Saturday, October 5, 2024

ಮಳೆ ಮುನ್ಸೂಚನೆ ತಿಳಿಯಲು ಬಳಸಿ ಮೇಘದೂತ್ ಮೊಬೈಲ್ App

ಇಂದಿನ ದಿನಗಳಲ್ಲಿ ಹವಾಮಾನವು ಅತೀ ಶೀಘ್ರವಾಗಿ ಬದಲಾವಣೆ ಕಾಣುತ್ತಿದೆ. ಇದರಿಂದ ರೈತರಿಗೆ ಹಾಗೂ ಸಾಮಾನ್ಯ ಪ್ರಜೆಗಳಿಗೆ ಬಹಳ ತೊಂದರೆಯಾಗುತ್ತಿರುವುದು ಕಾಣುತ್ತಿದ್ದೇವೆ.

ಈ ತೊಂದರೆಗಳನ್ನು ಮನಗಂಡ ರಾಜ್ಯ ಮತ್ತು ಕೇಂದ್ರಸರ್ಕಾರಗಳು ಹವಾಮಾನ ಮುನ್ಸೂಚನಾ ಸೇವೆಯನ್ನು ಪ್ರಾರಂಭಿಸಿದೆ. ಅಲ್ಲದೆ ದಿನ ಕಳೆದಂತೆಲ್ಲಾ ಆಧುನಿಕ ಜಗತ್ತಿನ ಬದಲಾವಣೆ ಪ್ರತಿ ಕ್ಷೆತ್ರಗಳಿಗೂ ಸಹ ಹೊಂದಿಕೊಳ್ಳುತ್ತಿರುವುದು ಅತೀ ವಿರಳವಾಗಿದೆ.

ಇದಕ್ಕೆ ಹವಾಮಾನ ಮುನ್ಸೂಚನಾಕ್ಷೇತ್ರವೂ ಹೊರತಲ್ಲಾ. ಆದ್ದರಿಂದ ಹವಾಮಾನ ಮುನ್ಸೂಚನಾಕ್ಷೇತ್ರದಲ್ಲಿ ಲಭ್ಯ ವಿರುವಂತಹ ನವೀನ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಕ್ರಷಿ ಮಾಡಬಹುದಾಗಿದೆ.

ಸ್ಮಾರ್ಟ್ಪೋನ್ಗಳ ಯುಗದಲ್ಲಿ ಹವಾಮಾನ ಮುನ್ಸೂಚನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕೆಂದು ಭಾರತೀಯ ಹವಾಮಾನ ಇಲಾಖೆಯು ಕ್ರಷಿ ಅನುಸಂಧಾನ ಪರಿಷತ್ನ ಜೊತೆಗೂಡಿ ಹೊಸದಾದ ಮೊಬೈಲ್ಆಫ್ ಅನ್ನು ಬಿಡುಗಡೆಗೊಳಿಸಿದೆ.

ಈ ಅಪ್ಲಿಕೇಶನ್ ನ ಹೆಸರೇ “ಮೇಘದೂತ್ “ ಈ ಅಪ್ಲಿಕೇಶನ್ನಲ್ಲಿ ರೈತರಿಗೆ ಉಪಯೋಗವಾಗುವಂತಹ ಮಾಹಿತಿಗಳು ಲಭ್ಯವಿರುತ್ತದೆ.

ಈ ಆಫ್ನಲ್ಲಿ ಪ್ರಸ್ತುತ ಹವಾಮಾನ ಎಚ್ಚರಿಕೆ (ಅಂದರೆ ದಿಡೀರ್‌ ಆಗುವ ಏರುಪೇರುಗಳ ಬಗ್ಗೆ ತಕ್ಷಣ ಮಾಹಿತಿ ದೊರೆಯುತ್ತದೆ.) ಜೊತೆಗೆ ಹವಾಮಾನ ಅಂಶಗಳಾದ ತಾಪಾಮಾನ ಆದ್ರತೆ, ತೇವಾಂಶ, ಗಾಳಿಯ ದಿಕ್ಸೂಚಿ, ಗಾಳಿಯ ವೇಗ, ಸ್ಥಳಿಯ ಮೋಡದ ಹೊದಿಕೆ ಅಲ್ಲದೆ ಬಹು ಮುಖ್ಯವಾದ ಹವಾಮಾನಾಧಾರಿತ ಬೆಳೆ ಸಲಹೆಗಳು ರೈತರಿಗೆ ಲಭಿಸುತ್ತದೆ.(ಜಿಲ್ಲಾವಾರು).

