Friday, November 22, 2024

ತೋಟಗಾರಿಕೆ ವಿಶ್ವವಿದ್ಯಾಲಯದಿಂದ ರೈತರ ಮಕ್ಕಳಿಗೆ ಮಾಸಿಕ ಶಿಷ್ಯವೇತನದ ಜೊತೆಗೆ ಉಚಿತ ತೋಟಗಾರಿಕೆ ತರಬೇತಿ.

ಇತ್ತಿಚೀನ ದಿನಮಾನಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಹಲವಾರು ಯೋಜನೆಗಳನ್ನು ನಾವು ನೋಡುತ್ತಿರುತ್ತವೆ, ಸರ್ಕಾರಗಳು ಕೃಷಿ, ತೋಟಗಾರಿಕೆಗೆ ,ಹಾಗೂ ಕೃಷಿ ಸಂಭಂದಿಸಿದ ಇಲಾಖೆಗಳಿಗೆ ಹೆಚ್ಚಿನ ಅನುದಾನ ಜೊತೆಗೆ ರೈತರಿಗೆ ಸಹಾಯಧನ, ಕೃಷಿ ತರಬೇತಿ, ತಂತ್ರಜ್ಞಾನ ಅಳವಡಿಸಿರುವ ಮತ್ತು ಪ್ರಗತಿಪರ ರೈತರಿಗೆ ಹೆಚ್ಚಿನ ಕೃಷಿ,ತೋಟಗಾರಿಕೆ ತರಬೇತಿ ಕೂಡಾ ಇಲಾಖೆಗಳು ನೀಡುತ್ತಿರುತ್ತವೆ.

ಕೆಲವು ದಿನಗಳ ಹಿಂದೆ ಸರ್ಕಾರ ರೈತರ ಮಕ್ಕಳಿಗೆ ರೈತ ವಿದ್ಯಾಸಿರಿ ಎಂಬ ಯೋಜನೆ ಕೂಡಾ ಜಾರಿಗೊಳಿಸಿ ವಿದ್ಯಾರ್ಥಿವೇತನ ಕೂಡಾ ನೀಡಿರುತ್ತದೆ. ಆ ದಿಸೆಯಲ್ಲಿ ರೈತರ ಮಕ್ಕಳಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಲು
ತೋಟಗಾರಿಕೆ ಇಲಾಖೆ ವತಿಯಿಂದ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಆಯೋಜಿಸಲಾಗಿರುತ್ತದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಇಲ್ಲಿ ನೀಡಿರುವ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2022-23ನೇ ಸಾಲಿನ 10 ತಿಂಗಳ ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ತಿಳಿದು, ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಹೊಸ ಪಡಿತರ ಮಳಿಗೆ (ನ್ಯಾಯಬೆಲೆ ಅಂಗಡಿ) ತೆರೆಯಲು ಅರ್ಜಿ ಆಹ್ವಾನ…


ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:

ತೋಟಗಾರಿಕೆ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸ್‌ ಮಾಡಿರಬೇಕು.
ತಂದೆ, ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು.
ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ಪಡೆದುಕೊಳ್ಳಬೇಕು.
11 ಪುರುಷರು ಹಾಗೂ 5 ಜನ ಮಹಿಳೆಯರು ಸೇರಿ 16 ಜನರನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.

ವಯಸ್ಸಿನ ಅರ್ಹತೆಗಳು:


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 18 ರಿಂದ 33 ವರ್ಷದೊಳಗಿರಬೇಕು.
ಇತರೆ ವರ್ಗದ ಅಭ್ಯರ್ಥಿಗಳು 18 ರಿಂದ 30 ವರ್ಷದೊಳಗಿರಬೇಕು.

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ ರೂ.30 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ರೂ.15 ಅನ್ನು ಆಯಾ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರು ಇವರ ಹೆಸರಿನಲ್ಲಿ ಪೋಸ್ಟಲ್ ಆರ್ಡರ್(ಐಪಿಒ) ಅಥವಾ ಡಿಮ್ಯಾಂಡ್ ಡ್ರಾಪ್ಟ್ ಮಾಡಿ, ಅರ್ಜಿ ಜೊತೆಗೆ ಲಗತ್ತಿಸಬೇಕು.

ಅರ್ಜಿ ನಮೂನೆಯನ್ನು ತೋಟಗಾರಿಕೆ ಇಲಾಖೆ ವೆಬ್‌ಸೈಟ್‌ https://horticulturedir.karnataka.gov.in ನಲ್ಲಿ ಅಥವಾ ಹತ್ತಿರದ ತೋಟಗಾರಿಕೆ ಇಲಾಖೆಯಲ್ಲಿ ಮಾರ್ಚ್ 15 ರಿಂದ ದಿನಾಂಕ 16-04-2022 ರವರೆಗೆ ಲಬ್ಯವಿರುತ್ತದೆ.

ಇದನ್ನೂ ಓದಿ : ಬೆಳೆ ಸಮೀಕ್ಷೆ ಮಾಡುವ ಉದ್ದೇಶ ಮತ್ತು ಉಪಯೋಗ? ಬೆಳೆ ತಪ್ಪಾಗಿ ನಮೂದಾಗಿದೆಯೇ? ಮುಂದೆ ಏನು ಮಾಡುವುದು ಸಂಪೂರ್ಣವಾಗಿ ತಿಳಿದುಕೊಳ್ಳಿ…

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-04-2022

ಅಪ್ಲಿಕೇಶನ್‌ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ 18-04-2022ರ ಬೆಳಿಗ್ಗೆ 11 ಗಂಟೆಗೆ ಹಾವೇರಿ ಜಿಲ್ಲಾ ಆಡಳಿತ ಭವನದಲ್ಲಿರುವ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುತ್ತದೆ. ಆಯ್ಕೆಪಟ್ಟಿಯನ್ನು ದಿನಾಂಕ 20-04-2022 ರಂದು ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಆಯಾ ಜಿಲ್ಲೆ ಮತ್ತು ತಾಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ವೆಬ್‌ಸೈಟ್‌ ವಿಳಾಸ : https://horticulturedir.karnataka.gov.in/
ತೋಟಗಾರಿಕೆ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಆಯಾ ಜಿಲ್ಲೆಯ ತೋಟಗಾರಿಕಾ ಸಂಶೋಧನಾ ಕೇಂದ್ರ, ತೋಟಗಾರಿಕೆ ಕಾಲೇಜುಗಳು ಮತ್ತು ತೋಟಗಾರಿಕೆ ಇಲಾಖೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles