Thursday, November 14, 2024

ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಸುವರ್ಣ ಅವಕಾಶ ತರಬೇತಿಯಲ್ಲಿ ಪಾಲ್ಗೊಳ್ಳಿ ಉಚಿತ ತೆಂಗು ಹತ್ತುವ ಯಂತ್ರ ಪಡೆದುಕೊಳ್ಳಿ.

ಇತ್ತಿಚೀನ ದಿನಮಾನಗಳಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೃಷಿ ಮತ್ತು ತೋಟಗಾರಿಕೆ ಹಾಗೂ ಕೃಷಿಯೇತರ ಇಲಾಖೆಗಳಿಗೆ ಸಂಬಂದ ಪಟ್ಟಂತೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ,
ಕೃಷಿಯನ್ನೇ ಅವಲಂಬನೆಗೊಂಡ ಕೃಷಿ ಕುಟುಂಬದ ಎಷ್ಟು ರೈತರಿಗೆ ಆಧುನಿಕ ತಂತ್ರಜ್ಞಾನದ ಕೊರತೆ ಇರುವುದು ಕಂಡ ಸರ್ಕಾರಗಳು ಇಲಾಖೆಗಳ ಮೂಲಕ ಹೊಸ ಹೊಸ ತಾಂತ್ರಿಕ ಮಾಹಿತಿ ಒದಗಿಸುವುದರ ಜೊತೆಗೆ ,ತರಬೇತಿ ಕೂಡ ಕೊಡುತ್ತಿರುತ್ತಾರೆ.
ಹಾಗೆಯೇ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಆಸಕ್ತ ಯುವಕ ಮತ್ತು ಯುವತಿಯರಿಗೆ ತೆಂಗಿನ ಮರ ಹತ್ತುವ ತರಬೇತಿ ಕಾರ್ಯಕ್ರಮವನ್ನು
ಆಯೋಜಿಸಲಾಗಿರುತ್ತದೆ.

ತರಬೇತಿಗೆ ಅರ್ಹತೆ ಮತ್ತು ಫಲಾನುಭವಿಗಳಿಗೆ ತರಬೇತಿಗೆಯಿಂದ ಉಪಯೋಗಗಳು ತಿಳಿಯೋಣ .

  1. ವಯೋಮಿತಿ 18- 45 ವರ್ಷದ ಒಳಗಿನ ಯುವಕ ಯುವತಿರಿಗೆ ಅವಕಾಶ
  2. 5-6 ದಿನಗಳ ಕಾಲ ತರಬೇತಿ ಕಾರ್ಯಕ್ರಮ ಆಯೋಜಿಸಿಲಾಗಿರುತ್ತದೆ. ಉಚಿತ ವಸತಿ ಮತ್ತು ಭೋಜನ ವ್ಯವಸ್ಥೆ ಇರುತ್ತದೆ.
  3. ತರಬೇತಿ ಪಡೆದ ಫಲಾನುಭವಿಗಳಿಗೆ ಉಚಿತ ಮರ ಹತ್ತುವ ಯಂತ್ರವನ್ನು ಕೊಡಲಾಗುವುದು.
  4. ತರಬೇತಿ ಪಡೆದ ಫಲಾನುಭವಿಗಳಿಗೆ ಒಂದು ವರ್ಷ ಉಚಿತ ವಿಮಾ ಯೋಜನೆಯನ್ನು ಮಾಡಿಕೊಡಲಾಗುದು.
  5. ತರಬೇತಿ ಜನವರಿ 16 -21 ರ ತನಕ ನಡೆಯಲಿರುತ್ತದೆ.
  6. ಹೆಸರು ನೋಂದಯಿಸಲು ದೂರವಾಣಿ ಸಂಖ್ಯೆ.7899367763 ಗೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ.

ವಿ. ಸೂ :ತರಬೇತಿ ಪಡೆದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ತೆಂಗು ರೈತ ಸಂಸ್ಥೆ ಕಡೆಯಿಂದ ನೀರಾ ಯೋಜನೆ ಅಡಿಯಲ್ಲಿ ಉದ್ಯೋಗ ಕಲ್ಪಿಸಲಾಗುವುದು.

ಆಸ್ತಕರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬವುದಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ, ಕೇಂದ್ರ ಕಚೇರಿ ವಿಟ್ಲ, ಸಿಪಿಸಿಆರ್‍ಐ ಬಳಿ, ಮಂಗಳ ಮಂಟಪ, ಪುತ್ತೂರು ರೋಡ, ವಿಟ್ಲ.
ದಕ್ಷಿಣ ಕನ್ನಡ -574243,ಇಮೇಲ್ :southcanarafpc@gmail.com
ದೂರವಾಣಿ : 7338567763,7899367763.
ಈ ಅವಕಾಶವನ್ನು ರೈತರು ಸದುಪಯೋಗ ಪಡೆದುಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ನಿಮ್ಮ ಊರಿನ ಯುವಕ ಮತ್ತು ಯುವತಿಯರಿಗೂ ಮಾಹಿತಿಯನ್ನು ಶೇರ ಮಾಡಲು ವಿನಂತಿಸಿದೆ.

ಇತ್ತೀಚಿನ ಸುದ್ದಿಗಳು

Related Articles