ಈ ಸಲಹೆಗಳನ್ನು ಪ್ರಸ್ತುತ ಹವಾಗುಣಗಳಿಗೆ ತಕ್ಕಂತೆ ತಯರಿಸಲಾಗುತ್ತದೆ. ಈ ಅಪ್ಲಿಕೇಶನ್ ಭಾರತೀಯ ಹವಾಮಾನ ಇಲಾಖೆಯ ಜಾಲತಾಣಗಳಿಂದ ನೇರ ಸಂಪರ್ಕ ಹೊಂದಿರುತ್ತದೆ.

ಈ-ಅಪ್ಲಿಕೇಶನನ್ನು ಡೌನ್ಲೋಡ್‌ ಮಾಡಿ ಉಪಯೋಗಿಸುವ ಹಂತಗಳು

ಹಂತ-1 : ಮೊದಲಿಗೆ Android Mobile ನಲ್ಲಿ Play store ನಿಂದ “ಮೇಘದೂತ್ “ app ನ್ನು ಡೌನ್ಲೋಡ್‌ ಮಾಡಿಕೊಂಡು ಅನಂತರ ಇನ್ಸ್ಟಾಲ್‌ ಮಾಡಿಕೊಳ್ಳಬೇಕು. ಇನ್ಸ್ಟಾಲ್‌ ಮಾಡಿಕೊಂಡ ನಂತರ ಮುಖಪುಟದಲಿ ಕಾಣುವಂತಹ ಪ್ರಶ್ನೆಗಳಾದ ಮೊಬೈಲ್‌ ನಂಬರ ಮತ್ತು ಬಾಷೆಯನ್ನು ನಮೂದಿಸಿ ಸೈನ್-ಅಪ್ ಬಟನ್ಮೇಲೆ ಕ್ಲಿಕ್‌ ಮಾಡುವುದು. ಇದು ನೋಂದಣಿ ಹಂತವಾಗಿರುತ್ತದೆ.

ಈ ಹಂತದಲ್ಲಿ ಬೇಕಾಗುವ ಮಾಹಿತಿಗಳಾದ ಹೆಸರು, ಮೊಬೈಲ್‌ ಸಂಖ್ಯೆ, ಆದ್ಯತೆಯ ಭಾಷೆ, ಲಿಂಗ, ರಾಜ್ಯ, ಜಿಲ್ಲೆಗಳ ವಿವರವನ್ನುಒದಗಿಸುವುದು.
ಹಂತ-2 : ಈ ಪ್ರಕ್ರಿಯೆಯು ಪೂರ್ಣವಾದ ನಂತರ ನೀವು ಮೇಘದೂತ್ App ನ ಮುಖಪುಟ /ಮುಖ್ಯ ಪುಟಕ್ಕೆ ತಲುಪಿರುತ್ತೀರಿ. ಅನಂತರ ಮುಖಪುಟದ ಎಡತುದಿಯಲ್ಲಿ ಮೂರುಗೆರೆಗಳು ಇರುತ್ತವೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ನೋಂದಣಿಯಾದವರ ಹೆಸರು, IMD ವೆಬ್ಸೈಟ್ನಲ್ಲಿ ಲಗತ್ತಿಸಲಾದ ಬೆಳೆ ಸಲಹೆಗಳು, ನಿಮ್ಮ ನಿಚ್ಚಿನ ಬೆಳೆ ಸಲಹೆಗಳು , ಪ್ರಸ್ತುತ ಹವಾಮಾನ ಮುನ್ಸೂಚನೆ ಅಧಿಸೂಚನೆ ಈ App ನ ಶರತ್ತುಗಳು ಹಾಗೂ ಲಾಗ್ಔಟ್ (ಈ ಬಟನ್ಮೇಲೆ ಕ್ಲಿಕ್‌ ಮಾಡಿದರೆ ಈ App ನಿಂದ ಹೊರಬರುತ್ತೆವೆ.) ಆಯ್ಕೆಗಳಿರುತ್ತವೆ.

