಳ ರಚನೆ ಹವೆಯಾಡುವಿಕೆ ತೇವಾಂಶ ಸಂಗ್ರಹಣೆ ಮಣ್ಣಿನ ಭೌತಿಕ ಹಾಗೂ ರಸಾಯನಿಕ ಗುಣಧರ್ಮವನ್ನು ವೃದ್ಧಿಸುತ್ತದೆ.

4)ಮಣ್ಣಿನ ರಸಸಾರವನ್ನು ನಿಯಂತ್ರಿಸುತ್ತದೆ.

5) ಮಣ್ಣಿನಲ್ಲಿ ನೀರು ಹಿಡಿಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

6)ಉತ್ತಮ ಗುಣಮಟ್ಟದ ತರಕಾರಿ ಬೆಳೆಯಲು ಸಹಕಾರಿ.

ಇತ್ತೀಚಿನ ಸುದ್ದಿಗಳು

Related Articles