ಜೊತೆಗೆ ರೀಪ್ರೆಶ್‌ ಎಂಬ ಆಯ್ಕೆ ಇರುತ್ತದೆ. ಇದರ ಮೇಲೆ ಕ್ಲಿಕ್‌ ಮಾಡಿದಾಗ ಹೊಸದಾಗಿ ಲಗತ್ತಿಸಲಾದ ಮುನ್ಸೂಚನೆ, ಬೆಳೆಸಲಹೆ, ಅಧಿಸೂಚನೆಗಳನ್ನು ತೋರಿಸುತ್ತದೆ. ಅಧಿಸೂಚನೆ ಎಂದರೆ 1 ರಿಂದ 3 ಗಂಟೆಗಳ ಒಳಗೆ ಸಂಭವಿಸುವ ಮಳೆ, ಗಾಳಿ, ಇತ್ಯಾದಿಗಳ ಬಗ್ಗೆ ಮಾಹಿತಿ ಲಭ್ಯವಿರುತ್ತದೆ. ಅದೇ ರೀತಿ ಬೆಳೆಯ ಸಲಹೆಗಳಲ್ಲಿ ಜಿಲ್ಲೆಯ ಪ್ರಮುಖ ಬೆಳೆಗಳ ಬಗ್ಗೆ ಮಾಹಿತಿ ಇರುತ್ತದೆ. ಒಂದು ಬೆಳೆಗೆ ಮುನ್ಸೂಚನೆ ಅನುಗುಣವಾಗಿ ಯಾವ ರೀತಿಯ ಕಾರ್ಯಾಗಳನ್ನು ಕೈಗೊಳ್ಳಬೇಕೆಂದು ತಿಳಿಸಿ ಕೊಟ್ಟಿರುತ್ತಾರೆ ಉದಾ:ಬೆಳೆ ಸಲಹೆಗಳು-ಭತ್ತ


ಹಂತ-3 : ಹಿಂದೆ ಬಂದರೆ ಮುಖ್ಯ ಪುಟಕ್ಕೆ ತಲುಪುತ್ತೇವೆ. ಈ ಮುಖ್ಯ ಪುಟವೇ App ನ ಜೀವಾಧಾರವಾಗಿದೆ. ಇಲ್ಲಿಇರುವ ಆಯ್ಕೆಗಳಲ್ಲಿ ಒಂದಾದ ಹಿಂದಿನ ವಾತಾವರಣ (Past weather) ಎನ್ನುವ ಆಯ್ಕೆ ಕ್ಲಿಕ್‌ ಮಾಡಿದರೆ. ಹಂತ 2 ರಲ್ಲಿ ನೀವು ನಮೂದಿಸಿದ ಜಿಲ್ಲೆಯ ಹಿಂದಿನ 10 ದಿನಗಳ ವಾತಾವರಣದ ಮಾಹಿತಿ ಮಳೆ, ತಾಪಮಾನ, ಆಂದ್ರತೆ, ಗಾಳಿಯ ವೇಗ ಮತ್ತು ದಿಕ್ಕು ಮೂಡದ ಹೊದಿಕೆಯ ಬಗ್ಗೆ ಮಾಹಿತಿ ತಿಳಿದು ಬರುತ್ತದೆ.

ಜೊತೆಗೆ ಯಾವುದೇ ರೀತಿಯ ಹವಾಮಾನ ಸಂಬಂಧಿತ ಎಚ್ಚರಿಕೆಗಳು ಗೋಚರಿಸಿರುತ್ತವೆ. ಅಲ್ಲದೆ ಬೆಳೆ ಸಲಹೆಗಳು ಲಭ್ಯವಿರುತ್ತವೆ (ಬೆಳೆ ಸಲಹೆಗಳು ಈ ಹಂತದಿಂದ ಕಾಣಿಸುತ್ತಿರುತ್ತವೆ.)


ಹಂತ-4 : ತದನಂತರ ಮತ್ತೊಮ್ಮೆ ಮುಖಪುಟಕ್ಕೆ ಹಿಂದುರಿಗಿದಾಗ ಮುನ್ಸುಚನೆ (forecast)ನ ಮೇಲೆ ಕ್ಲಿಕ್‌ ಮಾಡಿದಾಗ ಈ ವಿಭಾಗದಲ್ಲಿ ಮುಂದಿನ ಐದು ದಿನಗಳಿಗೆ ಇರುವಂತಹ ಮುನ್ಸೂಚನೆ ಲಭಿಸುತ್ತದೆ.ಇಲ್ಲಿಯೂ ಸಹ ಹಿಂದೆ ಹೇಳಿದಂತ ಹಹವಾಮಾನದ ಅಂಶಗಳ (ಗರಿಷ್ಠಮತ್ತುಕನಿಷ್ಠತಾಪಾಮಾನ, ಗರಿಷ್ಠಮತ್ತುಕನಿಷ್ಠಆದ್ರತೆ, ಗಾಳಿವೇಗ ಮತ್ತು ದಿಕ್ಕು, ಮಳೆ ಮತ್ತು ಸ್ಥಳಿಯ ಮೊಡದ ಹೊದಿಕೆ)ಬಗ್ಗೆ ಮಾಹಿತಿ ಲಭ್ಯವಿರುತ್ತದೆ.

ಜೊತೆಗೆ ಮುಂದಿನ ಐದು ದಿನಗಳಿಗೆ ಇರುವಂತಹ ಎಚ್ಚರಿಕೆಯೂ ಲಭ್ಯಚಿರುತ್ತದೆ. ಇಲ್ಲಿ ನಾವು ಮುಖ್ಯವಾಗಿ ಗಮನಿಸ ಬೇಕಾದ ಅಂಶವೆಂದರೆ ತಾಪಾಮಾನ, ಗಾಳಿಯವೆಗ, ಮೋಡದ ಹೊದಿಕೆ ಮತ್ತು ಮಳೆಯ ಪ್ರಮಾಣ ತಾಪಮಾನ ಹೆಚ್ಚಿದ್ದಲ್ಲಿ (ಕಾಲಕ್ಕನುಗುಣವಾಗಿ) ಬೆಳೆಗಳಿಗೆ ನೀರನ್ನು ಕೊಡುವುದು.

ಗಾಳಿಯವೇ॑ಗ 10ಕಿ.ಮೀ./ಘ ಹೆಚ್ಚಿದಲ್ಲಿ ಔಷಧಿ ಸಿಂಪಡಣೆಯನ್ನು ಶಾಂತಸಮಯದಲ್ಲಿ (ಮುಂಜಾನೆ ಅಥವಾ ಸಂಜೆ ಸಮಯದಲ್ಲಿ) ಕೈಗೊಳ್ಳುವುದು. ಮೋಡದ ಹೊದಿಕೆಯು 6 ರಿಂದ 8 ರವರೆಗೆ ಇದ್ದರೆ ಅದನ್ನು ಮೋಡ ಕವಿದ ವಾತಾವರಣ ಎಂದು ಹೇಳಲಾಗುತ್ತದೆ. ಮಳೆಯ ಪ್ರಮಾಣವು ಹೆಚ್ಚಿದ್ದರೆ ಕೃಷಿ ಚಟುವಟಿಕೆಗಳನ್ನು ಮುಂದೂಡುವುದು ಸೂಕ್ತ. ಈ ರೀತಿಯಾಗಿ ಇಲ್ಲಿರುವ ಮುನ್ಸೂಚನೆಯನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.


ಹಂತ-5 : ಮುಖಪುಟಕ್ಕೆ ಹಿಂತಿರುಗಿದಾಗ ಶೀಘ್ರ (Quick view) ಎಂಬ ಆಯ್ಕೆಯನ್ನು ಕಾಣುತ್ತೇವೆ. ಅದರ ಮೇಲೆ ಕ್ಲಿಕ್‌ ಮಾಡಿದಾಗ ನಮ್ಮ ದೇಶದ ಯಾವುದೇ ರಾಜ್ಯದ ಜಿಲ್ಲೆಯ ಹವಾನಾನ ಮುನ್ಸೂಚನೆ, ಹಿಂದಿನ 10 ದಿನಗಳ ವಾತಾವರಣವನ್ನು ತಿಳಿದುಕೊಳ್ಳಬಹುದಾಗಿದೆ. ಇಲ್ಲಿ ರಾಜ್ಯ ಹಾಗೂ ಜಿಲ್ಲೆಯ ಹೆಸರನ್ನುಆಯ್ಕೆಮಾಡಿ “ನೋಟ” ಎನ್ನುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿದರೆ ಮೇಲೆ ಹೇಳಿದ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.


ಹಂತ-6 : ನಂತರ ಮುಖಪುಟಕ್ಕೆ ಹಿಂತಿರುಗಿದಾಗ ಸ್ಥಳಗಳನ್ನು ನಿರ್ವಹಿಸಿ (manage location) ಎಂಬ ಆಯ್ಕೆ ಇರುತ್ತದೆ. ಈ ಆಯ್ಕೆಯನ್ನುಆರಿಸಿದಾಗ ನೀವು ಮೊದಲು ನಮೂದಿಸಿ ಜಿಲ್ಲೆಯ ಜೊತೆಗೆ ನಿಮಗೆ ಬೇಕಾದ ಇನ್ನಿತರ ಸ್ಥಳಗಳನ್ನು ಸೇರಿಸಲು ಕೆಳಗೆ ಕಾಣುವಂತಹ ಲೊಕೇಷನ್‌ ಸೇರ್ಪಡೆ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು, ತೆರೆಯ ಮೇಲೆ ಕಾಣುವ ಪ್ರಶ್ನೆಗಳಿಗೆ ಅಂದರೆ ರಾಜ್ಯ ಹಾಗು ಜಿಲ್ಲೆಗಳನ್ನು ನಮೂದಿಸಿ ಸೇರ್ಪಡೆ ಆಯ್ಕೆಯ ಮೇಲೆ ಕ್ಲಿಕ್‌ ಮಾಡತಕ್ಕದ್ದು.

ಎಂದಿನಂತೆ ಮುಖ್ಯಪುಟದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಜಿಲ್ಲೆಯ ಮುನ್ಸೂಚನೆಯನ್ನುಸಹ ಪಡೆಯಬಹುದಾಗಿದೆ. ಈ ಅಪ್ಲಿಕೇಶನನಲ್ಲಿ ವಾರಕ್ಕೆ ಎರಡು ಬಾರಿ (ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ಮಾಹಿತಿಯನ್ನು ನವೀಕರಿಸಿ ಈ Appನಲ್ಲಿ ಲಗತ್ತಿಸಲಾಗಿತ್ತದೆ.

ಮೇಘದೂತ App ನ್ನು ಕೇವಲ ಕೃಷಿ ಮತ್ತು ತೋಟಗಾರಿಕೆಗೆ ಸೀಮಿತವಾಗಿಡದೆ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ಕುರಿಸಾಕಾಣಿಕೆ, ಕೋಳಿಸಾಕಾಣಿಕೆ, ಮೀನುಸಾಕಾಣಿಕೆ ಮತ್ತು ರೇಷ್ಮೆ ಸಾಕಾಣಿಕೆ ಜೊತೆಗೆ ಸಾಮಾನ್ಯ ಸಲಹೆಗಳ (ಮಣ್ಣಿನ ಆರೋಗ್ಯ, ಕೃಷಿ ಇಂಜಿನಿಯರಿಂಗ, ಗೃಹವಿಜ್ಞಾನ, ಅಂತರಬೇಸಾಯ, ಮಳೆನೀರು ಕೊಯ್ಲು ಘಟಕ ಮತ್ತು ಸಸ್ಯಸಂರಕ್ಷಣೆ) ಬಗ್ಗೆ ಉಪಯುಕ್ತಮಾಹಿತಿ ಲಭ್ಯವಿರುತ್ತದೆ.

ಆದ್ದರಿಂದ ರೈತರು ಈ ರೀತಿಯ ಮುಂದುವರಿದ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.

ಈ ಆಫ್ನಲ್ಲಿ ಸಿಗುವ ಮಾಹಿತಿಗಳಾದ ಅಧಿಕೃತ ಮುನ್ಸೂಚನೆ (Nowcasting) ಅನ್ನು ಬಳಸಿಕೊಂಡು ರೈತರು ಬೆಳೆಗಳ ಕೊಯ್ಲು ಮತ್ತು ಸಂಸ್ಕರಣೆ ಬಗ್ಗೆ ನಿರ್ಧರಿಸ ಬುಹುದಾಗಿದೆ. ಹಾಗಾಗಿ ಈ ಆಫ್ನಲ್ಲಿ ಲಭ್ಯವಿರುವ ಬೆಳೆ ಸಲಹೆಗಳ ಮುಖಾಂತರ ರೈತರು ಮಾಹಿತಿಯನ್ನು ಪಡೆಯಬಹುದು. ಆದ್ದರಿಂದ ನಮ್ಮ ರೈತವರ್ಗ ಈ App ನ್ನು ಸಮರ್ಪಕವಾಗಿ ಬಳಸಿಕೊಂಡು ತಮಗಾಗುವ ನಷ್ಟದ ಪ್ರಮಾಣವನ್ನು ತಗ್ಗಿಸಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ಸುದ್ದಿಗಳು

Related Articles